KPSC Recruitment 2021: ಕೇರಳ ಲೋಕಸೇವಾ ಆಯೋಗ(Kerala Public Service Commission) ಹಲವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 190 ಕ್ಲರ್ಕ್(Clerk), ಕ್ಯಾಶಿಯರ್(Cashier), ಸಬ್ ಎಂಜಿನಿಯರ್(Sub Engineer) ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, ಬಿಇ, ಬಿ.ಟೆಕ್, ಬಿಎಸ್ಸಿ, ಬಿಕಾಂ, ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 30 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 5, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೇರಳ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್
www.keralapsc.gov.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಕೇರಳ ಲೋಕಸೇವಾ ಆಯೋಗ |
ಹುದ್ದೆಯ ಹೆಸರು |
ಕ್ಲರ್ಕ್, ಕ್ಯಾಶಿಯರ್, ಸಬ್ ಎಂಜಿನಿಯರ್ |
ಒಟ್ಟು ಹುದ್ದೆಗಳು |
190 |
ವಿದ್ಯಾರ್ಹತೆ |
ಬಿಇ, ಬಿ.ಟೆಕ್, ಬಿಎಸ್ಸಿ, ಬಿಕಾಂ, ಡಿಪ್ಲೋಮಾ |
ಉದ್ಯೋಗದ ಸ್ಥಳ |
ಕೇರಳ |
ವೇತನ |
ಮಾಸಿಕ ₹ 14,150-82,400 |
ಅರ್ಜಿ ಸಲ್ಲಿಕೆ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
30/11/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
05/01/2022 |
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/01/2022
ಇದನ್ನೂ ಓದಿ: Indian Army Recruitment 2021: ತಿಂಗಳಿಗೆ ₹ 2,50,000 ಸಂಬಳ, BE, B Tech ಪಾಸಾದವರಿಗೆ ಇಂಡಿಯನ್ ಆರ್ಮಿಯಲ್ಲಿ ಉದ್ಯೋಗ
ಹುದ್ದೆಯ ಮಾಹಿತಿ:
ಸಬ್ ಎಂಜಿನಿಯರ್ (ಎಲೆಕ್ಟ್ರಿಕಲ್)- 131
ಕ್ಲರ್ಕ್/ ಕ್ಯಾಶಿಯರ್- 59
ಒಟ್ಟು 190 ಹುದ್ದೆಗಳು
ವಿದ್ಯಾರ್ಹತೆ:
ಸಬ್ ಎಂಜಿನಿಯರ್ (ಎಲೆಕ್ಟ್ರಿಕಲ್): 10 ನೇ ತರಗತಿ ಕಡ್ಡಾಯವಾಗಿ ಪಾಸಾಗಿರಬೇಕು. ಜೊತೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ನಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.
ಕ್ಲರ್ಕ್/ಕ್ಯಾಶಿಯರ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ನಿಂದ ಕಡ್ಡಾಯವಾಗಿ ಬಿಕಾಂ/ ಬಿಎಸ್ಸಿ/ ಯಾವುದೇ ಪದವಿ ಪಡೆದಿರಬೇಕು.
ವಯೋಮಿತಿ:
ಸಬ್ ಎಂಜಿನಿಯರ್- 18-36 ವರ್ಷ
ಕ್ಲರ್ಕ್/ಕ್ಯಾಶಿಯರ್-18-50 ವರ್ಷ
ಇದನ್ನೂ ಓದಿ: UPSC Recruitment 2021: ಅಸಿಸ್ಟೆಂಟ್ ಕಮಾಂಡೆಂಟ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC, ಪದವೀಧರರಿಗೆ ಅವಕಾಶ
ವೇತನ:
ಸಬ್ ಎಂಜಿನಿಯರ್- ಮಾಸಿಕ ₹41,600-82,400
ಕ್ಲರ್ಕ್/ಕ್ಯಾಶಿಯರ್- ಮಾಸಿಕ ₹14,150- 35,490
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ