KRCL Recruitment 2021: ಮಾಸಿಕ ವೇತನ ₹ 30,000, ಕೊಂಕಣ ರೈಲ್ವೆಯಲ್ಲಿ BE, B Tech ಪಾಸಾದವರಿಗೆ ಉದ್ಯೋಗ

ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 25 ವರ್ಷ ಮೀರಿರಬಾರದು.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

  • Share this:
KRCL Recruitment 2021: ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್(Konkan Railway Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 18 ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್(Junior Technical Assistant) ಹುದ್ದೆಗಳು ಖಾಲಿ ಇದ್ದು, ಬಿಇ, ಬಿ.ಟೆಕ್(B.E, B Tech)​ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ನೇರ ಸಂದರ್ಶನದ(Walk-in-Interview) ಮೂಲಕ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 13ರಿಂದ 17ರವರೆಗೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಸಂದರ್ಶನಕ್ಕೆ ಪಾಲ್ಗೊಳ್ಳುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್
ಹುದ್ದೆಯ ಹೆಸರುಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್
ಒಟ್ಟು ಹುದ್ದೆಗಳು18
ವಿದ್ಯಾರ್ಹತೆಬಿಇ, ಬಿ. ಟೆಕ್
ಉದ್ಯೋಗದ ಸ್ಥಳಜಮ್ಮು
ವೇತನಮಾಸಿಕ ₹ 30,000
ಆಯ್ಕೆ ವಿಧಾನಸಂದರ್ಶನ
ಸಂದರ್ಶನ ನಡೆಯುವ ದಿನಾಂಕಡಿಸೆಂಬರ್ 13ರಿಂದ 17, 2021ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ದಿನಾಂಕ: 22/11/2021
ಸಂದರ್ಶನ ನಡೆಯುವ ದಿನಾಂಕ: ಡಿಸೆಂಬರ್ 13ರಿಂದ 17, 2021

ಇದನ್ನೂ ಓದಿ: ESIC Kalaburgi Recruitment 2021: ತಿಂಗಳಿಗೆ 1 ಲಕ್ಷ ರೂ. ಸಂಬಳ, ESIC ಕಲಬುರ್ಗಿಯಲ್ಲಿ ಪ್ರೊಫೆಸರ್ ಹುದ್ದೆಗಳು ಖಾಲಿ

ಹುದ್ದೆಯ ಮಾಹಿತಿ:

ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- 18 ಹುದ್ದೆಗಳು
SC-03
ST-02
ಒಬಿಸಿ-04
ಸಾಮಾನ್ಯ-09

ವಿದ್ಯಾರ್ಹತೆ:

ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಬಿಇ/ ಬಿ.ಟೆಕ್​ ಪೂರ್ಣಗೊಳಿಸಿರಬೇಕು. ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಿಕಲ್​ & ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ & ಟೆಲಿಕಮ್ಯುನಿಕೇಷನ್/ ಕಮ್ಯುನಿಕೇಷನ್/ ಇನ್ಸ್ಟುಮೆಂಟೇಶನ್ ವಿಭಾಗದಲ್ಲಿ ಶೇ.60ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ವಯೋಮಿತಿ:

ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 25 ವರ್ಷ ಮೀರಿರಬಾರದು.
SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ,
ಒಬಿಸಿ ಅಭ್ಯರ್ತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ವೇತನ:

ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 30,000 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:

USBRL ಪ್ರಾಜೆಕ್ಟ್​ ಹೆಡ್​ ಆಫೀಸ್
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್
ಸತ್ಯಂ ಕಾಂಪ್ಲೆಕ್ಸ್​
ಮಾರ್ಬಲ್ ಮಾರ್ಕೆಟ್ ಬಡಾವಣೆ- ತ್ರಿಕೂಟ ನಗರ
ಜಮ್ಮು
ಜಮ್ಮು & ಕಾಶ್ಮೀರ-180011

ಇದನ್ನೂ ಓದಿ: CCL Recruitment 2021: 10th, 12th, ITI ಪಾಸಾದವರಿಗೆ ಸೆಂಟ್ರಲ್ ಕೋಲ್​ಫೀಲ್ಡ್ಸ್​​ನಲ್ಲಿ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ

ಸಂದರ್ಶನದ ದಿನಾಂಕ:

SC/ST/OBC ಅಭ್ಯರ್ಥಿಗಳಿಗೆ ಡಿಸೆಂಬರ್ 13 & 14ರಂದು ಸಂದರ್ಶನ ನಡೆಯಲಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಡಿಸೆಂಬರ್ 15-17ರವರೆಗೆ ಸಂದರ್ಶನ ನಡೆಯಲಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: