• Home
  • »
  • News
  • »
  • jobs
  • »
  • KPSC Recruitment 2022: ಪದವೀಧರರೇ ಅಲರ್ಟ್​​- KPSCಯಲ್ಲಿ ಖಾಲಿ ಇರುವ 105 ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ

KPSC Recruitment 2022: ಪದವೀಧರರೇ ಅಲರ್ಟ್​​- KPSCಯಲ್ಲಿ ಖಾಲಿ ಇರುವ 105 ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ

KPSC

KPSC

ಸಾಂಖ್ಯಿಕ ನಿರೀಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ನವೆಂಬರ್ 17, 2022ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

  • Share this:

    KPSC Recruitment 2022: ಕರ್ನಾಟಕ ಲೋಕಸೇವಾ ಆಯೋಗ(Karnataka Public Service Commission)ದಲ್ಲಿ ಖಾಲಿ ಇರುವ 105 ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಾಂಖ್ಯಿಕ ನಿರೀಕ್ಷಕರು(-Statistical Inspectors-RPC) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಅಂದರೆ ನವೆಂಬರ್ 17 ಕೊನೆಯ ದಿನ(Last Date)ವಾಗಿದೆ. ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆನ್​​ಲೈನ್(Online) ಮೂಲಕ ಅರ್ಜಿ ಹಾಕಬೇಕು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕರ್ನಾಟಕ ಲೋಕಸೇವಾ ಆಯೋಗ
    ಹುದ್ದೆಯ ಹೆಸರುಸಾಂಖ್ಯಿಕ ನಿರೀಕ್ಷಕರು
    ಒಟ್ಟು ಹುದ್ದೆ105
    ವಿದ್ಯಾರ್ಹತೆಪದವಿ
    ವೇತನಮಾಸಿಕ  ₹ 27,650-52,650
    ಸ್ಥಳಕರ್ನಾಟಕ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ19/10/2022
    ಅರ್ಜಿ ಸಲ್ಲಿಸಲು ಕೊನೆ ದಿನ17/11/2022


    ವಿದ್ಯಾರ್ಹತೆ:
    ಕರ್ನಾಟಕ ಲೋಕಸೇವಾ ಆಯೋಗ​ ನೇಮಕಾತಿ ಅಧಿಸೂಚನೆ ಪ್ರಕಾರ, ಸಾಂಖ್ಯಿಕ ನಿರೀಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.


    ಹುದ್ದೆಯ ಕುರಿತಾದ ನೋಟಿಫಿಕೇಶನ್ ಇಲ್ಲಿದೆ


    KPSC ನೋಟಿಫಿಕೇಶನ್


    ವಯೋಮಿತಿ:
    ಕರ್ನಾಟಕ ಲೋಕಸೇವಾ ಆಯೋಗ​ ನೇಮಕಾತಿ ಅಧಿಸೂಚನೆ ಪ್ರಕಾರ, ಸಾಂಖ್ಯಿಕ ನಿರೀಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ನವೆಂಬರ್ 17, 2022ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಎಸ್​​ಸಿ/ಎಸ್​ಟಿ/ ಪ್ರವರ್ಗ-1 ಅಭ್ಯರ್ಥಿಗಳು-5 ವರ್ಷ
    ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು-3 ವರ್ಷ
    PH/ವಿಧವಾ ಅಭ್ಯರ್ಥಿಗಳು-10 ವರ್ಷ


    ಇದನ್ನೂ ಓದಿ: JOB ALERT: ಮಂಗಳೂರು ಪೋರ್ಟ್​​ನಲ್ಲಿ ಡಿಗ್ರಿ ಆದವರಿಗೆ ಬಂಪರ್ ಉದ್ಯೋಗ, ಮಾಸಿಕ ವೇತನ ₹ 1.80 ಲಕ್ಷ


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/ ಪ್ರವರ್ಗ-1 & PH ಅಭ್ಯರ್ಥಿಗಳು- 35 ರೂ.
    ಮಾಜಿ ಸೈನಿಕ ಅಭ್ಯರ್ಥಿಗಳು-85 ರೂ.
    ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು-335 ರೂ.
    ಸಾಮಾನ್ಯ ಅಭ್ಯರ್ಥಿಗಳು-635 ರೂ.
    ಅರ್ಜಿ ಸಲ್ಲಿಕೆ ವಿಧಾನ- ಆನ್​ಲೈನ್​


    ಆಯ್ಕೆ ಪ್ರಕ್ರಿಯೆ:
    ಕನ್ನಡ ಭಾಷಾ ಪರೀಕ್ಷೆ
    ಸ್ಪರ್ಧಾತ್ಮಕ ಪರೀಕ್ಷೆ


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 17/11/2022
    ಅರ್ಜಿ ಶುಲ್ಕ ಕಟ್ಟಲು ಕೊನೆ ದಿನ: 18/11/2022

    Published by:Latha CG
    First published: