KPSC Recruitment 2022: ಕರ್ನಾಟಕ ಲೋಕ ಸೇವಾ ಆಯೋಗ( Karnataka Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 188 ಅಸಿಸ್ಟೆಂಟ್ ಎಂಜಿನಿಯರ್(ಗ್ರೇಡ್-1) (Assistant Engineer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 28ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ kpsc.kar.nic.in ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಕರ್ನಾಟಕ ಲೋಕ ಸೇವಾ ಆಯೋಗ(KPSC) |
ಹುದ್ದೆಯ ಹೆಸರು |
ಅಸಿಸ್ಟೆಂಟ್ ಎಂಜಿನಿಯರ್(ಗ್ರೇಡ್-1) |
ಒಟ್ಟು ಹುದ್ದೆಗಳು |
188 |
ವಿದ್ಯಾರ್ಹತೆ |
ಎಂಜಿನಿಯರಿಂಗ್ |
ಉದ್ಯೋಗದ ಸ್ಥಳ |
ಕರ್ನಾಟಕ |
ಅರ್ಜಿ ಸಲ್ಲಿಕೆ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
28/02/2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
30/03/2022 |
ವಿದ್ಯಾರ್ಹತೆ:
ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿ ಅಧಿಸೂಚನೆ ಪ್ರಕಾರ, ಅಸಿಸ್ಟೆಂಟ್ ಎಂಜಿನಿಯರ್(ಗ್ರೇಡ್-1) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸಿವಿಲ್/ಎನ್ವಿರಾನ್ಮೆಂಟಲ್ ವಿಭಾಗದಲ್ಲಿ ಬಿಇ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: Government Job: ಎಂಸ್ಸಿ, ಪಿಯುಸಿ ಆದವರಿಗೆ ರಾಜ್ಯ ಸರ್ಕಾರಿ ಉದ್ಯೋಗ, ತಿಂಗಳಿಗೆ 1 ಲಕ್ಷದವರೆಗೆ ಸಂಬಳ
ವಯೋಮಿತಿ:
ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿ ಅಧಿಸೂಚನೆ ಪ್ರಕಾರ, ಅಸಿಸ್ಟೆಂಟ್ ಎಂಜಿನಿಯರ್(ಗ್ರೇಡ್-1) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಮಾರ್ಚ್ 30, 2022ಕ್ಕೆ 18-35 ವರ್ಷದೊಳಗಿರಬೇಕು.
ವಯೋಮಿತಿ ಸಡಿಲಿಕೆ:
SC/ST/ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ 2ಎ/2ಬಿ/3ಎ &3ಬಿ ಅಭ್ಯರ್ಥಿಗಳಿಗೆ - 3 ವರ್ಷ
ಅರ್ಜಿ ಶುಲ್ಕ:
SC/ST/Cat-I/PH ಅಭ್ಯರ್ಥಿಗಳು: ಅರ್ಜಿ ಶುಲ್ಕ ಇಲ್ಲ
ಪ್ರವರ್ಗ-2ಎ/2ಬಿ/3ಎ ಮತ್ತು 3ಬಿ ಅಭ್ಯರ್ಥಿಗಳು: ರೂ.300
ಸಾಮಾನ್ಯ ಅಭ್ಯರ್ಥಿಗಳು: ರೂ.600
ಎಲ್ಲಾ ಅಭ್ಯರ್ಥಿಗಳಿಗೆ ಸಂಸ್ಕರಣಾ ಶುಲ್ಕ: ರೂ.35
ಪಾವತಿ ವಿಧಾನ: ಆನ್ಲೈನ್
ಇದನ್ನೂ ಓದಿ: Job Alert: ತಿಂಗಳಿಗೆ ₹ 62,000 ಸಂಬಳ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಡಿಪ್ಲೋಮಾ ಆದವರಿಗೆ ಉದ್ಯೋಗ
ವೇತನ:
ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿ ಅಧಿಸೂಚನೆ ಪ್ರಕಾರ, ಅಸಿಸ್ಟೆಂಟ್ ಎಂಜಿನಿಯರ್(ಗ್ರೇಡ್-1) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 43,100-83,900 ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಕನ್ನಡ ಭಾಷಾ ಪರೀಕ್ಷೆ
ಸ್ಪರ್ಧಾತ್ಮಕ ಪರೀಕ್ಷೆ
ದಾಖಲಾತಿ ಪರಿಶೀಲನೆ
ಸಂದರ್ಶನ
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/03/2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31/03/2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ