KPSC Recruitment 2021: ಕೇರಳ ಲೋಕಸೇವಾ ಆಯೋಗ(Kerala Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಡ್ರೈವರ್ ಆಫೀಸ್ ಅಟೆಂಡೆಂಟ್(Driver Office Attendant) ಹುದ್ದೆಗಳು ಖಾಲಿ ಇದ್ದು, 7ನೇ ತರಗತಿ ಪಾಸಾಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 30ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 1 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೇರಳ ಲೋಕಸೇವಾ ಆಯೋಗದ(KPSC) ಅಧಿಕೃತ ವೆಬ್ಸೈಟ್ www.keralapsc.gov.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಕೇರಳ ಲೋಕಸೇವಾ ಆಯೋಗ-KPSC |
ಹುದ್ದೆಯ ಹೆಸರು |
ಡ್ರೈವರ್ ಆಫೀಸ್ ಅಟೆಂಡೆಂಟ್ |
ಒಟ್ಟು ಹುದ್ದೆಗಳು |
14 |
ವಿದ್ಯಾರ್ಹತೆ |
7ನೇ ತರಗತಿ ಪಾಸ್ |
ಉದ್ಯೋಗದ ಸ್ಥಳ |
ಕೇರಳ |
ವೇತನ |
ಮಾಸಿಕ ₹18,000-41,500 |
ಅರ್ಜಿ ಸಲ್ಲಿಸುವ ಬಗೆ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
30/10/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
01/12/2021 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01/12/2021
ಇದನ್ನೂ ಓದಿ: KPSC Recruitment 2021: ತಿಂಗಳಿಗೆ ₹ 48,000 ಸಂಬಳ, SSLC ಪಾಸಾದವರಿಗೆ ಬಂಪರ್ ಉದ್ಯೋಗ
ಅರ್ಜಿ ಶುಲ್ಕ:
ಡ್ರೈವರ್ ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ವಿದ್ಯಾರ್ಹತೆ:
- ಡ್ರೈವರ್ ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 7ನೇ ತರಗತಿ ಪಾಸಾಗಿರಬೇಕು.
- ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್(ಚಾಲನಾ ಪರವಾನಗಿ) ಹೊಂದಿರಬೇಕು.
- ಡ್ರೈವಿಂಗ್ ಬ್ಯಾಡ್ಜ್ನೊಂದಿಗೆ ಮಧ್ಯಮ/ಭಾರೀ ಸರುಕುಗಳು/ಪ್ಯಾಸೆಂಜರ್ ಮೋಟಾರು ವಾಹನಗಳನ್ನು ಓಡಿಸಲು 3 ವರ್ಷಗಳ ಚಾಲನಾ ಪರವಾನಗಿಯನ್ನು ಹೊಂದಿರಬೇಕು.
- ಕೆಪಿಎಸ್ಸಿ ನಡೆಸುವ 'T' ಪರೀಕ್ಷೆ ಮತ್ತು ರಸ್ತೆ ಪರೀಕ್ಷೆ ಸೇರಿದಂತೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಸಾಗಬೇಕು.
- ಆಯ್ಕೆ ಸಂದರ್ಭದಲ್ಲಿ ಕೇರಳ ಲೋಕಸೇವಾ ಆಯೋಗ ನಡೆಸುವ ‘T‘ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಆಯ್ಕೆಯಾಗುತ್ತಾರೆ.
ವಯೋಮಿತಿ:
ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-44 ವರ್ಷದೊಳಗಿರಬೇಕು.
ವೇತನ:
ಡ್ರೈವರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹ 18,000-41,500 ವೇತನ ನೀಡಲಾಗುತ್ತದೆ.
ಇದನ್ನೂ ಓದಿ: BHEL Recruitment 2021: ತಿಂಗಳಿಗೆ ₹83,000 ಸಂಬಳ, MBBS ಪದವೀಧರರಿಗೆ BHELನಲ್ಲಿ ಉದ್ಯೋಗಾವಕಾಶ
ಆಯ್ಕೆ ಪ್ರಕ್ರಿಯೆ:
ಡ್ರೈವಿಂಗ್ ಟೆಸ್ಟ್
ಲಿಖಿತ ಪರೀಕ್ಷೆ
ವೈಯಕ್ತಿಕ ಸಂದರ್ಶನ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ