ಸೆ. 18, 19ರಂದು SDA ಪರೀಕ್ಷೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ KPSC

ಸೆ. 18ರಂದು ಕನ್ನಡ ಭಾಷಾ ಪರೀಕ್ಷೆಯನ್ನು ಸೆ .19ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು

ಕೆಪಿಎಸ್​ಸಿ

ಕೆಪಿಎಸ್​ಸಿ

 • Share this:
  ಬೆಂಗಳೂರು (ಜೂ. 30): ಮಾರ್ಚ್​ನಲ್ಲಿ ಮುಂದೂಡಲ್ಪಟ್ಟಿದ್ದ ದ್ವಿತೀಯ ದರ್ಜೆ ಸಹಾಯಕರ (ಎಸ್​ಡಿಎ) ಪರೀಕ್ಷೆಯನ್ನು ಸೆಪ್ಟೆಂಬರ್​ನಲ್ಲಿ ಮರು ನಿಗದಿಸಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ಪರೀಕ್ಷೆ ನಡೆಸಲು ಮುಂದಾಗಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಪಿಎಸ್​ಸಿ ಕಾರ್ಯದರ್ಶಿ ಜಿ ಸತ್ಯವತಿ, ಪರಿಷ್ಕೃತ ವೇಳಾಪಟ್ಟಿಯಂತೆ ಸೆಪ್ಟೆಂಬರ್​ 18 ಮತ್ತು 19 ರಂದು ರಾಜ್ಯಾದ್ಯಂತ ಎಸ್​ಡಿಎ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸೆ. 18ರಂದು ಕನ್ನಡ ಭಾಷಾ ಪರೀಕ್ಷೆಯನ್ನು ಸೆ .19ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

  ಎರಡು ಬಾರಿ ಮುಂದೂಡಿದ್ದ ಪರೀಕ್ಷೆ

  ಕಳೆದ ಜನವರಿ 24 ರಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆಯ ಹಿಂದಿನ ದಿನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಹಿನ್ನಲೆ ಎಸ್​ಡಿಎ ಪರೀಕ್ಷೆ ರದ್ದು ಮಾಡಿತ್ತು. ಬಳಿಕ  ಮಾರ್ಚ್​ 20 ಮತ್ತು 21ರಂದು ಪರೀಕ್ಷೆ ನಿಗದಿಸಿತ್ತು. ಈ ವೇಳೆ ಕೂಡ ಪರೀಕ್ಷೆಗೆ ಪೂರ್ವ ಸಿದ್ಧತೆ ಕಾಲಾವಕಾಶ ಕೊರತೆಯಿಂದ ಮುಂದೂಡಿತ್ತು. ಇದಾದ ಬಳಿಕ ಕೊರೋನಾ ಸೋಂಕು ರಾಜ್ಯದಲ್ಲಿ ಹೆಚ್ಚಾದ ಪರಿಣಾಮ ಪರೀಕ್ಷೆ ದಿನಾಂಕವನ್ನು ಪ್ರಕಟಿಸಿರಲಿಲ್ಲ.  ಈಗ ಲಸಿಕೆ ಲಭ್ಯತೆ ಇದ್ದು, ಸೋಂಕು ಕೂಡ ಇಳಿಕೆಯಾಗಿರುವ ಹಿನ್ನಲೆ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈಗಾಗಲೇ ಅನೇಕ ಉದ್ಯೋಗಾಕಾಂಕ್ಷಿಗಳು ಪರೀಕ್ಷೆ ತಯಾರಿ ನಡೆಸುತ್ತ ಎದುರು ನೋಡುತ್ತಿದ್ದಾರೆ.
  Published by:Seema R
  First published: