TET Result 2021: 21 ಅಭ್ಯರ್ಥಿಗಳ ಫಲಿತಾಂಶಕ್ಕೆ ತಡೆ; ಶೇ 19ರಷ್ಟು ಅಭ್ಯರ್ಥಿಗಳು ಉತ್ತೀರ್ಣ

ಆಗಸ್ಟ್​ 22 ರಂದು ಕೋವಿಡ್​ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚೆಗೆ ಶಿಕ್ಷಕರ ಹುದ್ದೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ್ದ 2021ನೇ ಸಾಲಿನ ಶಿಕ್ಷಕರ ಅರ್ಹತಾ ಫಲಿತಾಂಶ (KTET Result) ಪ್ರಕಟ ಗೊಂಡಿದೆ. ಈ ಪರೀಕ್ಷೆಯಲ್ಲಿ ಕೇವಲ ಶೇ 19. 43 ರಷ್ಟು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. 2, 31, 886 ಅಭ್ಯರ್ಥಿಗಳು ಶಿಕ್ಷಕ ಅರ್ಹತಾ ಪ್ರವೇಶ ಪರೀಕ್ಷೆ ಬರೆದಿದ್ದರು. ಈ ಪೈಕಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಹುದ್ದೆಗೆ 1 ,02, 282 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 93, 176 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ 13, 639 ಅಭ್ಯರ್ಥಿಗಳು ಶೇ. 60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದರೆ, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ 5, 321 ಅಭ್ಯರ್ಥಿಗಳು ಶೇ.55-60 ನಡುವೆ ಅಂಕಗಳನ್ನು ಪಡೆದಿದ್ದಾರೆ.

    ಸರ್ಕಾರಿ ಶಾಲೆಯಲ್ಲಿ ಖಾಲಿ ಇದ್ದ ಸುಮಾರು 23, 025 ಹುದ್ದೆಗಳು ಖಾಲಿ ಇದ್ದು, ಇದರ ಭರ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಇದೇ ಹಿನ್ನಲೆ ಆಗಸ್ಟ್​ 22 ರಂದು ಕೋವಿಡ್​ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು.

    ಫಲಿತಾಂಶ ನೋಡುವುದು ಹೇಗೆ?
    ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ವೆಬ್​ ಸೈಟ್​ನಲ್ಲಿ ಟಿಇಟಿ ಫಲಿತಾಂಶ ಪ್ರಕಟಗೊಳಿಸಲಾಗಿದೆ. ಈ ವೆಬ್​ ತಾಣಕ್ಕೆ ಅಭ್ಯರ್ಥಿಗಳು ಮೊದಲು ಭೇಟಿ ನೀಡಬೇಕು. ಅಥವಾ ಫಲಿತಾಂಶ ವೀಕ್ಷಣೆಗೆ ಇಲ್ಲಿ ಕ್ಲಿಕ್ಮಾಡಿ.

    ಈ ಪುಟದಲ್ಲಿ ಕಾಣುವ KARTET 2021 ಫಲಿತಾಂಶ ಅಧಿಸೂಚನೆ ಮೇಲೆ ಕ್ಲಿಕ್​ ಮಾಡಿ
    ಈ ವೇಳೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಹಾಕಬೇಕು.

    ಇದನ್ನು ಓದಿ: ಅಭಿವೃದ್ಧಿಯತ್ತ ಉತ್ತರ ಪ್ರದೇಶ ಆಡಳಿತ; ಯೋಗಿ ಆಡಳಿತ ಮೆಚ್ಚಿದ ಪ್ರಧಾನಿ

    ಬಳಿಕ ನಿಮ್ಮ ಫಲಿತಾಂಶ ಪ್ರಕಟವಾಗುತ್ತದೆ. ಅದರ ಪ್ರಿಂಟ್ ಔಟ್​ ತೆಗೆದು ಇಟ್ಟುಕೊಳ್ಳಬೇಕು.

    ಜೀವತಾವಧಿ ಸಿಂಧುತ್ವ ಹೊಂದಿರುವ ಪ್ರಮಾಣ ಪತ್ರ
    ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಈ ಟಿಇಟಿ ಪರೀಕ್ಷೆಯ ಮಾನ್ಯತೆ ಜೀವತಾವಧಿಯಾಗಿದೆ. ಈ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಹೆಚ್ಚಿನ ಅಂಗ ಪಡೆದ ಅಭ್ಯರ್ಥಿಗಳನ್ನು ಮುಂದಿನ ನೇಮಕಾತಿವೇಳೆ ಅರ್ಹರೆಂದು ಪರಿಗಣಿಸಲಾಗುತ್ತದೆ.
    ಎಷ್ಟು ಜನ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

    ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಹುದ್ದೆಗೆ 1,02,282 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 93, 176 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ 13, 639 ಅಭ್ಯರ್ಥಿಗಳು ಶೇ. 60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದರೆ, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ 5,321 ಅಭ್ಯರ್ಥಿಗಳು ಶೇ.55-60 ನಡುವೆ ಅಂಕಗಳನ್ನು ಪಡೆದಿದ್ದಾರೆ.

    ಇದನ್ನು ಓದಿ: ಪ್ರಾದೇಶಿಕ ನಿರ್ದೇಶಕರು, ಸಹಾಯಕ ಪ್ರಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

    ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ಅರ್ಹತಾ ಪ್ರವೇಶ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 1,49,552 ಅಭ್ಯರ್ಥಿಗಳ ಪೈಕಿ 1,38,710 ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ 19,523 ಅಭ್ಯರ್ಥಿಗಳು ಶೇ, 60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದರೆ, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ 6,591 ಅಭ್ಯರ್ಥಿಗಳು ಶೇ. 55-60ರ ನಡುವೆ ಅಂಕಗಳನ್ನು ಪಡೆದಿದ್ದಾರೆ

    21 ಅಭ್ಯರ್ಥಿಗಳ ಫಲಿತಾಂಶಕ್ಕೆ ತಡೆ
    ಇನ್ನು ಈ ಫಲಿತಾಂಶದಲ್ಲಿ 21 ಅಭ್ಯರ್ಥಿಗಳ ಫಲಿತಾಂಶಕ್ಕೆ ತಡೆ ನೀಡಲಾಗಿದೆ. ಕಳೆದ ತಿಂಗಳು ನಡೆದ ಪರೀಕ್ಷೆ ವೇಳೆ 21 ಅಭ್ಯರ್ಥಿಗಳು ತಮ್ಮ ಓಎಂಆರ್​ ಪತ್ರಿಕೆಗೆ ಸಹಿ ಮತ್ತು ಹೆಬ್ಬಟ್ಟಿನ ಗುರುತನ್ನು ಹಾಕಲು ಮರೆತಿದ್ದಾರೆ. ಈ ಕಾರಣಕ್ಕೆ 21 ಅಭ್ಯರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿದೆ.
    Published by:Seema R
    First published: