Khadi Karnataka Recruitment 2021: ಕರ್ನಾಟಕ ಖಾದಿ ಮಂಡಳಿ ನೇಮಕಾತಿ; ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎರಡೇ ದಿನ ಬಾಕಿ

ಅಕ್ಟೋಬರ್ 22ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last date)ವಾಗಿದೆ. ಆಯಾ ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆಯನ್ನು ಕೇಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ(Karnataka State Khadi and Village Industries Board) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 29 ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ(District Khadi Gramodyoga officer), ಪ್ರಥಮ ದರ್ಜೆ ಸಹಾಯಕರು(First Division Assistant), ತಾಂತ್ರಿಕ ಮೇಲ್ವಿಚಾರಕರು(Technical Supervisor), ತಾಂತ್ರಿಕ ಸಹಾಯಕರು(Technical Assistant) ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​​​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 22ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last date)ವಾಗಿದೆ. ಆಯಾ ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆಯನ್ನು ಕೇಳಲಾಗಿದೆ. ಸ್ನಾತಕೋತ್ತರ ಪದವಿ, ಪದವಿ, ಡಿಪ್ಲೋಮಾ ಹಾಗೂ ಐಟಿಐ ಪಾಸಾಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧಿಕೃತ ವೆಬ್​ಸೈಟ್​ khadi.karnataka.gov.in ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.













































ಸಂಸ್ಥೆಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ಹುದ್ದೆಯ ಹೆಸರುಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಪ್ರಥಮ ದರ್ಜೆ ಸಹಾಯಕರು, ತಾಂತ್ರಿಕ ಮೇಲ್ವಿಚಾರಕರು, ತಾಂತ್ರಿಕ ಸಹಾಯಕರು.
ಒಟ್ಟು ಹುದ್ದೆಗಳು29
ವಿದ್ಯಾರ್ಹತೆಸ್ನಾತಕೋತ್ತರ ಪದವಿ, ಪದವಿ, ಡಿಪ್ಲೋಮಾ, ಐಟಿಐ
ವಯೋಮಿತಿ18-38 ವರ್ಷ
ಉದ್ಯೋಗದ ಸ್ಥಳಬೆಂಗಳೂರು
ವೇತನಮಾಸಿಕ ₹21,400- ₹ 88,300
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ22/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ24/11/2021



ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24/11/2021

ಇದನ್ನೂ ಓದಿ: UCIL Recruitment 2021: ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾದಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 46,000

ಹುದ್ದೆಯ ವಿವರ:

ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ- 2 ಹುದ್ದೆಗಳು
ಪ್ರಥಮ ದರ್ಜೆ ಸಹಾಯಕರು(FDA)- 9 ಹುದ್ದೆಗಳು
ತಾಂತ್ರಿಕ ಮೇಲ್ವಿಚಾರಕರು- 5 ಹುದ್ದೆಗಳು
ತಾಂತ್ರಿಕ ಸಹಾಯಕರು- 13 ಹುದ್ದೆಗಳು
ಒಟ್ಟು -29 ಹುದ್ದೆಗಳು

ವಿದ್ಯಾರ್ಹತೆ:

ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ- ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಪ್ರಥಮ ದರ್ಜೆ ಸಹಾಯಕರು(FDA)- ಯಾವುದೇ ಪದವಿ ಪಡೆದಿರಬೇಕು.

ತಾಂತ್ರಿಕ ಮೇಲ್ವಿಚಾರಕರು- ಬಿಎಸ್ಸಿ ಅಥವಾ ಡಿಪ್ಲೋಮಾ ಪಾಸಾಗಿರಬೇಕು

ತಾಂತ್ರಿಕ ಸಹಾಯಕರು- ಯಾವುದೇ ಟ್ರೇಡ್​ನಲ್ಲಿ ಐಟಿಐ ಪಾಸಾಗಿರಬೇಕು.



ಅರ್ಜಿ ಶುಲ್ಕ:

ಸಾಮಾನ್ಯ ವರ್ಗ/ ಹಿಂದುಳಿದ ವರ್ಗದ ಅಭ್ಯರ್ಥಿಗಳು 800 ರೂ. ಅರ್ಜಿ ಶುಲ್ಕ
ಪಾವತಿಸಬೇಕು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1/ ಮಾಜಿ ಸೈನಿಕ ಅಭ್ಯರ್ಥಿಗಳು 400 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವಯೋಮಿತಿ:

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇರುವ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಅದೇ ರೀತಿ ಗರಿಷ್ಠ 38 ವರ್ಷ ಮೀರಿರಬಾರದು. ಸಾಮಾನ್ಯ ಅಭ್ಯರ್ಥಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್​ಸಿ/ಎಸ್​ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ:

ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ- ಮಾಸಿಕ ₹ 45,300-88,300
ಪ್ರಥಮ ದರ್ಜೆ ಸಹಾಯಕರು(FDA)- ಮಾಸಿಕ ₹ 27,650-52,650
ತಾಂತ್ರಿಕ ಮೇಲ್ವಿಚಾರಕರು- ಮಾಸಿಕ ₹ 27,650-52,650
ತಾಂತ್ರಿಕ ಸಹಾಯಕರು- ಮಾಸಿಕ ₹ 21,400-42,000

ಇದನ್ನೂ ಓದಿ:MGNREGA Recruitment 2021: ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧಿಕೃತ ವೆಬ್​ಸೈಟ್​ https://khadi.karnataka.gov.in/ ಗೆ ಭೇಟಿ ನೀಡಿ.

ಪರೀಕ್ಷಾ ಕೇಂದ್ರಗಳು:

ಬೆಂಗಳೂರು, ಮಂಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬೆಳಗಾವಿ, ದಾವಣಗೆರೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: