KPSC Recruitment: ಡ್ರಗ್ ಅನಾಲಿಸ್ಟ್ ಹುದ್ದೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನ - ಇಲ್ಲಿ ನೇರವಾಗಿ ಅಪ್ಲೈ ಮಾಡಿ

Job Notification: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಅಥವಾ ಅನುಮೋದಿತ ಉತ್ಪಾದನಾ ಘಟಕ ಅಥವಾ ಡ್ರಗ್ ಟೆಸ್ಟಿಂಗ್ ಲ್ಯಾಬೋರೇಟರಿಯಲ್ಲಿ ಡ್ರಗ್ ಅನಾಲಿಸಿಸ್‌ನಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
KPSC Recruitment 2022: ಕರ್ನಾಟಕ ಲೋಕಸೇವಾ ಆಯೋಗವು (Karnataka Public Service Commission)  ಡ್ರಗ್ ಅನಲಿಸ್ಟ್ (Drug Analyst) ಪೋಸ್ಟ್‌ಗಳನ್ನು ಭರ್ತಿ ಮಾಡಲು ಆದೇಶ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೆಪಿಎಸ್​ಸಿ ಹುದ್ದೆಗಳನ್ನು ಪಡೆಯುವುದು ಹಲವಾರು ಜನರ ಕನಸಾಗಿದೆ.  ಅದಕ್ಕೆ ಹಲವಾರು ವರ್ಷಗಳ ಕಠಿಣ ತಪಸ್ಸು ಮಾಡುತ್ತಾರೆ. ನಿಮ್ಮ ಕನಸು ನನಸಾಗಿಸಲು ಇಲ್ಲೊಂದು ಅವಕಾಶವಿದ್ದು, ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳು ತಡ ಮಾಡದೇ ನಾವು ನೀಡಿರುವ ನೇರ ಲಿಂಕ್ ಮೂಲಕ ಅರ್ಜಿ ಹಾಕಿ.

ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.  











































ಸಂಸ್ಥೆಕರ್ನಾಟಕ ಲೋಕಸೇವಾ ಆಯೋಗ (KPSC)
ಹುದ್ದೆಔಷಧ ವಿಶ್ಲೇಷಕ (ಡ್ರಗ್ ಅನಲಿಸ್ಟ್)
ಹುದ್ದೆಗಳ ಸಂಖ್ಯೆ02
ಉದ್ಯೋಗ ಸ್ಥಳಕರ್ನಾಟಕ
ವೇತನರೂ.30350-58250/- ಪ್ರತಿ ತಿಂಗಳು
ಹುದ್ದೆಯ ವಿವರ

ಡ್ರಗ್ ಅನಾಲಿಸ್ಟ್ (ಸಸ್ಯಶಾಸ್ತ್ರ) 1

ಡ್ರಗ್ ಅನಾಲಿಸ್ಟ್ (ರಸಾಯನಶಾಸ್ತ್ರ) 1
ಶೈಕ್ಷಣಿಕ ಅರ್ಹತೆವಿಜ್ಞಾನದಲ್ಲಿ ಬ್ಯಾಚುಲರ್ ಪದವಿ
ಅನುಭವ3 ವರ್ಷ
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 20
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 76 ಹುದ್ದೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನ - ಬೇಗ ಅಪ್ಲೈ ಮಾಡಿ

ಡ್ರಗ್ ಅನಲಿಸ್ಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗವು ಅರ್ಜಿ ಆಹ್ವಾನಿಸಿದ್ದು, ಏಪ್ರಿಲ್ 20 ರ ಮೊದಲು ಅರ್ಜಿ ಹಾಕಬಹುದು. ವಿಜ್ಞಾನದಲ್ಲಿ ಪದವಿ ಪಡೆದ 18 ರಿಂದ 35 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 3 ವರ್ಷದ ಅನುಭವ ಹೊಂದಿರಬೇಕು, ಹಾಗೂ ಈ ಹುದ್ದಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 60 ಸಾವಿರದ ವರೆಗೆ ಸಂಬಳ ನೀಡಲಾಗುತ್ತದೆ.

ಸಂಸ್ಥೆಯ ಹೆಸರು: ಕರ್ನಾಟಕ ಲೋಕಸೇವಾ ಆಯೋಗ (KPSC)

ಹುದ್ದೆಗಳ ಸಂಖ್ಯೆ: 02

ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಯ ಹೆಸರು: ಔಷಧ ವಿಶ್ಲೇಷಕ (ಡ್ರಗ್ ಅನಲಿಸ್ಟ್)

ವೇತನ: ರೂ.30350-58250/- ಪ್ರತಿ ತಿಂಗಳು



ಶೈಕ್ಷಣಿಕ ಅರ್ಹತೆ: KPSC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ವಿಜ್ಞಾನದಲ್ಲಿ ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸಿರಬೇಕು.

ಹುದ್ದೆಯ ವಿವರ

ಡ್ರಗ್ ಅನಾಲಿಸ್ಟ್ (ಸಸ್ಯಶಾಸ್ತ್ರ) 1

ಡ್ರಗ್ ಅನಾಲಿಸ್ಟ್ (ರಸಾಯನಶಾಸ್ತ್ರ) 1

ಅನುಭವದ ವಿವರಗಳು

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಅಥವಾ ಅನುಮೋದಿತ ಉತ್ಪಾದನಾ ಘಟಕ ಅಥವಾ ಡ್ರಗ್ ಟೆಸ್ಟಿಂಗ್ ಲ್ಯಾಬೋರೇಟರಿಯಲ್ಲಿ ಡ್ರಗ್ ಅನಾಲಿಸಿಸ್‌ನಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.

 ವಯೋಮಿತಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 20-Apr-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷದವರಾಗಿರಬೇಕು.

ವಯೋಮಿತಿ ಸಡಿಲಿಕೆ:

SC/ST/Cat-I ಅಭ್ಯರ್ಥಿಗಳು: 05 ವರ್ಷಗಳು

ಕ್ಯಾಟ್-IIA/IIB/IIIA & IIIB ಅಭ್ಯರ್ಥಿಗಳು: 03 ವರ್ಷಗಳು

PH/ವಿಧವೆ ಅಭ್ಯರ್ಥಿಗಳು: 10 ವರ್ಷಗಳು

 ಇಲ್ಲಿ ನೇರವಾಗಿ ಅರ್ಜಿ ಹಾಕಿ 

ಆಯ್ಕೆ ಪ್ರಕ್ರಿಯೆ:

ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ

ಅರ್ಜಿ ಶುಲ್ಕ:

SC/ST/Cat-I/PH ಅಭ್ಯರ್ಥಿಗಳು: ಶುಲ್ಕವಿಲ್ಲ

ಮಾಜಿ ಸೈನಿಕ ಅಭ್ಯರ್ಥಿಗಳು: ರೂ.50/-

ಕ್ಯಾಟ್-2ಎ/2ಬಿ/3ಎ ಮತ್ತು 3ಬಿ ಅಭ್ಯರ್ಥಿಗಳು: ರೂ.300/-

ಸಾಮಾನ್ಯ ಅಭ್ಯರ್ಥಿಗಳು: ರೂ.600/-

ಎಲ್ಲಾ ಅಭ್ಯರ್ಥಿಗಳಿಗೆ ಪ್ರೊಸೆಸಿಂಗ್ ಶುಲ್ಕ: ರೂ.35/-

ಪಾವತಿ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21-03-2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-Apr-2022

ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 21-Apr-2022

ವೆಬ್​ಸೈಟ್​kpsc.kar.nic.in 

ಇತರ ಕೆಲಸಗಳ ಹೆಚ್ಚಿನ ಮಾಹಿತಿಗೆ ಇಲ್ಲಿ  ಕ್ಲಿಕ್ ಮಾಡಿ 

ಹೆಚ್ಚಿನ ಮಾಹಿತಿಗೆ

ಕೇಂದ್ರ ಕಚೇರಿ ಮಾಹಿತಿ ಕೇಂದ್ರ: 080-30574957/30574901

ಪ್ರಾಂತೀಯ ಕಛೇರಿ ಮೈಸೂರು: 0821-2545956

ಪ್ರಾಂತೀಯ ಕಛೇರಿ ಬೆಳಗಾವಿ: 0831-2475345

ಪ್ರಾಂತೀಯ ಕಛೇರಿ ಕಲಬುರಗಿ: 08472-227944

ಪ್ರಾಂತೀಯ ಕಛೇರಿ ಶಿವಮೊಗ್ಗ: 08182-228099
Published by:Sandhya M
First published: