• Home
  • »
  • News
  • »
  • jobs
  • »
  • Govt Job: ಕೆಪಿಎಸ್​ಸಿ-ಯುಪಿಎಸ್​ಸಿಯ ಈ ಹುದ್ದೆಗೆ ಈ ತಿಂಗಳೊಳಗೆ ಅರ್ಜಿ ಸಲ್ಲಿಸಿ; ಇಲ್ಲಿದೆ ವಾರದ ಟಾಪ್​ ನೇಮಕಾತಿಗಳು

Govt Job: ಕೆಪಿಎಸ್​ಸಿ-ಯುಪಿಎಸ್​ಸಿಯ ಈ ಹುದ್ದೆಗೆ ಈ ತಿಂಗಳೊಳಗೆ ಅರ್ಜಿ ಸಲ್ಲಿಸಿ; ಇಲ್ಲಿದೆ ವಾರದ ಟಾಪ್​ ನೇಮಕಾತಿಗಳು

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಕಾಲ ಕಾಲಕ್ಕೆ ವಿವಿಧ ಹುದ್ದೆಗಳ ನೇಮಕಾತಿ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು. ಆಗಸ್ಟ್​​​-ಸೆಪ್ಟೆಂಬರ್​ ತಿಂಗಳಿನಲ್ಲಿ ಹೊರಡಿಸಲಾದ ಪ್ರಮುಖ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಈ ತಿಂಗಳು ಅಂತ್ಯದವರೆಗೆ ಅವಕಾಶ ಇದೆ. ಈ ಹುದ್ದೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಮುಂದೆ ಓದಿ ...
  • Share this:

    ಪಿಎಸ್​ಸಿಯಿಂದ (Karnataka Public Service Commission) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಗ್ರೂಪ್​ ಬಿ ವೃಂದದಲ್ಲಿನ ಸಹಾಯಕ ಅಭಿಯಂತರರ (ಗ್ರೇಡ್​-1) (Assistant Engineer) 129 ಹುದ್ದೆ ಮತ್ತು ಹೈದ್ರಾಬಾದ್​ ಕರ್ನಾಟಕದ 59 ಹುದ್ದೆಗಳಿಗೆ ಮಾರ್ಚ್​ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಅದಕ್ಕೆ ಮತ್ತೆ ಹೆಚ್ಚುವರಿಯಾಗಿ 100 ಹುದ್ದೆಗಳು ಸೇರಿದಂತೆ 229 ಹುದ್ದೆಗಳು ಭರ್ತಿಗೆ ಮುಂದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 30 ಆಗಿದೆ.


    ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಸವಿವರ ಪಡೆಯಲಿ ಇಲ್ಲಿ ಕ್ಲಿಕ್​ ಮಾಡಿ: ಕೆಪಿಎಸ್​ಸಿಯಿಂದ 229 ಅಸಿಸ್ಟಂಟ್​ ಇಂಜಿನಿಯರ್​ ಹುದ್ದೆಗೆ ಅರ್ಜಿ ಆಹ್ವಾನ


    UPSC Recruitment 2022: ಕೇಂದ್ರ ಲೋಕ ಸೇವಾ ಆಯೋಗದಿಂದ (union Public Service Commission)  ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಗೃಹ ವ್ಯವಹಾರಗಳು ಮತ್ತು ಇತರ ಸಚಿವಾಲಯಗಳಲ್ಲಿ ಜಾರಿ ನಿರ್ದೇಶಕ ಅಧಿಕಾರಿ ಸೈಂಟಿಸ್ಟ್​ ಬಿ ಹುದ್ದೆಗೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 54 ಹುದ್ದೆಗಳ ಭರ್ತಿಗೆ ಮುಂದಾಗಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 29 ಆಗಿದೆ.


    ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಸವಿವರ ಪಡೆಯಲಿ ಇಲ್ಲಿ ಕ್ಲಿಕ್​ ಮಾಡಿ :  ಕೇಂದ್ರ ಲೋಕ ಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


    ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಿಂದ (State Bank Of India) 5008 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಜೂನಿಯರ್ ಅಸೋಸಿಯೇಟ್ಸ್ (ಕಸ್ಟಮರ್​ ಸಪೋರ್ಟ್​ ಅಂಡ್​ ಸೇಲ್ಸ್​​)ನಲ್ಲಿ ಈ ಪ್ರಮಾಣದ ನೇಮಕಾತಿಗೆ ಅರ್ಜಿ ಹೊರಡಿಸಲಾಗಿದೆ. ದೇಶಾದ್ಯಂತ ಈ ನೇಮಕಾತಿ ನಡೆಯಲಿದೆ. ಇನ್ನು ಕರ್ನಾಟಕಕ್ಕೆ 316 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಈ ಮೂಲಕ ಬ್ಯಾಂಕಿಂಗ್​ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಪದವೀಧರ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ನೀಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 27 ಆಗಿದೆ.


    ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಸವಿವರ ಪಡೆಯಲಿ ಇಲ್ಲಿ ಕ್ಲಿಕ್​ ಮಾಡಿ: ಎಸ್​ಬಿಐನಲ್ಲಿ 5008 ಜೆಎ ನೇಮಕಕ್ಕೆ ಅರ್ಜಿ ಆಹ್ವಾನ; ಕರ್ನಾಟಕಕ್ಕೆ 316 ಹುದ್ದೆ


    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ (Health and Family Welfare Department) ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಫಾರ್ಮಸಿ ಆಫೀಸರ್​, ಕಿರಿಯ ಆರೋಗ್ಯ ಸಹಾಯಕ ಸೇರಿದಂತೆ ಒಟ್ಟು 320 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 28 ಸೆಪ್ಟೆಂಬರ್​ ಆಗಿದೆ.


    ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಸವಿವರ ಪಡೆಯಲಿ ಇಲ್ಲಿ ಕ್ಲಿಕ್​ ಮಾಡಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ; 320 ಹುದ್ದೆಗಳಿಗೆ ಅರ್ಜಿ ಆಹ್ವಾನ


    ಕರ್ನಾಟಕ ಲೋಕ ಸೇವಾ ಆಯೋಗದಿಂದ (Karnataka Public Service Commission) ಮೀನುಗಾರಿಕೆ ಸಹಾಯಕ ನಿರ್ದೇಶಕರ (Assistant Director of Fisheries) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹೈದ್ರಾಬಾದ್​​-ಕರ್ನಾಟಕ ವೃಂದದಲ್ಲಿನ ಖಾಲಿ ಇರುವ ಗ್ರೂಪ್​-ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಅಕ್ಟೋಬರ್​ 19 ಆಗಿದೆ.


    ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಸವಿವರ ಪಡೆಯಲಿ ಇಲ್ಲಿ ಕ್ಲಿಕ್​ ಮಾಡಿ: ಮೀನುಗಾರಿಕೆ ಇಲಾಖೆಯಲ್ಲಿ ಉದ್ಯೋಗಾವಕಾಶ; ಗ್ರೂಪ್​ ಬಿ ಹುದ್ದೆಗೆ ಅರ್ಜಿ ಆಹ್ವಾನ


    ಕರ್ನಾಟಕ ಲೋಕ ಸೇವಾ ಆಯೋಗದಿಂದ (Karnataka Loka Seva Ayoga) ಸಹಾಯಕ ನಿರ್ದೇಶಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ಉಳಿಕೆ ಮೂಲ ವೃಂದದ ಗ್ರೂಪ್​ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 16 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 15 ಆಗಿದೆ.


    ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಸವಿವರ ಪಡೆಯಲಿ ಇಲ್ಲಿ ಕ್ಲಿಕ್​ ಮಾಡಿ: ಪಿಎಸ್​ಸಿಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನ

    Published by:Seema R
    First published: