KPSC Recruitment 2021: ಕೇರಳ ಲೋಕಸೇವಾ ಆಯೋಗ(Kerala Public Service Commission) ಹಲವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 39 ಪ್ರೌಢಶಾಲಾ ಶಿಕ್ಷಕ(High School Teacher) ಹುದ್ದೆಗಳು ಖಾಲಿ ಇದ್ದು, ಬಿ.ಎಡ್, ಬಿಎ, ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 30 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 5, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೇರಳ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್
www.keralapsc.gov.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಕೇರಳ ಲೋಕಸೇವಾ ಆಯೋಗ |
ಹುದ್ದೆಯ ಹೆಸರು |
ಪ್ರೌಢಶಾಲಾ ಶಿಕ್ಷಕ |
ಒಟ್ಟು ಹುದ್ದೆಗಳು |
39 |
ವಿದ್ಯಾರ್ಹತೆ |
ಬಿ.ಎಡ್, ಬಿಎ, ಡಿಪ್ಲೋಮಾ |
ಉದ್ಯೋಗದ ಸ್ಥಳ |
ಕೇರಳ |
ವೇತನ |
ಮಾಸಿಕ ₹ 29,200-62,400 |
ಅರ್ಜಿ ಸಲ್ಲಿಕೆ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
30/11/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
05/01/2022 |
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/01/2022
ಇದನ್ನೂ ಓದಿ: Government Job: ಪೋಸ್ಟ್ ಆಫೀಸ್ನಲ್ಲಿ ಕೆಲಸ ಖಾಲಿ ಇದೆ, SSLC, PUC ಪಾಸಾದವರು ಇಂದೇ ಅರ್ಜಿ ಸಲ್ಲಿಸಿ
ಹುದ್ದೆಯ ಮಾಹಿತಿ:
ಹೈ ಸ್ಕೂಲ್ ಟೀಚರ್ (ಹಿಂದಿ)
ತಿರುವನಂತಪುರಂ-7
ಕೊಲ್ಲಂ- 5
ಪಥನಮ್ತಿತ್ತ-3
ಎರ್ನಾಕುಲಂ-2
ಮಲಪ್ಪುರಂ-6
ವಯನಾಡು-1
ಕಣ್ಣೂರು -5
ಕೊಜಿಕೋಡೆ-3
ಒಟ್ಟು 39 ಹುದ್ದೆಗಳು
ವಿದ್ಯಾರ್ಹತೆ:
ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಡ್, ಬಿಎ, ಡಿಪ್ಲೋಮಾ ಪೂರ್ಣಗೊಳಿಸಿರಬೇಕು. ಜೊತೆಗೆ ಕೇರಳ ಶಿಕ್ಷಕ ಅರ್ಹತಾ ಪರೀಕ್ಷೆ(K-TET) ಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
ಇದನ್ನೂ ಓದಿ: KPSC ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 82,400 ಸಂಬಳ
ವಯೋಮಿತಿ:
ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-40 ವರ್ಷದೊಳಗಿರಬೇಕು.
ವೇತನ:
ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹ 29,200-62,400 ವೇತನ ನೀಡಲಾಗುತ್ತದೆ.
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ / ಓಎಂಆರ್/ ಆನ್ಲೈನ್ ಟೆಸ್ಟ್
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ