ಬೆಳಗಾವಿಯ ಪ್ರತಿಷ್ಠಿತ ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿಯಲ್ಲಿ (Karnataka Lingayat Education Society) ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆ ಸೇರಿ ಒಟ್ಟು 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ನಾತಕೋತ್ತರ ಪದವೀಧರರಿಗೆ ಉತ್ತಮ ಅವಕಾಶವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 4 ಕಡೆಯ ದಿನಾಂಕವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ
ಸಂಸ್ಥೆಯ ಹೆಸರು: ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿ (ಕೆಎಲ್ಇ ಸೊಸೈಟಿ)
ಹುದ್ದೆಗಳ ಸಂಖ್ಯೆ: 14
ಉದ್ಯೋಗ ಸ್ಥಳ: ಬೆಳಗಾವಿ
ಹುದ್ದೆಯ ಹೆಸರು: ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್
ಸಂಬಳ: ಕೆಎಲ್ಇ ಸೊಸೈಟಿ ನಿಯಮಗಳ ಪ್ರಕಾರ
ಹುದ್ದೆಗಳು |
ಹುದ್ದೆ ಸಂಖ್ಯೆ |
ವಿದ್ಯಾರ್ಹತೆ |
ಪ್ರಾಧ್ಯಾಪಕರು |
3 |
ಎಂಡಿ (ಆಯುರ್ವೇದಿಕ್) |
ಸಹ ಪ್ರಾಧ್ಯಾಪಕರು |
3 |
ಎಂಡಿ (ಆಯುರ್ವೇದಿಕ್) |
ಸಹಾಯಕ ಪ್ರಾಧ್ಯಾಪಕರು |
3 |
ಎಂಡಿ (ಆಯುರ್ವೇದಿಕ್) |
ಸಹಾಯಕ ಪ್ರಾಧ್ಯಾಪಕರು |
1 |
ಎಂ.ಎ (ಸಂಸ್ಕೃತ) |
ಲೈಬ್ರೆರಿಯನ್ |
1 |
ಎಂಎಲ್ಐಎಸ್ಸಿ |
ಸಹಾಯಕ ಲೈಬ್ರೆರಿಯನ್ |
1 |
ಬಿಎಲ್ಐಎಸ್ಸಿ |
ರೆಸಿಡೆಂಟ್ ಮೆಡಿಕಲ್ ಆಫೀಸ್ |
2 |
ಬಿಎಎಂಎಸ್ |
ವಯೋಮಿತಿ: ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು KLE ಸೊಸೈಟಿ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು
ವಯಸ್ಸಿನ ಸಡಿಲಿಕೆ:
ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿ ನಿಯಮಗಳ ಪ್ರಕಾರ
ಇದನ್ನು ಓದಿ: ತುಮಕೂರು ಕೋರ್ಟ್ನಲ್ಲಿ 51 ಹುದ್ದೆ ನೇಮಕಾತಿ; ಎಸ್ಎಸ್ಎಲ್ಸಿ ಆಗಿದ್ರೆ ಸಾಕು
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ವಿದ್ಯಾರ್ಹತೆ ಮತ್ತು ಅನುಭವ
ಹೊಸ ದೆಹಲಿ ಎನ್ಸಿಐಎಸ್ಎಂನ ನಿಯಾಮಾವಳಿ ಅನುಸಾರವಾಗಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹಿಂದಿರಬೇಕು
ಸೂಚನೆ
ಹೆಚ್ಚಿನ ಮಾಹಿತಿಗೆ 9164648888ಗೆ ಸಂಪರ್ಕಿಸಬಹುದಾಗಿದೆ
ಜೊತೆಗೆ ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು kleayurvedackd@rediffmail.comಗೆ ಕೂಡ ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗೆ ಕಳುಹಿಸಬಹುದು
ಅರ್ಜಿ ಸಲ್ಲಿಕೆ
ಆನ್ ಲೈನ್
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ: ಮೇ 25, 2022
ಅರ್ಜಿ ಸಲ್ಲಿಕೆಗೆ ಕಡೆಯ ದಿನ ಜೂನ್ 4, 2022
ಅರ್ಜಿ ಸಲ್ಲಿಸುವ ಲಿಂಕ್
www.kleayuckd.org
ಇದನ್ನು ಓದಿ: ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ
ಅರ್ಜಿ ಸಲ್ಲಿಕೆ ವಿಧಾನ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಸ್ಥೆ ಹೊರಡಿಸಿರುವ ಅಧಿಸೂಚನೆ ಮತ್ತು ಅರ್ಹತಾ ಮಾನದಂಡವನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ
ಬಳಿಕ www.kleayuckd.org ಲಿಂಕ್ಗೆ ಕ್ಲಿಕ್ ಮಾಡಿ. ಅಲ್ಲಿ ನೀಡಿರುವ ನಿಗದಿತ ಅರ್ಜಿ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕಿದೆ.
ಹುದ್ದೆ, ಆಯ್ಕೆ ಕುರಿತು ಯಾವುದೇ ಮಾಹಿತಿ, ಅನುಮಾನಗಳಿದ್ದಲ್ಲಿ ಮೇಲ್ಕಂಡ ಮೊಬೈಲ್ ನಂಬರ್ ಹಾಗೂ ಇ ಮೇಲ್ಗೆ ಭೇಟಿ ನೀಡಿ ವಿವರವನ್ನು ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ