ಕೆಪಿಎಸ್ಸಿ (KPSC) ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಮಹತ್ವದ ಅಪ್ಡೇಟ್ ಇದೆ. ಹೌದು, ಕನ್ನಡ ಕಡ್ಡಾಯ ಪರೀಕ್ಷೆಯ ರಿಸಲ್ಟ್ನ್ನು ಕೆಪಿಎಸ್ಸಿ ಬಿಡುಗಡೆ ಮಾಡಿದೆ. ಕರ್ನಾಟಕ ಲೋಕ ಸೇವಾ ಆಯೋಗವು ಫೆಬ್ರವರಿ 25, 2023 ರಂದು ಕನ್ನಡ ಕಡ್ಡಾಯ ಪರೀಕ್ಷೆಯನ್ನು ನಡೆಸಿತ್ತು. ಈಗ ಅದರ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಮೆರಿಟ್ ಲಿಸ್ಟ್ನಲ್ಲಿ ತಮ್ಮ ರಿಜಿಸ್ಟರ್ ನಂಬರ್ (Register Number) ಇದೆಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.
ಅರ್ಹತಾ ಪಟ್ಟಿಯಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಚೆಕ್ ಮಾಡುವುದು ಹೇಗೆ ಎಂಬ ಗೊಂದಲದಲ್ಲಿದ್ದರೆ, ಅದಕ್ಕೆ ಈ ಸುಲಭ ಹಂತಗಳನ್ನು ಅನುಸರಿಸಿ.
ಇದನ್ನೂ ಓದಿ: Karnataka Jobs: ಡಿಗ್ರಿ ಪಾಸಾದವರಿಗೆ ರಾಜ್ಯ ಸರ್ಕಾರದ ಉದ್ಯೋಗ- ಅಪ್ಲಿಕೇಶನ್ ಹಾಕಲು ಇವತ್ತೇ ಲಾಸ್ಟ್ ಡೇಟ್
ಹಂತ 1- ಮೊದಲಿಗೆ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ https://kpsc.kar.nic.in/ ಗೆ ಭೇಟಿ ನೀಡಬೇಕು.
ಹಂತ 2- ಅಲ್ಲಿ ಹೋಂ ಪೇಜ್ ಓಪನ್ ಆದಾಗ 'ಹೊಸದು ಏನು?/ What is New' ಕಾಲಂ ಅಡಿಯಲ್ಲಿ ಸ್ಕ್ರಾಲಿಂಗ್ ಆಗುತ್ತಿರುವಲ್ಲಿ ಸದರಿ ಅರ್ಹತಾ ಪಟ್ಟಿ ಲಿಂಕ್ ಲಭ್ಯವಿದೆ.
ಹಂತ 3- ಅಭ್ಯರ್ಥಿಗಳು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ