ಬೆಂಗಳೂರು, ಏಪ್ರಿಲ್ 23: ನಮ್ಮ ದೇಶದಲ್ಲಿ ನಿರುದ್ಯೋಗಿಗಳ (Unemployed) ಸಂಖ್ಯೆ ಹೆಚ್ಚಾಗಿಯೇ ಇದೆ. ಇಂಜಿನಿಯರಿಂಗ್, (Engineering) ಡಿಪ್ಲೋಮಾ (Diploma) ಓದಿದ ಅದೆಷ್ಟೋ ಜನ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಸರ್ಕಾರಿ ಉದ್ಯೋಗ ಹೊಂದುವ ಕನಸು ಹೊತ್ತಿರೋ ಸಾವಿರಾರು ಜನರಿಗೆ ಅತ್ಯುತ್ತಮ ಅವಕಾಶ ಇಲ್ಲಿದೆ. ಕರ್ನಾಟಕ ಲೋಕಸೇವಾ ಆಯೋಗವು (KPSC) ಅಧಿಕೃತ ಅಧಿಸೂಚನೆ ಏಪ್ರಿಲ್ 2022ರ ಮೂಲಕ 60 ಸಹಾಯಕ ಟೌನ್ ಪ್ಲಾನರ್ (Town Planner) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮೇ 30, 2022 ರಂದು ಅಥವಾ ಮೊದಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು |
ಕರ್ನಾಟಕ ಲೋಕಸೇವಾ ಆಯೋಗ (KPSC) |
ಹುದ್ದೆಗಳ ಸಂಖ್ಯೆ |
60 |
ಉದ್ಯೋಗ ಸ್ಥಳ |
ಕರ್ನಾಟಕ |
ಹುದ್ದೆಯ ಹೆಸರು |
ಸಹಾಯಕ ಟೌನ್ ಪ್ಲಾನರ್ |
ವೇತನ |
33,450,ರಿಂದ 62,600 ರೂ. (ಪ್ರತಿ ತಿಂಗಳು) |
ಶೈಕ್ಷಣಿಕ ಅರ್ಹತೆ |
ಸಿವಿಲ್ ಇಂಜಿನಿಯರಿಂಗ್ |
ವಯೋಮಿತಿ |
35 ವರ್ಷ |
ಅರ್ಜಿ ಶುಲ್ಕದ ವಿವರ:
ಅಭ್ಯರ್ಥಿಗಳಿಗೆ ಸಂಸ್ಕರಣಾ ಶುಲ್ಕ |
35 ರೂ. ಅರ್ಜಿ ಶುಲ್ಕ |
SC/ST/Cat-I & PH ಅಭ್ಯರ್ಥಿಗಳು |
ಇಲ್ಲ |
ಮಾಜಿ ಸೈನಿಕ ಅಭ್ಯರ್ಥಿಗಳು |
50 ರೂ. |
2ಎ/2ಬಿ/3ಎ ಮತ್ತು 3ಬಿ ಅಭ್ಯರ್ಥಿಗಳು |
300 ರೂ. |
ಸಾಮಾನ್ಯ ಅಭ್ಯರ್ಥಿಗಳು |
600 ರೂ. |
ಪಾವತಿ ವಿಧಾನ |
ಆನ್ಲೈನ್ |
ಆಯ್ಕೆ ಪ್ರಕ್ರಿಯೆ |
ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ |
ಇದನ್ನೂ ಓದಿ: ಮ್ಯಾನೇಜರ್ ಸೇರಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ - 1 ಲಕ್ಷಕ್ಕಿಂತ ಹೆಚ್ಚು ಸಂಬಳ
KPSC ನೇಮಕಾತಿ 2022 ಗೆ ಅರ್ಜಿ ಸಲ್ಲಿಸುವುದು ಹೇಗೆ
* ಮೊದಲನೆಯದಾಗಿ KPSC ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಇದನ್ನೂ ಓದಿ: ಕೃಷಿಯಲ್ಲಿ ಆಸಕ್ತಿ ಇರುವ ಎಂಜಿನಿಯರ್ಗಳಿಗೆ ಸುವರ್ಣಾವಕಾಶ! 60 ಸಾವಿರ ಸಂಬಳ
ಈ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಿ: https://www.kpsc.kar.nic.in/
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ |
ಏಪ್ರಿಲ್ 30, 2022 |
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
ಮೇ 30, 2022 |
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ |
ಮೇ 31, 2022 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ