KARTET Notification 2022: ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅಧಿಸೂಚನೆ ಪ್ರಕಟ: ಈ ರೀತಿ ಅರ್ಜಿ ಸಲ್ಲಿಕೆ ಮಾಡಿ

KARTET 2022 Notification: 2022 ಕ್ಕೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. 3500ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂಬ ವರದಿ ಬೆನ್ನಲ್ಲೇ ಇದೀಗ ಶಿಕ್ಷಕರ ಹುದ್ದೆ ಭರ್ತಿಗೆ ಟಿಇಟಿ (KARTET) ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಗಿದೆ. 2022 ಕ್ಕೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (Karnataka Teacher Eligibility Test) ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 30 ಆಗಿದೆ.

    ಶೈಕ್ಷಣಿಕ ಅರ್ಹತೆ:
    1ರಿಂದ 5ನೇ ತರಗತಿಗಳಿಗೆ (ಪತ್ರಿಕೆ-1)
    ಪಿಯುಸಿಅಥವಾ ತತ್ಸಮಾನ ವಿದ್ಯಾರ್ಹತೆ ಬಳಿಕ ಎರಡು ವರ್ಷದ ಡಿಎಡ್​ ಕೋರ್ಸ್​ ಅಥವಾ ನಾಲ್ಕು ವರ್ಷದ ಎಲಿಮೆಂಟರಿ ಎಜುಕೇಶನ್​, ನಾಲ್ಕು ವರ್ಷದ ಎಲಿಮೆಂಟರಿ ಎಜುಕೇಶನ್​ನಲ್ಲಿ ತೇರ್ಗಡೆ ಅಥವಾ ಡಿಎಲ್​ಎಡ್​, ಬಿಇಡ್​​ ತೇರ್ಗಡೆ, ಅಂತಿಮ ಸೆಮಿಸ್ಟರ್​ ಪರೀಕ್ಷೆ ಫಲಿತಾಂಶ ನಿರೀಕ್ಷೆ ಹೊಂದಿರುವ ಅಭ್ಯರ್ಥಿಗಳು

    6 ರಿಂದ 8ನೇ ತರಗತಿಗಳಿಗೆ( ಪತ್ರಿಕೆ-2)
    ಪದವಿ ಬಳಿಕ ಎರಡು ವರ್ಷದ ಡಿಎಲ್​.ಎಡ್​ ಕೋರ್ಡ್​ ಅಥವಾ ಬಿಎಡ್​ ಕೋರ್ಸ್​ ಅಥವಾ ನಾಲ್ಕು ವರ್ಷದ ಬ್ಯಾಚುಲರ್​ ಇನ್​ ಎಲಿಮೆಂಟರಿ ಎಜುಕೇಶನ್​ (ಬಿಎಲ್​ಎಡ್​) ಅಥವಾ ಎರಡು ವರ್ಷದ ಬಿಎಡ್​ (ವಿಶೇಷ ಶಿಕ್ಷಣ) ತೇರ್ಗಡೆ, ಅಂತಿಮ ಸೆಮಿಸ್ಟರ್​ ಪರೀಕ್ಷೆ ಫಲಿತಾಂಶ ನಿರೀಕ್ಷೆ ಹೊಂದಿರುವ ಅಭ್ಯರ್ಥಿಗಳು

    ಅರ್ಜಿ ಸಲ್ಲಿಕೆ: ಆನ್​ಲೈನ್​

    ಅರ್ಜಿ ಶುಲ್ಕ


















    ವರ್ಗಪತ್ರಿಕೆ -1ಪತ್ರಿಕೆ-2
    ಸಾಮಾನ್ಯ, 2ಎ, 2ಬಿ, 3ಎ ಮತ್ತು 3ಬಿ700 ರೂ1000 ರೂ
    ಪ.ಜಾ, ಪ.ಪಂ, ಸಿಐ350 ರೂ500 ರೂ

    ಶುಲ್ಕ ವಿನಾಯಿತಿ
    ವಿಶೇಷ ಅಗತ್ಯತೆಯುಳ್ಳ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

    ಪ್ರಮುಖ ದಿನಾಂಕ
    ಅಧಿಕೃತ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ 1 ಸೆಪ್ಟೆಂಬರ್​ 2022
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 30 ಸೆಪ್ಟೆಂಬರ್​​ 2022

    ಇದನ್ನು ಓದಿ: ಕೆಪಿಎಸ್​ಸಿಯಿಂದ 229 ಅಸಿಸ್ಟಂಟ್​ ಇಂಜಿನಿಯರ್​ ಹುದ್ದೆಗೆ ಅರ್ಜಿ ಆಹ್ವಾನ

    ಪ್ರಮುಖ ಲಿಂಕ್​

    ಕಿರು ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ಅಧಿಸೂಚನೆ ಕನ್ನಡ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್​ಸೈಟ್​: www.schooleducation.kar.nic.in

    ಇದನ್ನು ಓದಿ: ಕೆಪಿಎಸ್​ಸಿ ಗ್ರೂಪ್​ ಸಿ ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ಸೆಪ್ಟೆಂಬರ್​ 13ರವರೆಗಿದೆ ಅವಕಾಶ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -www.schooleducation.kar.nic.in ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ (50ಕೆಬಿಕ್ಕಿಂತ ಕಡಿಮೆ), ಸಹಿ ಇತ್ಯಾದಿ ದಾಖಲೆಗಳನ್ನು ಅರ್ಜಿಯಲ್ಲಿ ದಾಖಲಿಸಿ

    -ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. ಪಾವತಿಸಿದ ಶುಲ್ಕ ಯಾವುದೇ ಕಾರಣಕ್ಕೂ ಮರುಪಾವತಿ ಇಲ್ಲ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.

    ಹೆಚ್ಚಿನ ಮಾಹಿತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್​ಸೈಟ್​ ಪರಿಶೀಲಿಸಿ.
    Published by:Seema R
    First published: