ಕರ್ನಾಟಕ ಲೋಕಸೇವಾ ಆಯೋಗ(KPSC) ಸಮಾಜ ಕಲ್ಯಾಣ ಇಲಾಖೆಯ(Social Welfare Department) ಅಡಿಯಲ್ಲಿ ಬರುವ ಗ್ರೂಪ್ ಸಿ(Group C) ವಸತಿ ಶಾಲೆ ಶಿಕ್ಷಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಆದೇಶ ನೀಡಿದೆ. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆ ಶಿಕ್ಷಕರ ಹುದ್ದೆಯ ನೇರ ನೇಮಕಾತಿ ಕುರಿತಂತೆ ರೆಸಿಡ್ಯುಲ್ ಒರಿಜಿನ್ 32 ಮತ್ತು ಹೈದ್ರಾಬಾದ್ ಕರ್ನಾಟಕದ ಸ್ಥಳೀಯ ವೃಂದದ 87 ಸೇರಿದಂತೆ ಒಟ್ಟು 119 ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ಪ್ರಸ್ತುತ ನೇಮಕಾತಿ ಆದೇಶ ಹೊರಡಿಸಿದೆ.
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರು, ಹುದ್ದೆಯ ಸ್ಥಳ, ಆಯ್ಕೆಯಾದ ಮೀಸಲಾತಿ ವರ್ಗದ ಮಾಹಿತಿಗಳ ಆದೇಶ ಪ್ರತಿಯಲ್ಲಿ ಅಭ್ಯರ್ಥಿಗಳಿಗೆ ಈಗಾಗಲೇ ನೀಡಲಾಗಿದೆ. ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ದಿನಾಂಕ 15-09-2021 ರಂದು ದಾಖಲೆಗಳ ಪರಿಶೀಲನೆ ನಡೆಸಲಾಗಿತ್ತು.
ಈ ಕೆಳಗಿನ ಲಿಂಕ್ ಮೂಲಕ ನಿಮ್ಮ ನೇಮಕಾತಿ ಬಗ್ಗೆ ಮಾಹಿತಿ ಪಡೆಯಿರಿ.
https://www.karnatakacareers.in/organization/social-welfare-department-karnataka/
ಹುದ್ದೆಯ ಮಾಹಿತಿ ಹೀಗಿದೆ
ಒಟ್ಟು ಶಾಲೆಗಳು |
57 |
ಹೈದರಾಬಾದ್ ಕರ್ನಾಟಕ ಗ್ರೂಪ್ |
87 |
ರೆಸಿಡ್ಯುಲ್ ಒರಿಜಿನ್ |
32 |
ಒಟ್ಟು ಹುದ್ದೆಗಳು |
119 |
ವೇತನ |
ರೂ.23500 ರಿಂದ 47650 |
ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಂದರೆ ವಸತಿ ಶಾಲೆ ಶಿಕ್ಷಕರಿಗೆ ತಿಂಗಳಿಗೆ ರೂ.23500 ರಿಂದ 47650 ವರೆಗೆ ವೇತನ ನೀಡಲಾಗುತ್ತದೆ. ಸಧ್ಯ ನೇಮಕಾತಿಗೆ ಆದೇಶ ನೀಡಲಾಗಿರುವ ಅಭ್ಯರ್ಥಿಗಳನ್ನು ಒಟ್ಟು 57 ವಸತಿ ಶಾಲೆಗಳಿಗೆ ನೇಮಕ ಮಾಡಲಾಗುತ್ತದೆ ಎಂದು KPSC ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಬ್ಯಾಂಕ್ ಮತ್ತು ಐಟಿ ಕ್ಷೇತ್ರದಲ್ಲಿ ಕೆಲಸ ಖಾಲಿ ಇರುವ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ.
https://kannada.news18.com/news/jobs/jobs-in-karnataka-india-abroad-government-private-it-company-sector-business-own-interview-634247.html ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ