ರಾಜ್ಯ ಬೀಜ ನಿಗಮ ನಿಯಮಿತದಲ್ಲಿರುವ (Karnataka State Seeds Corporation Limited) ಖಾಲಿ ಇರುವ 32 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆಗೆ ಹೊರಡಿಸಲಾಗಿದೆ. ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಅಸಿಸ್ಟೆಂಟ್ ಪೋಸ್ಟ್ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆನ್ಲೈನ್ ಮೂಲಕ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 20 ಆಗಿದೆ.
ರಾಜ್ಯ ಸರ್ಕಾರದ ಈ ಹುದ್ದೆಯ ನೇಮಕಾತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ವಿವರಗಳು ಈ ಕೆಳಗಿನಂತಿದೆ.
ಸಂಸ್ಥೆಯ ಹೆಸರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)
ಹುದ್ದೆಯ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಅಸಿಸ್ಟೆಂಟ್
ಹುದ್ದೆಗಳ ಸಂಖ್ಯೆ: 32
ಉದ್ಯೋಗ ಸ್ಥಳ: ಬೆಂಗಳೂರು
ವೇತನ: 21400-78200 ರೂ ಪ್ರತಿ ತಿಂಗಳು
ಹುದ್ದೆ |
ಹುದ್ದೆ ಸಂಖ್ಯೆ |
ವಿದ್ಯಾರ್ಹತೆ |
ವೇತನ |
ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆ) |
19 |
ಬಿಎಸ್ಸಿ(ಅಗ್ರಿಕಲ್ಕರ್) |
40900-78200 ರೂ ಮಾಸಿಕ |
ಹಿರಿಯ ಸಹಾಯಕರು 1 |
1 |
ಬಿಕಾಂ, ಬಿಬಿಎಂ, ಟ್ಯಾಲಿ ಸರ್ಟಿಫಿಕೇಟ್ |
27650-52650 ರೂ ಮಾಸಿಕ |
ಕಿರಿಯ ಸಹಾಯಕರು 9 |
9 |
ಬಿಕಾಂ, ಬಿಬಿಎಂ, ಟ್ಯಾಲಿ ಸರ್ಟಿಫಿಕೇಟ್ |
21400-42000 ರೂ ಮಾಸಿಕ |
ಬೀಜ ಸಹಾಯಕರು 6 ) |
6 |
ಡಿಪ್ಲೊಮಾ(ಅಗ್ರಿಕಲ್ಕರ್ |
21400-42000 ರೂ ಮಾಸಿಕ |
ವಯೋಮಿತಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 20-ಜುಲೈ-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ವಯಸ್ಸಿನ ಸಡಿಲಿಕೆ:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ 1 ಅಭ್ಯರ್ಥಿಗಳು: 05 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 03 ವರ್ಷಗಳು
ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ 1, ವಿಕಲಚೇತನ, ನಿವೃತ್ತ ಸೇನಾಧಿಕಾರಿ ಅಭ್ಯರ್ಥಿಗಳು: 250 ರೂ
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 500 ರೂ
ಸಾಮಾನ್ಯ ಅಭ್ಯರ್ಥಿಗಳು: 750ರೂ
ಪಾವತಿ ವಿಧಾನ: ಆನ್ಲೈನ್
ಇದನ್ನು ಓದಿ: ನೌಕಪಡೆಯಲ್ಲಿ 220 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ; ಎಸ್ಎಸ್ಎಲ್ಸಿ ಆಗಿದ್ರೆ ಸಾಕು
ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿ, ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22 ಜೂನ್ 2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಜುಲೈ 2022
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 25 ಜುಲೈ 2022
ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: kea.kar.nic.in
ಇದನ್ನು ಓದಿ: 290 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಐಟಿಐ ಆದವರಿಗೆ ಅವಕಾಶ
ಅರ್ಜಿ ಸಲ್ಲಿಕೆ ವಿಧಾನ
-ಕೆಇಎ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
-ಅರ್ಜಿ ಸಲ್ಲಿಕೆಗೆ ನಾಲ್ಕು ಹಂತಗಳಿವೆ ಮೊದಲನೆ ಹಂತದಲ್ಲಿ ನಿಮ್ಮ ಹೆಸರು ವಿಳಾಸ, ಮೊಬೈಲ್ಸಂಖ್ಯೆ, ಇಮೇಲ್ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ ಸೇರಿದ ವಿವರ ಭರ್ತಿ ಮಾಡಬೇಕು.
-ಎರಡನೇ ಹಂತದಲ್ಲಿ ಅಭ್ಯರ್ಥಿಯ ಭಾವಚಿತ್ರ, ಸಹಿ ಸೇರಿದಂತೆ ಇನ್ನಿತರ ಅಗತ್ಯ ಅಂಶಗಳ ವಿವರವನ್ನು ನೀಡಬೇಕು.
-ಮೂರನೇ ಹಂತದಲ್ಲಿ ಅರ್ಜಿ ಶುಲ್ಕ ವಿವರಗಳನ್ನು ಭರ್ತಿ ಮಾಡಬೇಕು.
ಕಡೆಯದಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ