District Court Recruitment: ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ 32 ಹುದ್ದೆಗಳಿಗೆ ನೇಮಕಾತಿ; SSLC ಆದವರಿಗೆ ಅವಕಾಶ

ಕೋಲಾರ ಜಿಲ್ಲಾ ನ್ಯಾಯಾಲಯದ Kolar District Court) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಜವಾನ (Peon), ಸ್ಟೆನೋಗ್ರಾಫರ್ ಹುದ್ದೆಗಳಿಗೆ ಹುದ್ದೆಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಲಾರ ಜಿಲ್ಲಾ ನ್ಯಾಯಾಲಯದ (Kolar District Court) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಜವಾನ (Peon), ಸ್ಟೆನೋಗ್ರಾಫರ್ ಹುದ್ದೆಗಳಿಗೆ ಹುದ್ದೆಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಆನ್​ಲೈನ್ (Online)​ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 26ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.

ಸಂಸ್ಥೆಯ ಹೆಸರು : ಕೋಲಾರ ಜಿಲ್ಲಾ ನ್ಯಾಯಾಲಯ
ಖಾಲಿ ಇರುವ ಹುದ್ದೆಗಳ ಸಂಖ್ಯೆ: 32
ಉದ್ಯೋಗ ಸ್ಥಳ: ಕೋಲಾರ - ಕರ್ನಾಟಕ
ಖಾಲಿ ಇರುವ ಹುದ್ದೆಗಳು : ಪ್ಯೂನ್ , ಸ್ಟೆನೋಗ್ರಾಫರ್
ಸಂಬಳ: 17000-52650 ರೂ. ಪ್ರತಿ ತಿಂಗಳು

ಹುದ್ದೆ ವಿವರ: 

ಹುದ್ದೆಗಳುಹುದ್ದೆಗಳ ಸಂಖ್ಯೆವಿದ್ಯಾರ್ಹತೆವೇತನ
ಪ್ಯೂನ್22SSLC17000-28950 ರೂ ಮಾಸಿಕ
ಸ್ಟೆನೋಗ್ರಾಫರ್10PUC, ಡಿಪ್ಲೋಮಾ27650-52650 ರೂ ಮಾಸಿಕ

ವಯಸ್ಸಿನ ಮಿತಿ: ಕೋಲಾರ ಜಿಲ್ಲಾ ಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 26-ಜುಲೈ-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯಸ್ಸಿನ ಸಡಿಲಿಕೆ

SC, ST ಮತ್ತು Cat-I ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು Cat-2A, 2B/3A ಮತ್ತು 3B  ಅಭ್ಯರ್ಥಿಗಳಿಗೆ 3 ವರ್ಷಗಳ ವಯಸ್ಸಿನ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಶುಲ್ಕ (Application Fees):

SC/ST/Cat-I & PH ಅಭ್ಯರ್ಥಿಗಳು: 100 ರೂ
ಸಾಮಾನ್ಯ/ಕ್ಯಾಟ್-2A/2B/3A & 3B ಅಭ್ಯರ್ಥಿಗಳು: 200 ರೂ

ಪಾವತಿ ವಿಧಾನ (Paymate Method): ಆನ್‌ಲೈನ್ ಅಥವಾ ಚಲನ್

ಆಯ್ಕೆ ಪ್ರಕ್ರಿಯೆ (Selection Prcess):
ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು (Important Dates):

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯು ಈಗಾಗಲೇ ಆರಂಭವಾಗಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 26, 2022
ಬ್ಯಾಂಕ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಜುಲೈ  28, 2022

ಅಧಿಸೂಚನೆ ಪ್ರಮುಖ ಲಿಂಕ್‌ಗಳು (Notification Links):

ಅಧಿಕೃತ ಅಧಿಸೂಚನೆ - ಪ್ಯೂನ್:  ಇಲ್ಲಿ ಕ್ಲಿಕ್​ ಮಾಡಿ
ಅಧಿಕೃತ ಅಧಿಸೂಚನೆ - ಸ್ಟೆನೋಗ್ರಾಫರ್: 
ಇಲ್ಲಿ ಕ್ಲಿಕ್​ ಮಾಡಿ
ಅಧಿಕೃತ ವೆಬ್‌ಸೈಟ್:
districts.ecourts.gov.in

ಅರ್ಜಿ ಸಲ್ಲಿಕೆ ವಿಧಾನ (How To apply):

- ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

- ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

ಕೋಲಾರ ಜಿಲ್ಲಾ ನ್ಯಾಯಾಲಯದ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

- ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

- ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.
Published by:shrikrishna bhat
First published: