Karnataka Jobs: ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.31 ಕೊನೆಯ ದಿನ; ಸ್ನಾತಕೋತ್ತರ ಪದವೀಧರರಿಗೆ ಉತ್ತಮ ಅವಕಾಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್​ಸೈಟ್​​ https://kea.kar.nic.in ನಲ್ಲಿ ತೋರಿಸಿರುವ Assistant Professors Recruitment -2021 ಲಿಂಕ್​ನ್ನು ಆಯ್ಕೆ ಮಾಡಿ ಆನ್​ಲೈನ್​ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ(Government First Grade college) ಸಹಾಯಕ ಪ್ರಾಧ್ಯಾಪಕರ(Assistant Professors) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ(Competitive Exam) ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ(Karnataka Government) ಅಧಿಸೂಚನೆಯನ್ನು(Notification) ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಸಲು ಇನ್ನು ಕೇವಲ ಒಂದು ವಾರವಷ್ಟೇ ಬಾಕಿ ಇದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(Karnataka Examination Authority) ವೆಬ್​ಸೈ ಟ್​ನಲ್ಲೂ ಸಹ ನೋಟಿಫಿಕೇಶನ್ ಬಿಡುಗಡೆಯಾಗಿದೆ. 2015ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳ ಲಭ್ಯವಿಲ್ಲದೇ ಭರ್ತಿಯಾಗಿರುವ 145 ಹುದ್ದೆಗಳನ್ನು ಒಳಗೊಂಡಂತೆ, ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.

ಈ ಕೆಳಕಂಡ ವಿಷಯಗಳಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯನ್ನು ನಡೆಸಲಾಗುತ್ತದೆ.

  • ಕನ್ನಡ

  • ಇಂಗ್ಲಿಷ್

  • ಹಿಂದಿ

  • ಉರ್ದು

  • ಇತಿಹಾಸ

  • ಅರ್ಥಶಾಸ್ತ್ರ

  • ರಾಜ್ಯಶಾಸ್ತ್ರ

  • ಸಮಾಜಶಾಸ್ತ್ರ

  • ಶಿಕ್ಷಣ ಶಾಸ್ತ್ರ

  • ಕಾನೂನು

  • ಸಮಾಜ ಕಾರ್ಯ

  • ಭೋಗೋಳ ಶಾಸ್ತ್ರ

  • ಭೂಗರ್ಭ ಶಾಸ್ತ್ರ

  • ವಾಣಿಜ್ಯ ಶಾಸ್ತ್ರ

  • ನಿರ್ವಹಣಾ ಶಾಸ್ತ್ರ

  • ಭೌತಶಾಸ್ತ್ರ

  • ರಸಾಯನ ಶಾಸ್ತ್ರ

  • ಜೈವಿಕ ರಸಾಯನ ಶಾಸ್ತ್ರ

  • ಗಣಿತ ಶಾಸ್ತ್ರ

  • ಸೂಕ್ಷ್ಮ ಜೀವಶಾಸ್ತ್ರ

  • ಪ್ರಾಣಿ ಶಾಸ್ತ್ರ

  • ಸಸ್ಯ ಶಾಸ್ತ್ರ

  • ಎಲೆಕ್ಟ್ರಾನಿಕ್ಸ್​

  • ಗಣಕ ವಿಜ್ಞಾನ

  • ಸಂಖ್ಯಾಶಾಸ್ತ್ರ

  • ಫ್ಯಾಶನ್ ಟೆಕ್ನಾಲಜಿ ವಿಯಷಗಳಿಗೆ ನೇಮಕಾತಿ ನಡೆಸಲಾಗುತ್ತದೆ.


ಇದನ್ನೂ ಓದಿ:Karnataka Jobs: ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆ ಮತ್ತು ನೇಮಕಾತಿ ವಿವರ:































ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಹುದ್ದೆ ಸಹಾಯಕ ಪ್ರಾಧ್ಯಾಪಕ
ಒಟ್ಟು ಹುದ್ದೆಗಳು 1242
ವಿದ್ಯಾರ್ಹತೆ ಸ್ನಾತಕೋತ್ತರ ಪದವಿ(Post Graduate) ಜತೆಗೆ, ಎನ್​ಇಟಿ(NET), ಕೆಸ್​ಇಟಿ(K-SET), ಪಿಹೆಚ್​​ಡಿ(Ph.D)
ವೇತನ ಮಾಸಿಕ ₹ 57700-1,82,400
ಅರ್ಜಿ ಸಲ್ಲಿಸಲು ಆರಂಭ ದಿನಾಂಕ 01/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/10/2021





ಹುದ್ದೆ: ಸಹಾಯಕ ಪ್ರಾಧ್ಯಾಪಕ

ಹುದ್ದೆಗಳ ಸಂಖ್ಯೆ: 1242

ವಿದ್ಯಾರ್ಹತೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಖಾಲಿ ಹುದ್ದೆಯ ವಿಷಯಕ್ಕೆ ಸಂಬಂಧಿಸಿದ ಸ್ನಾತಕೋತ್ತರ ಪದವಿ(Post Graduate) ಜತೆಗೆ, ಎನ್​ಇಟಿ(NET), ಕೆಸ್​ಇಟಿ(K-SET), ಪಿಹೆಚ್​​ಡಿ(Ph.D) ಉತ್ತೀರ್ಣರಾಗಿರಬೇಕು.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01/10/2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/10/2021

ಪರೀಕ್ಷೆ ನಡೆಯುವ ಸಂಭವನೀಯ ದಿನಾಂಕ: ಡಿಸೆಂಬರ್ 2021

ವೇತನ ಶ್ರೇಣಿ: ಯುಜಿಸಿ ವೇತನ ಶ್ರೇಣಿ ₹ 57700-1,82,400

ವಯೋಮಿತಿ: ಕನಿಷ್ಠ 22 ವರ್ಷ- ಗರಿಷ್ಠ 40 ವರ್ಷ.
2ಎ, 2ಬಿ, 3ಎ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ.
ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ

ಅರ್ಜಿ ಸಲ್ಲಿಸುವ ವಿಧಾನ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್​ಸೈಟ್​​ https://kea.kar.nic.in ನಲ್ಲಿ ತೋರಿಸಿರುವ Assistant Professors Recruitment -2021 ಲಿಂಕ್​ನ್ನು ಆಯ್ಕೆ ಮಾಡಿ ಆನ್​ಲೈನ್​ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ:Tumkur University: ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ; ಪಿಜಿ ಆದವರಿಗೆ ಅವಕಾಶ

 ಅರ್ಜಿ ಶುಲ್ಕ:

  •  ಸಾಮಾನ್ಯ ಮತ್ತು ಇತರೆ ಪ್ರವರ್ಗಗಳು(ಪ್ರವರ್ಗ-2ಎ/2ಬಿ/3ಎ/3ಬಿ)- 2000 ರೂ.

  • ಎಸ್​ಸಿ/ಎಸ್​ಟಿ ಮತ್ತು ಪ್ರವರ್ಗ-1- 1,000 ರೂ.


ಈ ಹುದ್ದೆಗಳಲ್ಲಿ ಶೇಕಡ.95 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಮತ್ತು ಶೇಕಡಾ 5 ರಷ್ಟು ಇಲಾಖೆಯ ಗ್ರೂಪ್‌ ಸಿ ವೃಂದದಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿದೆ.

ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರು, ಮೈಸೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರ್ಗಿ ಮತ್ತು ಮಂಗಳೂರಿನಲ್ಲಿ ನಡೆಸಲಾಗುವುದು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: