• Home
  • »
  • News
  • »
  • jobs
  • »
  • Jobs In Hubballi: ಹುಬ್ಬಳ್ಳಿಯಲ್ಲಿದೆ ಬೆಸ್ಟ್ ಉದ್ಯೋಗ; ಇಲ್ಲಿದೆ ಕೆಲಸ, ಪಗಾರಿನ ವಿವರ

Jobs In Hubballi: ಹುಬ್ಬಳ್ಳಿಯಲ್ಲಿದೆ ಬೆಸ್ಟ್ ಉದ್ಯೋಗ; ಇಲ್ಲಿದೆ ಕೆಲಸ, ಪಗಾರಿನ ವಿವರ

ಅಪ್ಲೈ ಮಾಡಿ

ಅಪ್ಲೈ ಮಾಡಿ

KSLU Recruitment 2022 : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಅಕ್ಟೋಬರ್ 2022 ರ KSLU ಅಧಿಕೃತ ಅಧಿಸೂಚನೆಯ ಮೂಲಕ 13 ಸಹಾಯಕ ಪ್ರಾಧ್ಯಾಪಕರು ಮತ್ತುಅತಿಥಿ ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 

  • News18 Kannada
  • Last Updated :
  • Hubli-Dharwad (Hubli), India
  • Share this:

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು (KSLU Recruitment 2022) ಸಹಾಯಕ ಪ್ರಾಧ್ಯಾಪಕರು (Assistant Professor) ಮತ್ತು ಅತಿಥಿ ಅಧ್ಯಾಪಕರ (Guest faculty) ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹುಬ್ಬಳ್ಳಿ ( Hubballi) ಕರ್ನಾಟಕ ಸರ್ಕಾರದಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನವೆಂಬರ್‌ 03 ರ ಮುಂಚಿತವಾಗಿ ಆಫ್‌ಲೈನ್ (Offline)‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಸಹಾಯಕ ಪ್ರಾಧ್ಯಾಪಕರು, ಅತಿಥಿ ಅಧ್ಯಾಪಕ
ಸಂಸ್ಥೆಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU)
ಉದ್ಯೋಗ ಸ್ಥಳಹುಬ್ಬಳ್ಳಿ
ವಿದ್ಯಾರ್ಹತೆಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ
ಅರ್ಜಿ ಸಲ್ಲಿಕೆಇಲ್ಲಿ ಕ್ಲಿಕ್ ಮಾಡಿ
ಆರಂಭ ದಿನಾಂಕ14-10-2022
ಕೊನೆ ದಿನಾಂಕ03-ನವೆಂಬರ್-2022
ಸಂಬಳರೂ.25000-50000/- ಪ್ರತಿ ತಿಂಗಳು

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಅಕ್ಟೋಬರ್ 2022 ರ KSLU ಅಧಿಕೃತ ಅಧಿಸೂಚನೆಯ ಮೂಲಕ 13 ಸಹಾಯಕ ಪ್ರಾಧ್ಯಾಪಕರು ಮತ್ತುಅತಿಥಿ ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.


ಇದನ್ನೂ ಓದಿ: 990 ಸೈಟಿಂಸ್ಟ್​ ಹುದ್ದೆ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ


ಹುದ್ದೆಗಳ ವಿವರ: 

ಹುದ್ದೆವೇತನ
ಸಹಾಯಕ ಪ್ರಾಧ್ಯಾಪಕರೂ.50000 ತಿಂಗಳಿಗೆ
ಅತಿಥಿ ಅಧ್ಯಾಪಕರೂ.150-525 ಗಂಟೆಗೆ
ಸಹಾಯಕ ಪ್ರೋಗ್ರಾಮರ್ರೂ.25000/- ಪ್ರತಿ ತಿಂಗಳು

ಪ್ರಮುಖ ದಿನಾಂಕ:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-10-2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-ನವೆಂಬರ್-2022
ಸಂದರ್ಶನದ ದಿನಾಂಕ: 08-11-2022 11:00 ಮಧ್ಯಾಹ್ನ


ವಯೋಮಿತಿ:
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು KSLU ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರ ಬೇಕು.


ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ಇದನ್ನೂ ಓದಿ: ಬೆಸ್ಕಾಂನಲ್ಲಿ 400 ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನ


ಅಧಿಕೃತ ವೆಬ್‌ಸೈಟ್: kslu.karnataka.gov.in


ಆಪ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ:


ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ದಾಖಲೆಗಳೊಂದಿಗೆ
ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್‌ಗಳ ಮೂಲಕ ಪೋಸ್ಟ್ ಮಾಡಬಹುದು.


ವಿಳಾಸ:
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ,
ನವನಗರ, ಹುಬ್ಬಳ್ಳಿ-580025 ಇವರಿಗೆ
ನವೆಂಬರ್ 03, 2022ರ ಮೊದಲು ಕಳುಹಿಸಬೇಕು.

First published: