KPSC Recruitment 2021: ತಿಂಗಳಿಗೆ ₹ 48,000 ಸಂಬಳ, SSLC ಪಾಸಾದವರಿಗೆ ಬಂಪರ್ ಉದ್ಯೋಗ

ಪೊಲೀಸ್ ಕಾನ್ಸ್​​ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-26 ವರ್ಷದೊಳಗಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
KPSC Recruitment 2021: ಕೇರಳ ಲೋಕಸೇವಾ ಆಯೋಗವು(Kerala Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 77 ಪೊಲೀಸ್ ಕಾನ್ಸ್​ಟೇಬಲ್(Police Constable)​ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ(10th Pass) ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 30 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 01, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಕೇರಳ ಲೋಕಸೇವಾ ಆಯೋಗ
ಹುದ್ದೆಯ ಹೆಸರುಪೊಲೀಸ್ ಕಾನ್ಸ್​​ಟೇಬಲ್
ಒಟ್ಟು ಹುದ್ದೆಗಳು77
ವಿದ್ಯಾರ್ಹತೆ10ನೇ ತರಗತಿ ಪಾಸ್
ಉದ್ಯೋಗದ ಸ್ಥಳತಿರುವನಂತಪುರಂ
ವೇತನಮಾಸಿಕ ₹22,200-48,000
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ30/10/201
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ01/12/2021



ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/10/201

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01/12/2021


ಇದನ್ನೂ ಓದಿ:LIC Recruitment 2021: ತಿಂಗಳಿಗೆ ₹ 25,000 ಸಂಬಳ, ಪದವಿ ಪಾಸಾದವರಿಗೆ LICಯಲ್ಲಿ Part-Time ಉದ್ಯೋಗ

ವಿದ್ಯಾರ್ಹತೆ:

ಪೊಲೀಸ್ ಕಾನ್ಸ್​​ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ/ಬೋರ್ಡ್​ನಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:

ಪೊಲೀಸ್ ಕಾನ್ಸ್​​ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-26 ವರ್ಷದೊಳಗಿರಬೇಕು.

ಉದ್ಯೋಗದ ಸ್ಥಳ:

ಪೊಲೀಸ್ ಕಾನ್ಸ್​​ಟೇಬಲ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇರಳದ ತಿರುವನಂಪುರಂನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:

ಪೊಲೀಸ್ ಕಾನ್ಸ್​​ಟೇಬಲ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹22,200-48,000 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ / OMR ಪರೀಕ್ಷೆ, ದೈಹಿಕ ದಕ್ಷತೆಯ ಪರೀಕ್ಷೆಯಲ್ಲಿ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

  • ಸಹಿಷ್ಣುತೆ ಪರೀಕ್ಷೆ : ಇದು ಅರ್ಹತಾ ಸ್ವಭಾವವನ್ನು ಹೊಂದಿರುತ್ತದೆ ಮತ್ತು 13 ನಿಮಿಷಗಳಲ್ಲಿ ಪೂರ್ಣಗೊಳ್ಳಲು 3 ಕಿಮೀಗಳ ರೋಡ್ ರನ್ ಅನ್ನು ಒಳಗೊಂಡಿರುತ್ತದೆ.

  • ಲಿಖಿತ ಪರೀಕ್ಷೆ/ OMR ಪರೀಕ್ಷೆ : ಸಹಿಷ್ಣುತೆ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಲಿಖಿತ ಪರೀಕ್ಷೆ/ OMR ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

  • ಶಾರೀರಿಕ ದಕ್ಷತೆ ಪರೀಕ್ಷೆ : ಲಿಖಿತ ಪರೀಕ್ಷೆ/ OMR ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದೈಹಿಕ ದಕ್ಷತೆಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅವರು 8 ಈವೆಂಟ್​​ಗಳಲ್ಲಿ ಕನಿಷ್ಠ 5 ಈವೆಂಟ್‌ಗಳಲ್ಲಿ ಅರ್ಹತೆ ಪಡೆಯಬೇಕು.


ಇದನ್ನೂ ಓದಿ: Western Railway Recruitment 2021: SSLC, PUC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: