KSMCL Recruitment: ಕರ್ನಾಟಕ ಸ್ಟೇಟ್​ ಮಿನರಲ್ಸ್​ನಲ್ಲಿ ಕನ್ಸಲ್ಟೆಂಟ್​​ ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ

ಒಂದು ವರ್ಷದ ಗುತ್ತಿಗೆ ಆಧಾರದ ಹುದ್ದೆ ಇದಾಗಿದ್ದು, ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. 

KSMCL

KSMCL

  • Share this:
    ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ((Karnataka State Minerals Corporation Limited) ​​ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕನ್ಸಲ್ಟೆಂಟ್ ಹುದ್ದೆಗಳ ಭರ್ತಿಗೆ ಸಂಸ್ಥೆ ವಾಕ್​ ಇನ್​ ಇಂಟರ್​ವ್ಯೂ ನಡೆಸಲು ಮುಂದಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬಳಿಕ ಜುಲೈ 14ರಂದು ನಡೆಯುವ ವಾಕ್​ ಇನ್​ ಇಂಟರ್​ವ್ಯೂನಲ್ಲಿ ಭಾಗಿಯಾಗಬಹುದಾಗಿದೆ.

    ಒಂದು ವರ್ಷದ ಗುತ್ತಿಗೆ (Contract) ಆಧಾರದ ಹುದ್ದೆ ಇದಾಗಿದ್ದು, ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಈ ಹುದ್ದೆ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (KSMCL)
    ಹುದ್ದೆಯ ಹೆಸರು: ಸಲಹೆಗಾರ
    ಹುದ್ದೆಗಳ ಸಂಖ್ಯೆ: 2
    ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
    ವೇತನ: 65000-70000 ರೂ. ಪ್ರತಿ ತಿಂಗಳು
























    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನವಯೋಮಿತಿ
    ಭೂವೈಜ್ಞಾನಿಕ ಸಲಹೆಗಾರ1ಭೂಗರ್ಭ ಶಾಸ್ತ್ರದಲ್ಲಿ ಎಂಎಸ್ಸಿ70 ಸಾವಿರ ರೂ ಮಾಸಿಕಗರಿಷ್ಠ 62
    ಸುರಕ್ಷತೆ ಮತ್ತು ಔದ್ಯೋಗಿಕ ಆರೋಗ್ಯ ಸಲಹೆಗಾರ1ಗಣಿಗಾರಿಕೆಯಲ್ಲಿ ಇಂಜಿನಿಯರಿಂಗ್​​​ ಪದವಿ65 ಸಾವಿರ ರೂ ಮಾಸಿಕ23 ರಿಂದ 45 ವರ್ಷದೊಳಗೆ

    ವಯೋಮಿತಿ ಸಡಿಲಿಕೆ:
    ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ ನಿಯಮಗಳ ಪ್ರಕಾರ

    ಆಯ್ಕೆ ಪ್ರಕ್ರಿಯೆ
    ಮೆರಿಟ್ ಪಟ್ಟಿ, ಅನುಭವ ಮತ್ತು ಸಂದರ್ಶನ

    ಪ್ರಮುಖ ದಿನಾಂಕ
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 27 ಜೂನ್ 2022
    ವಾಕ್-ಇನ್ ದಿನಾಂಕ: 14 ಜುಲೈ 2022

    ಸಂದರ್ಶನದ ಸಮಯ

    ಭೂವೈಜ್ಞಾನಿಕ ಸಲಹೆಗಾರ ಹುದ್ದೆಗೆ ಜುಲೈ 14 ಬೆಳಗ್ಗೆ 10.30 ರಿಂದ 12.30ರವರೆಗೆ
    ಸುರಕ್ಷತೆ ಮತ್ತು ಔದ್ಯೋಗಿಕ ಆರೋಗ್ಯ ಸಲಹೆಗಾರ ಹುದ್ದೆಗೆ ಜುಲೈ 14ರಂದು ಮಧ್ಯಾಹ್ನ 2. 30 ರಿಂದ 4.30ರವರೆಗೆ

    ಇದನ್ನು ಓದಿ: ರಾಯಚೂರು ಕೃಷಿ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರು ನೇಮಕಾತಿ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: ksmc.karnataka.gov.in

    ಸೂಚನೆ
    ಅಂಚೆ ಮೂಲಕ ಅಥವಾ ಖುದ್ದಾಗಿ ನೇರ ಸಂದರ್ಶನದ ದಿನಾಂಕದಂದು ಸಲ್ಲಿಸಲಾಗುವ ಅರ್ಜಿಯನ್ನು ಪರಿಗಣಿಸುವುದಿಲ್ಲ.

    ಇದನ್ನು ಓದಿ: ಕೋಲಾರ ಜಿಲ್ಲಾ ಕೋರ್ಟ್​ನಲ್ಲಿದೆ ಕೆಲಸ ಖಾಲಿ; ಎಸ್​​ಎಸ್​ಎಲ್ಸಿ, ಪಿಯುಸಿ ಆಗಿದ್ರೆ ಅರ್ಜಿ ಸಲ್ಲಿಸಿ

    ಸಂದರ್ಶನಕ್ಕೆ ಹಾಜರಾಗುವ ಸ್ಥಳ

    ಜನರಲ್ ಮ್ಯಾನೇಜರ್ (ನಿರ್ವಾಹಕರು ಮತ್ತು ವಿಜಿಲೆನ್ಸ್), ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್, T.T.M.C, A ಬ್ಲಾಕ್, 5 ನೇ ಮಹಡಿ, B.M.T.C ಕಟ್ಟಡ, K.H. ಗೆ ಕಳುಹಿಸಬೇಕಾಗುತ್ತದೆ. ರಸ್ತೆ, ಶಾಂತಿ ನಗರ, ಬೆಂಗಳೂರು - 560027.

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಅರಜಿ ಭರ್ತಿ ಮಾಡಬೇಕು ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು ಸಲ್ಲಿಸಬೇಕು.

    ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸರಿಯಾದ ಪ್ರಮಾಣಪತ್ರ, ಅನುಭವದ ಒರಿಜಿನಲ್​ ಡಾಕ್ಯುಮೆಂಟ್​ನೊಂದಿಗೆ ಹಾಜರಾಗಬೇಕು.

    ಆಯ್ಕೆ ವಿಧಾನ
    ಮೆರಿಟ್​
    ಅನುಭವ
    ನೇರ ಸಂದರ್ಶನದಲ್ಲಿನ ಫಾರ್ಮಮೆನ್ಸ್​​ ಆಧಾರದ ಮೇಲೆ
    Published by:Seema R
    First published: