KPSC Recruitment: 60 ಸಹಾಯಕ ನಗರ ಯೋಜಕರು​ ಹುದ್ದೆ ನೇಮಕಾತಿ; ಡಿಪ್ಲೊಮಾ ಆದವರಿಗೆ ಅವಕಾಶ

ಆನ್​ಲೈನ್​ ಮೂಲಕ ಸೂಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ. 31 ಆಗಿದೆ.

ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

  • Share this:
    ಕರ್ನಾಟಕ ಲೋಕಸೇವಾ ಆಯೋಗ (KPSC) ಗ್ರೂಪ್ ಸಿ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.  ಒಟ್ಟು 60 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ಸಹಾಯಕ ನಗರ ಯೋಜಕರು (ATP) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆನ್​ಲೈನ್​ ಮೂಲಕ ಸೂಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ. 31 ಆಗಿದೆ.

    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.























    ಹುದ್ದೆಗಳುವಿವರಗಳು
    ಸಂಸ್ಥೆಕೇಂದ್ರ ಲೋಕಸೇವಾ ಆಯೋಗ
    ಹುದ್ದೆ ಹೆಸರುಸಹಾಯಕ ನಗರ ಯೋಜಕರು​
    ವೇತನ33, 450ರಿಂದ 62,600ರೂ ಮಾಸಿಕ
    ವಿದ್ಯಾರ್ಹತೆ

    ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ ಸಿವಿಲ್‌ನಲ್ಲಿ ಡಿಪ್ಲೊಮಾ ಹೊಂದಿರಬೇಕು.

    ಮಾನ್ಯತೆ ಪಡೆದ ಪಾಲಿಟೆಕ್ನಿಕ್​ನಿಂದ ಎಂಜಿನಿಯರಿಂಗ್ (ಸಾಮಾನ್ಯ) / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಸಿವಿಲ್ ಡ್ರಾಫ್ಟ್​ಮ್ಯಾನ್ಶಿಪ್​​)

    ಹುದ್ದೆಗಳ ಸಂಖ್ಯೆ
    ಒಟ್ಟು ಹುದ್ದೆಗಳ ಸಂಖ್ಯೆ 60 ಆಗಿದ್ದು, ಇದರಲ್ಲಿ 10 ಹುದ್ದೆಗಳು ಹೈದ್ರಬಾದ್​ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾಗಿದೆ

    ವಯೋಮಿತಿ
    ಕನಿಷ್ಟ 18 ವರ್ಷ ಆಗಿದ್ದು, ಗರಿಷ್ಟ 35 ವರ್ಷಗಳು ಮೀರಿರಬಾರದು

    ವಯೋಮಿತಿ ಸಡಿಲಿಕೆ
    ಪ್ರವರ್ಗ 2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ 38 ವರ್ಷ ಮೀರಿರಬಾರದು
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ1 ಅಭ್ಯರ್ಥಿಗಳಿಗೆ- 40 ವರ್ಷ ಮೀರಿರಬಾರದು

    ಆಯ್ಕೆ ಪ್ರಕ್ರಿಯೆ
    ಸ್ಮರ್ಧಾತ್ಮಕ ಪರೀಕ್ಷೆ

    ಅರ್ಜಿ ಶುಲ್ಕ

    ಸಾಮಾನ್ಯ ಅಭ್ಯರ್ಥಿಗಳಿಗೆ- 600
    ಪ್ರವರ್ಗ 2 (ಎ), 2(ಬಿ, 3(ಎ), 3 (ಬಿ) ಅಭ್ಯರ್ಥಿಗಳಿಗೆ - 300 ರೂ
    ಮಾಜಿ ಸೈನಿಕ ಅಭ್ಯರ್ಥಿಗಳಿಗೆ - ರೂ 50
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ - ಶುಲ್ಕ ಇಲ್ಲ

    ಪ್ರಮುಖ ಸೂಚನೆ
    ಅರ್ಜಿ ಸಲ್ಲಿಕೆ ಕಡೆಯ ದಿನ ಮೇ 31 ಆಗಿದೆ.

    ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್‌ಸೈಟ್: www.kpsc.kar.nic.in

    ಅರ್ಜಿ ಸಲ್ಲಿಕೆ ವಿಧಾನ
    ಒಟ್ಟು ಮೂರು ವಿಧದಲ್ಲಿ ಅರ್ಜಿ ಸಲ್ಲಿಸಬೇಕು
    ಮೊದಲನೇ ಹಂತ : ಪ್ರೋಫೈಲ್​ ಕ್ರಿಯೆಷನ್​ / ಅಪ್ಟಡೇಷನ್​​
    ಎರಡನೇ ಹಂತ: ಅಪ್ಲಿಕೇಷನ್​ ಸಬ್​ಮಿಷನ್​
    ಮೂರನೇ ಹಂತ: ಅರ್ಜಿ ಶುಲ್ಕ

    ಅರ್ಜಿ ಸಲ್ಲಿಕೆ ವಿಧಾನ

    -ಕೆಪಿಎಸ್​​ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    -ಕೆಪಿಎಸ್​ಸಿ ಅಲ್ಲಿ ನಿಮ್ಮದೇ ಆದ ಪ್ರೋಫೈಲ್​ ಸಿದ್ದಪಡಿಸಿ

    ಇದನ್ನು ಓದಿ: ಭಾರತೀಯ ಸೇನೆಯಲ್ಲಿ 400 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

    - ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟು ಕೊಳ್ಳಿ.

    - ಆನ್‌ಲೈನ್‌ನಲ್ಲಿ ಅನ್ವಯಿಸಿ ಮೇಲ್ಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ.

    ಇದನ್ನು ಓದಿ: ಸರ್ಕಾರದ ರೆಪ್ಕೊ ಬ್ಯಾಂಕ್​ನಲ್ಲಿ ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನ

    -ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

    -ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    ಸಿಇಎಸ್​ಸಿ ಮೈಸೂರು ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸುವ ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಸೆರೆ ಹಿಡಿದುಕೊಳ್ಳಿ
    Published by:Seema R
    First published: