Govt Job in Kolar: ಕೋಲಾರ ಜಿಲ್ಲಾ ಪಂಚಾಯತ್​ನಲ್ಲಿದೆ 46 ಹುದ್ದೆ; ಲಿಖಿತ ಪರೀಕ್ಷೆ ಇಲ್ಲ, ನೇರ ನೇಮಕಾತಿ

ಕೋಲಾರ ಜಿಲ್ಲೆಯ ಆರು ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ ಈ ಹುದ್ದೆಗಳು ಖಾಲಿ ಇದೆ. ಅಭ್ಯರ್ಥಿಗಳು ವಿದ್ಯಾರ್ಹತೆ ಮತ್ತು ಮೀಸಲಾತಿ ಅನ್ವಯ ನೇರ ನೇಮಕಾತಿ ನಡೆಸಲಾಗುವುದು.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಕೋಲಾರ ಜಿಲ್ಲಾ ಪಂಚಾಯತ್ (Kolar Zilla Panchayat)​ ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಗ್ರಾಮ ಪಂಚಾಯತ್​ನಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಟೆಂಡೆಂಟ್ (Attendant)​, ಡಾಟಾ ಎಂಟ್ರಿ ಆಪರೇಟರ್​​ ಮತ್ತು ಕ್ಲರ್ಕ್ (Data Entry operator and Clerk)​ ಸೇರಿದಂತೆ ಒಟ್ಟು 46 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆಯನ್ನು ಆಫ್​ಲೈನ್​ ಮೂಲಕ ಮಾಡಬೇಕಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 24 ಆಗಿದೆ.

    ಕೋಲಾರ ಜಿಲ್ಲೆಯ ಆರು ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ ಈ ಹುದ್ದೆಗಳು ಖಾಲಿ ಇದೆ. ಅಭ್ಯರ್ಥಿಗಳು ವಿದ್ಯಾರ್ಹತೆ ಮತ್ತು ಮೀಸಲಾತಿ ಅನ್ವಯ ನೇರ ನೇಮಕಾತಿ ನಡೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಕೋಲಾರ ಜಿಲ್ಲಾ ಪಂಚಾಯತ್ (ಕೋಲಾರ ಜಿಲ್ಲಾ ಪಂಚಾಯತ್)
    ಹುದ್ದೆಯ ಹೆಸರು: ಅಟೆಂಡೆಂಟ್, ಡಿಇಒ, ಕ್ಲರ್ಕ್
    ಹುದ್ದೆಗಳ ಸಂಖ್ಯೆ: 46
    ಉದ್ಯೋಗ ಸ್ಥಳ: ಕೋಲಾರ - ಕರ್ನಾಟಕ
    ವೇತನ: ಕೋಲಾರ ಜಿಲ್ಲಾ ಪಂಚಾಯತ್ ನೇಮಕಾತಿ ನಿಯಮಗಳ ಪ್ರಕಾರ























    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆ
    ಕರ ವಸೂಲಿಗಾರ, ಕ್ಲರ್ಕ್4ಪಿಯುಸಿ
    ಡೇಟಾ ಎಂಟ್ರಿ ಆಪರೇಟರ್12ಪಿಯುಸಿ
    ಅಟೆಂಡೆಂಟ್​30ಎಸ್​ಎಸ್​ಎಲ್​ಸಿ

    ವಿದ್ಯಾರ್ಹತೆ: ಕೋಲಾರ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

    ವಯಸ್ಸಿನ ಸಡಿಲಿಕೆ:
    ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳು: 05 ವರ್ಷಗಳು
    ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 03 ವರ್ಷಗಳು

    ಅರ್ಜಿ ಸಲ್ಲಿಕೆ: ಆಫ್​ಲೈನ್​

    ಅರ್ಜಿ ಶುಲ್ಕ: ವಿನಾಯಿತಿ ನೀಡಲಾಗಿದೆ

    ಆಯ್ಕೆ ಪ್ರಕ್ರಿಯೆ
    ಮೆರಿಟ್ ಪಟ್ಟಿ ಮತ್ತು ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ

    ಇದನ್ನು ಓದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆ; ಎಲ್ಲಿ, ಎಷ್ಟು ಹುದ್ದೆ? ಇಲ್ಲಿದೆ ಸಂಪೂರ್ಣ ವಿವರ

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08 ಆಗಸ್ಟ್​​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಆಗಸ್ಟ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: zpkolar.kar.nic.in

    ಇದನ್ನು ಓದಿ: ಚಾಮರಾಮನಗರದಲ್ಲಿ ಹಿರಿಯ ವಿಶ್ಲೇಷಕ ಹುದ್ದೆಗೆ ಅರ್ಜಿ ಆಹ್ವಾನ

    ಅರ್ಜಿ ಸಲ್ಲಿಕೆ ವಿಳಾಸ

    ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಕೋಲಾರ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ  ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
    Published by:Seema R
    First published: