• ಹೋಂ
  • »
  • ನ್ಯೂಸ್
  • »
  • Jobs
  • »
  • SDA Admit Card: ಮುಂದಿನವಾರವೇ KPSC ಪರೀಕ್ಷೆ; ಸೋರಿಕೆ ತಡೆಯಲು ಈ ಬಾರಿ ಹೈ ಅಲರ್ಟ್

SDA Admit Card: ಮುಂದಿನವಾರವೇ KPSC ಪರೀಕ್ಷೆ; ಸೋರಿಕೆ ತಡೆಯಲು ಈ ಬಾರಿ ಹೈ ಅಲರ್ಟ್

ಕೆಪಿಎಸ್​ಸಿ

ಕೆಪಿಎಸ್​ಸಿ

ಕೆಪಿಎಸ್​ಸಿ ಪರೀಕ್ಷೆ ವೇಳೆ ಪ್ರಶ್ನಾ ಪತ್ರಿಕೆ ಸೋರಿಕೆಯಾಗುತ್ತಿರುವ ಹಿನ್ನಲೆ ಈ ಬಾರಿ ಪರೀಕ್ಷೆಯನ್ನು ಬಿಗಿ ಕ್ರಮದೊಂದಿಗೆ ಆಯೋಗ ನಡೆಸಲಿದೆ

  • Share this:

ಮಾರ್ಚ್​ನಲ್ಲಿ ಮುಂದೂಡಲ್ಪಟ್ಟಿದ್ದ ಕರ್ನಾಟಕ ಲೋಕಸೇವಾ ಆಯೋಗದ (KPSC) ದ್ವಿತೀಯ ದರ್ಜೆ ಸಹಾಯಕರ (SDA) ಪರೀಕ್ಷೆ ಇದೇ ಸೆಪ್ಟೆಂಬರ್ 18 ಮತ್ತು 19ರಂದು ನಿಗದಿಯಾಗಿದೆ. ಮುಂದಿನ ಶನಿವಾರ ಮತ್ತು ಭಾನುವಾರ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಸೆ. 18ರಂದು ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, 19ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಇದೀಗ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಕೆಪಿಎಸ್​ಸಿ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.


ಎರಡು ಬಾರಿ ಮುಂದೂಡಿದ್ದ ಪರೀಕ್ಷೆ
ಕಳೆದ ಜನವರಿ 24 ರಂದು ನಡೆಯಬೇಕಿದ್ದ ಎಸ್​ಡಿಎ ಪರೀಕ್ಷೆಯ ಹಿಂದಿನ ದಿನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಹಿನ್ನಲೆ ಎಸ್​ಡಿಎ ಪರೀಕ್ಷೆ ರದ್ದು ಮಾಡಿತ್ತು. ಬಳಿಕ ಮಾರ್ಚ್​ 20 ಮತ್ತು 21ರಂದು ಪರೀಕ್ಷೆ ನಿಗದಿಸಿತ್ತು. ಈ ವೇಳೆ ಕೂಡ ಪರೀಕ್ಷೆಗೆ ಪೂರ್ವ ಸಿದ್ಧತೆ ಕಾಲಾವಕಾಶ ಕೊರತೆಯಿಂದ ಮುಂದೂಡಿತ್ತು. ಇದೀಗ ಸೆ. 18 ಮತ್ತು 19ರಂದು ಪರೀಕ್ಷೆ ನಡೆಯಲಿದದು, ಕೆಪಿಎಸ್​​ಸಿ ಅಂತಿಮ ಹಂತದ ಸಿದ್ಧತೆ ನಡೆಸಿದೆ.


ಪ್ರವೇಶ ಪತ್ರಿಕೆ ಡೌನ್​ಲೋಡ್
2019ರ ಸಾಲಿನ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಹಾಜರಾಗಲು ಈ ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಈ ಹಿನ್ನಲೆ ಅಭ್ಯರ್ತಿಗಳು ಕೆಪಿಎಸ್ಸಿ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟಿ ಅಲ್ಲಿನ ಲಿಂಕ್​ ಕ್ಲಿಕ್​ ಮಾಡಿ ಪ್ರವೇಶ ಪತ್ರ ಪಡೆಯಬೇಕಿದೆ.


ಇದನ್ನು ಓದಿ: ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ


ಮಾಡುವ ವಿಧಾನ
ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್​ ಸೈಟ್​ಗೆ ಭೇಟಿ ನೀಡಬೇಕು ಅಥವಾ ಈ ಲಿಂಕ್ ಮೇಲೆ ಕ್ಲಿಕ್​ ಮಾಡಿ
ಈಗ ಅಲ್ಲಿರುವ ಹೋಂ ಪೇಜ್​ನಲ್ಲಿ ಪ್ರವೇಶ ಪತ್ರಿಕೆಯ ಲಿಂಕ್​ ಮೇಲೆ ಕ್ಲಿಕ್​ ಮಾಡಬೇಕು
ಇಲ್ಲಿ ಅಭ್ಯರ್ಥಿಗಳು ತಮಮ ಯೂಸರ್​ ಐಡಿ ಮತತು ಪಾಸ್​ವರ್ಡ್​​ ದಾಖಲಿಸಬೇಕು
ಈ ವೇಳೆ ನಿಮ್ಮ ಪೋಟೋ ಸಮೇತವಾಗಿ ಪ್ರವೇಶ ಪತ್ರ ಸಿಗಲಿದ್ದು, ಇದನ್ನು ತಪ್ಪದೇ ಪ್ರಿಂಟ್​ ತೆಗೆದು ಇಟ್ಟುಕೊಳ್ಳಬೇಕು
ಈ ಪ್ರಿಂಟ್ ತೆಗೆದ ಪ್ರವೇಶ ಪತ್ರಿಕೆಯನ್ನು ಕಡ್ಡಾಯವಾಗಿ ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಬೇಕು.


ಈ ಬಾರಿ ಕಟ್ಟುನಿಟ್ಟಿನ ಕ್ರಮ
ಕೆಪಿಎಸ್​ಸಿ ಪರೀಕ್ಷೆ ವೇಳೆ ಪ್ರಶ್ನಾ ಪತ್ರಿಕೆ ಸೋರಿಕೆಯಾಗುತ್ತಿರುವ ಹಿನ್ನಲೆ ಈ ಬಾರಿ ಪರೀಕ್ಷೆಯನ್ನು ಬಿಗಿ ಕ್ರಮದೊಂದಿಗೆ ಆಯೋಗ ನಡೆಸಲಿದೆ. ಯುಪಿಎಸ್​ಸಿ ಮಾದರಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ. ಇನ್ನು ಪರೀಕ್ಷಾ ಕೇಂದ್ರಗಳಿಗೆ, ಅಭ್ಯರ್ಥಿಗಳು ಪ್ರವೇಶ ಪತ್ರ ಪರೀಕ್ಷೆ ಪೆನ್​ ಹೊರತಾಗಿ ಯಾವುದೇ ವಸ್ತುವನ್ನು ತೆಗೆದುಕೊಂಡು ಹೋಗುವಂತಿಲ್ಲ. ವಾಚ್​, ಮತ್ತಿತ್ತರ ಎಲೆಕ್ಟ್ರಾನಿಕ್ ಉಪಕರಣವನ್ನು ತೆಗೆದುಕೊಂಡು ಹೋಗದಂತೆ ಬಿಗಿ ಕ್ರಮ ನಡೆಸಲಾಗಿದೆ. ಈ ಮೂಲಕ ಪ್ರಶ್ನಾ ಪತ್ರಿಕೆ ಸೋರಿಕೆಯಾಗದಂತೆ ಕ್ರಮಕ್ಕೆ ಮುಂದಾಗಲಾಗಿದೆ.

First published: