KIOCL Recruitment: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ನೇರ ಸಂದರ್ಶನ​; ಬಿಇ, ಡಿಪ್ಲೊಮಾ ಆದವರಿಗಿದೆ ಕೆಲಸದ ಅವಕಾಶ

ಆಗಸ್ಟ್​ 26ರಂದು ಈ ಕೆಳಗಿನ ವಿಳಾಸದಲ್ಲಿ ಅಭ್ಯರ್ಥಿಗಳು ವಾಕ್​ ಇನ್​ ಇಂಟರ್​ವ್ಯೂಗೆ ಹಾಜರಾಗಬಹುದಾಗಿದೆ.

ವಿವಿಧ ಹುದ್ದೆಗೆ ಅರ್ಜಿ ಹಾಕಿ

ವಿವಿಧ ಹುದ್ದೆಗೆ ಅರ್ಜಿ ಹಾಕಿ

  • Share this:
    ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್​ನಲ್ಲಿ (Kudremukh Iron Ore Company Limited) ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಸಹಾಯಕ ಗಣಿ ಎಂಜಿನಿಯರ್, ಭೂವಿಜ್ಞಾನಿ ಸೇರಿದಂತೆ ಒಟ್ಟು 13 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಗಸ್ಟ್​ 26ರಂದು ಈ ಕೆಳಗಿನ ವಿಳಾಸದಲ್ಲಿ ಅಭ್ಯರ್ಥಿಗಳು ವಾಕ್​ ಇನ್​ ಇಂಟರ್​ವ್ಯೂಗೆ ಹಾಜರಾಗಬಹುದಾಗಿದೆ.

    ಈ ಹುದ್ದೆಗಳನ್ನು ತಾತ್ಕಾಲಿಕ ಅವಧಿಗೆ ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರಿತವಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL)
    ಹುದ್ದೆಯ ಹೆಸರು: ಸಹಾಯಕ ಗಣಿ ಎಂಜಿನಿಯರ್, ಭೂವಿಜ್ಞಾನಿ
    ಹುದ್ದೆಗಳ ಸಂಖ್ಯೆ: 13
    ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
    ಸಂಬಳ: 25000-50000 ರೂ. ಪ್ರತಿ ತಿಂಗಳು







































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಸಹಾಯಕ ಗಣಿಗಾರಿಕೆ ವ್ಯವಸ್ಥಾಪಕ3ಮೈನಿಂಗ್​ ಇಂಜಿನಿಯರಿಂಗ್​ ಪದವಿ40000 ರೂ ಮಾಸಿಕ
    ಸಹಾಯಕ ಸರ್ವೇಯರ್1ಮೈನಿಂಗ್​ ಅಥವಾ ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಬಿಇ ಅಥವಾ ಡಿಪ್ಲೊಮಾ30000-40000 ರೂ ಮಾಸಿಕ
    ಸಹಾಯಕ ಭೂವಿಜ್ಞಾನಿ3ಜಿಯೋಲಾಜಿಯಲ್ಲಿ ಪದವಿ40000 ರೂ ಮಾಸಿಕ
    ಭೂವಿಜ್ಞಾನಿ4ಜಿಯೋಲಾಜಿಯಲ್ಲಿ ಪದವಿ50000 ರೂ ಮಾಸಿಕ
    ಕಿರಿಯ ಭೂವಿಜ್ಞಾನಿ (ಟ್ರೇನಿ)2ಎಂಎಸ್ಸಿ, ಎಂಟೆಕ್25000 ರೂ ಮಾಸಿಕ

    ವಯಸ್ಸಿನ ಮಿತಿ: ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 31-ಜುಲೈ-2022 ರಂತೆ 35 ವರ್ಷಗಳು

    ಇದನ್ನು ಓದಿ: ಕೇಂದ್ರೀಯ ವಿವಿಯಲ್ಲಿದೆ ಲೈಬ್ರರಿ ಟ್ರೈನಿ ಹುದ್ದೆಗಳು; ವಾಕ್​-ಇನ್​-ಇಂಟರ್​ವ್ಯೂನಲ್ಲಿ ಭಾಗಿಯಾಗಿ

    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು:  3 ವರ್ಷಗಳು
    ಪ.ಜಾ, ಪ.ಪಂ ಅಭ್ಯರ್ಥಿಗಳು:  5 ವರ್ಷಗಳು

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ನೇರ ಸಂದರ್ಶನ ನಡೆಯುವ ಸ್ಥಳ

    KIOCL ಲಿಮಿಟೆಡ್, ಕಾರ್ಪೊರೇಟ್ ಕಚೇರಿ, 2ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560034.

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 18 ಆಗಸ್ಟ್​​ 2022
    ವಾಕ್-ಇನ್ ದಿನಾಂಕ: 26 ಆಗಸ್ಟ್ 2022

    ಇದನ್ನು ಓದಿ: ಕರ್ನಾಟಕ ಸ್ಟೇಟ್ ಮಿನರಲ್ಸ್​​ನಲ್ಲಿ 31 ಹುದ್ದೆಗೆ ನೇರ ಸಂದರ್ಶನ; ಇಲ್ಲಿದೆ ಸಂಪೂರ್ಣ ಮಾಹಿತಿ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: kioclltd.in

    ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

    ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ವೆಬ್​ಸೈಟ್​ನಲ್ಲಿ ನೀಡಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
    ಪದವಿ ಮತ್ತು 10ನೇ ತರಗತಿ ಮಾರ್ಕ್ಸ್​ ಕಾರ್ಡ್​​
    ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
    ಜಾತಿ ಪ್ರಮಾಣ ಪತ್ರ
    ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
    ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ.
    Published by:Seema R
    First published: