KPTCL Recruitment 2022: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(Karnataka Power Transmission Corporation) ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದ್ದು, ಅಭ್ಯರ್ಥಿಗಳಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಿದೆ. ಈ ಮೊದಲು ಫೆಬ್ರವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಈಗ ಮಾರ್ಚ್ 7ರವರೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾರ್ಚ್ 9 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕವಾಗಿದೆ. ಫೆಬ್ರವರಿ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಒಟ್ಟು 1492 ಜೂನಿಯರ್ ಎಂಜಿನಿಯರ್(ಜೆಇ), ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು kptcl.karnataka.gov.in ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ |
ಹುದ್ದೆಯ ಹೆಸರು |
ಜೂನಿಯರ್ ಎಂಜಿನಿಯರ್(ಜೆಇ), ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್) |
ಒಟ್ಟು ಹುದ್ದೆಗಳು |
1492 |
ವಿದ್ಯಾರ್ಹತೆ |
ಬಿಇ/ಬಿ.ಟೆಕ್, ಪದವಿ, 12ನೇ ತರಗತಿ |
ವೇತನ |
ಮಾಸಿಕ ₹ 20,220 - 72,920 |
ಉದ್ಯೋಗದ ಸ್ಥಳ |
ಕರ್ನಾಟಕ |
ಅರ್ಜಿ ಸಲ್ಲಿಕೆ ಬಗೆ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
07/02/2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
07/03/2022 |
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಎಂಜಿನಿಯರ್(ಎಲೆಕ್ಟ್ರಿಕ್)- 505
ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್)- 28
ಜೂನಿಯರ್ ಎಂಜಿನಿಯರ್(ಎಲೆಕ್ಟ್ರಿಕ್)- 570
ಜೂನಿಯರ್ ಎಂಜಿನಿಯರ್(ಸಿವಿಲ್)- 29
ಜೂನಿಯರ್ ಅಸಿಸ್ಟೆಂಟ್- 360
ಒಟ್ಟು -1492 ಹುದ್ದೆಗಳು
ಇದನ್ನೂ ಓದಿ: SAIL Recruitment 2022: PUC, ITI, ಡಿಪ್ಲೊಮಾ ಪಾಸಾದವರಿಗೆ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಉದ್ಯೋಗ
ವಿದ್ಯಾರ್ಹತೆ:
ಅಸಿಸ್ಟೆಂಟ್ ಎಂಜಿನಿಯರ್(ಎಲೆಕ್ಟ್ರಿಕ್)- ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್
ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್)- ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್
ಜೂನಿಯರ್ ಎಂಜಿನಿಯರ್(ಎಲೆಕ್ಟ್ರಿಕ್)- ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿಡಿಪ್ಲೋಮಾ
ಜೂನಿಯರ್ ಎಂಜಿನಿಯರ್(ಸಿವಿಲ್)- ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ
ಜೂನಿಯರ್ ಅಸಿಸ್ಟೆಂಟ್- ಪಿಯುಸಿ
ವಯೋಮಿತಿ:
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ಎಂಜಿನಿಯರ್(ಜೆಇ), ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-35 ವರ್ಷದೊಳಗಿರಬೇಕು.
ವಯೋಮಿತಿ ಸಡಿಲಿಕೆ:
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, SC/ST/ ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ:
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ಎಂಜಿನಿಯರ್(ಜೆಇ), ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಸಾಮಾನ್ಯ, ಪ್ರವರ್ಗ-1, ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳೊಗೆ 600 ರೂ. ಅರ್ಜಿ ಶುಲ್ಕ
SC/ST ಅಭ್ಯರ್ಥಿಗಳಿಗೆ 350 ರೂ. ಅರ್ಜಿ ಶುಲ್ಕ.
PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್
ಇದನ್ನೂ ಓದಿ:CGA recruitment 2022: 590 ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ವೇತನ:
ಅಸಿಸ್ಟೆಂಟ್ ಎಂಜಿನಿಯರ್(ಎಲೆಕ್ಟ್ರಿಕ್)- ಮಾಸಿಕ ₹41,130-72,920
ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್)- ಮಾಸಿಕ ₹41,130-72,920
ಜೂನಿಯರ್ ಎಂಜಿನಿಯರ್(ಎಲೆಕ್ಟ್ರಿಕ್)- ಮಾಸಿಕ ₹ 26,270-65,020
ಜೂನಿಯರ್ ಎಂಜಿನಿಯರ್(ಸಿವಿಲ್)- ಮಾಸಿಕ ₹ 26,270-65,020
ಜೂನಿಯರ್ ಅಸಿಸ್ಟೆಂಟ್- ಮಾಸಿಕ ₹20,220-51,640
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಕನ್ನಡ ಭಾಷಾ ಪರೀಕ್ಷೆ
ಆಪ್ಟಿಟ್ಯೂಡ್ ಟೆಸ್ಟ್
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/03/2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 09/03/2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ