KPSC Recruitment: ಕರ್ನಾಟಕ ಲೋಕಸೇವಾ ಆಯೋಗವು ( Karnataka Public Service Commission) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ (Department Of Rural Drinking Water & Sanitation) ಖಾಲಿ ಇರುವ ಸಹಾಯಕ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ಹಲವಾರು ಜನರ ಕನಸು. ಅದಕ್ಕಾಗಿ ಹಲವಾರು ಪ್ರಯತ್ನವನ್ನು ಸಹ ಮಾಡುತ್ತಾರೆ. ಇಂತಹ ಉದ್ಯೋಗಾಕಾಂಕ್ಷಿಗಳಿಗೆ ನಿಜಕ್ಕೂ ಇದೊಂದು ಉತ್ತಮ ಅವಕಾಶವಾಗಿದ್ದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಲು ನಾಳೆ ಕೊನೆಯ ದಿನವಾಗಿದ್ದು, ತಡ ಮಾಡದೇ ಬೇಗ ಅರ್ಜಿ ಹಾಕಿ.
ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ...
ಸಂಸ್ಥೆ |
ಲೋಕ ಸೇವಾ ಆಯೋಗ |
ಇಲಾಖೆಯ ಹೆಸರು |
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ |
ಹುದ್ದೆಗಳ ಸಂಖ್ಯೆ |
188 |
ಉದ್ಯೋಗ ಸ್ಥಳ |
ಕರ್ನಾಟಕ |
ಹುದ್ದೆಯ ಹೆಸರು |
ಸಹಾಯಕ ಎಂಜಿನಿಯರ್ (ಗ್ರೇಡ್-1) |
ವೇತನ |
ರೂ.43100-83900/- ಪ್ರತಿ ತಿಂಗಳು |
ಶೈಕ್ಷಣಿಕ ಅರ್ಹತೆ |
ಸಿವಿಲ್ / ಪರಿಸರದಲ್ಲಿ B.E |
ವಯೋಮಿತಿ |
ಗರಿಷ್ಠ 35 ವರ್ಷ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
18 ಏಪ್ರಿಲ್ 2022 |
ಅರ್ಜಿ ಸಲ್ಲಿಸುವ ಲಿಂಕ್ |
ಇಲ್ಲಿ ಕ್ಲಿಕ್ ಮಾಡಿ |
ಕರ್ನಾಟಕ ಲೋಕಸೇವಾ ಆಯೋಗವು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 188 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮಾರ್ಚ್ 31 ರಿಂದ ಏಪ್ರಿಲ್ 18ರವರೆಗೆ ವಿಸ್ತರಿಸಲಾಗಿತ್ತು. ಹಾಗಾಗಿ ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದ್ದು, ಬೇಗ ಅರ್ಜಿ ಹಾಕುವುದು ಉತ್ತಮ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್ / ಪರಿಸರದಲ್ಲಿ B.E ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.43100-83900/- ವೇತನ ನೀಡಲಾಗುತ್ತದೆ.
ಇಲಾಖೆಯ ಹೆಸರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಹುದ್ದೆಗಳ ಸಂಖ್ಯೆ: 188
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಯ ಹೆಸರು: ಸಹಾಯಕ ಎಂಜಿನಿಯರ್ (ಗ್ರೇಡ್-1)
ವೇತನ: ರೂ.43100-83900/- ಪ್ರತಿ ತಿಂಗಳು
ವಯೋಮಿತಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು 30-03-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು.
ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 40 ಸಾವಿರ ಸಂಬಳ
ಶೈಕ್ಷಣಿಕ ಅರ್ಹತೆ: KPSC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಸಿವಿಲ್ / ಪರಿಸರದಲ್ಲಿ B.E ಪೂರ್ಣಗೊಳಿಸಿರಬೇಕು.
ವಯಸ್ಸಿನ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳು: 05 ವರ್ಷಗಳು
Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಕನ್ನಡ ಭಾಷಾ ಪರೀಕ್ಷೆ,
ಸ್ಪರ್ಧಾತ್ಮಕ ಪರೀಕ್ಷೆ,
ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ
ಅರ್ಜಿ ಶುಲ್ಕ:
SC/ST/Cat-I/PH ಅಭ್ಯರ್ಥಿಗಳು: ಶುಲ್ಕವಿಲ್ಲ
ಕ್ಯಾಟ್-2ಎ/2ಬಿ/3ಎ ಮತ್ತು 3ಬಿ ಅಭ್ಯರ್ಥಿಗಳು: ರೂ.300/-
ಸಾಮಾನ್ಯ ಅಭ್ಯರ್ಥಿಗಳು: ರೂ.600/-
ಎಲ್ಲಾ ಅಭ್ಯರ್ಥಿಗಳಿಗೆ ಸಂಸ್ಕರಣಾ ಶುಲ್ಕ: ರೂ.35/-
ಪಾವತಿ ವಿಧಾನ: ಆನ್ಲೈನ್
ಪ್ರಮುಖ ದಿನಾಂಕಗಳು
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28-02-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18ನೇ ಏಪ್ರಿಲ್ 2022 ವರೆಗೆ ವಿಸ್ತರಿಸಲಾಗಿದೆ.
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್:
kpsc.kar.nic.in
ಅರ್ಜಿ ಸಲ್ಲಿಸುವ ಲಿಂಕ್ :
https://www.kpscrecruitment.in/RPS/Home.aspx
ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ
ಕೇಂದ್ರ ಕಚೇರಿ ಮಾಹಿತಿ ಕೇಂದ್ರ: 080-30574957/ 30574901
ಪ್ರಾಂತೀಯ ಕಛೇರಿ ಮೈಸೂರು: 0821-2545956
ಪ್ರಾಂತೀಯ ಕಛೇರಿ ಬೆಳಗಾವಿ: 0831-2475345
ಪ್ರಾಂತೀಯ ಕಛೇರಿ ಕಲಬುರಗಿ: 08472-227944
ಪ್ರಾಂತೀಯ ಕಛೇರಿ ಶಿವಮೊಗ್ಗ: 08182-228099
ಸಹಾಯವಾಣಿ ಸಂಖ್ಯೆ: 18005728707
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ