KMC Recruitment 2021: ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್(Kolkata Municipal Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 60 ಮೆಡಿಕಲ್ ಆಫೀಸರ್(Medical Officer) ಹುದ್ದೆಗಳು ಖಾಲಿ ಇದ್ದು, ಎಂಬಿಬಿಎಸ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದೇ ನವೆಂಬರ್ 29ರಂದು ನೇರ ಸಂದರ್ಶನ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ |
ಹುದ್ದೆಯ ಹೆಸರು |
ಮೆಡಿಕಲ್ ಆಫೀಸರ್ |
ಒಟ್ಟು ಹುದ್ದೆಗಳು |
60 |
ವಿದ್ಯಾರ್ಹತೆ |
ಎಂಬಿಬಿಎಸ್ |
ಉದ್ಯೋಗದ ಸ್ಥಳ |
ಕೊಲ್ಕತ್ತಾ |
ವೇತನ |
ಮಾಸಿಕ ₹ 24,000-60,000 |
ಆಯ್ಕೆ ವಿಧಾನ |
ಸಂದರ್ಶನ |
ಸಂದರ್ಶನ ನಡೆಯುವ ದಿನಾಂಕ |
29/11/2021 |
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ದಿನಾಂಕ: 17/11/2021
ಸಂದರ್ಶನದ ದಿನಾಂಕ: 29/11/2021
ಇದನ್ನೂ ಓದಿ: Karnataka High Court Jobs: ಕರ್ನಾಟಕ ಹೈಕೋರ್ಟ್ನಲ್ಲಿ ಖಾಲಿ ಇರುವ ಟೈಪಿಸ್ಟ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಹುದ್ದೆಯ ಮಾಹಿತಿ:
ಮೆಡಿಕಲ್ ಆಫೀಸರ್: 14
ಮೆಡಿಕಲ್ ಆಫೀಸರ್ (Part-Time)- 46
ಒಟ್ಟು - 60 ಹುದ್ದೆಗಳು
ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 62 ವರ್ಷ ಮೀರಿರಬಾರದು.
ಉದ್ಯೋಗದ ಸ್ಥಳ:
ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ವೇತನ:
ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 24,000- 60,000 ದವರೆಗೆ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಇದನ್ನೂ ಓದಿ: KEA Recruitment 2021: 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ; ಮತ್ತೊಮ್ಮೆ ದಿನಾಂಕ ವಿಸ್ತರಣೆ, Last Date ಯಾವಾಗ?
ಸಂದರ್ಶನ ನಡೆಯುವ ಸ್ಥಳ:
ಕೊಠಡಿ ಸಂಖ್ಯೆ -254, 2ನೇ ಮಹಡಿ, ಪಿಎಂಯು
ಕೊಲ್ಕತ್ತಾ ಸಿಟಿ NHUM ಸೊಸೈಟಿ, 5, ಎಸ್.ಎನ್. ಬ್ಯಾನರ್ಜಿ ರಸ್ತೆ
ಕೊಲ್ಕತ್ತಾ- 700013
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ