KSRLPS Recruitment: ತಾಲೂಕು ಮೇಲ್ವಿಚಾರಕರ ಹುದ್ದೆ; ಕಲಬುರಗಿ, ಬೆಳಗಾವಿಯಲ್ಲಿದೆ ಕೆಲಸ

ಕಲಬುರಗಿ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲು ಕ್ಲಸ್ಟರ್​ ಮೇಲ್ವಿಚಾರಕರು ಮತ್ತು ತಾಲೂಕು ಮೇಲ್ವಿಚಾರಕರ ಹುದ್ದೆಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ

ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ

  • Share this:
    ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ ( Karnataka State Rural Livelihood Promotion Society) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕಲಬುರಗಿ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲು ಕ್ಲಸ್ಟರ್​ ಮೇಲ್ವಿಚಾರಕರು ಮತ್ತು ತಾಲೂಕು ಮೇಲ್ವಿಚಾರಕರ ಹುದ್ದೆಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ಜಿಲ್ಲೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 15 ಆಗಿದೆ.

    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ (KSRLPS)
    ಹುದ್ದೆ ಹೆಸರು: ತಾಲೂಕು ಕಾರ್ಯಕ್ರಮ ನಿರ್ವಾಹಕ, ಕ್ಲಸ್ಟರ್ ಮೇಲ್ವಿಚಾರಕ
    ಹುದ್ದೆಗಳ ಸಂಖ್ಯೆ: 8
    ಉದ್ಯೋಗ ಸ್ಥಳ: ಕಲಬುರಗಿ - ಬೆಳಗಾವಿ - ಉತ್ತರ ಕನ್ನಡ
    ಸಂಬಳ: ಕೆಎಸ್​ಆರ್​ಎಲ್​ಪಿಎಸ್​ ನಿಯಮಗಳ ಪ್ರಕಾರ





















    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿ
    ಕ್ಲಸ್ಟರ್ ಮೇಲ್ವಿಚಾರಕರು2ಪದವಿಕೆಎಸ್​ಆರ್​ಎಲ್​ಪಿಎಸ್​ ನಿಯಮಗಳ ಪ್ರಕಾರ
    ತಾಲೂಕು ಕಾರ್ಯಕ್ರಮ ನಿರ್ವಾಹಕರು6ಸ್ನಾತಕೋತ್ತರ ಪದವಿಗರಿಷ್ಠ 45 ವರ್ಷ

    ತಾಲೂಕುವಾರು ಹುದ್ದೆಗಳು ಮತ್ತು ಹುದ್ದೆಗಳ ಸಂಖ್ಯೆ ಕುರಿತ ಮಾಹಿತಿ
















































    ಹುದ್ದೆತಾಲೂಕುಹುದ್ದೆಗಳ ಸಂಖ್ಯೆ
    ಕ್ಲಸ್ಟರ್ ಮೇಲ್ವಿಚಾರಕರುಕಲಬುರಗಿ1
    ಕ್ಲಸ್ಟರ್ ಮೇಲ್ವಿಚಾರಕಚಿಂಚೋಳಿ1
    ತಾಲೂಕು ಕಾರ್ಯಕ್ರಮ ನಿರ್ವಾಹಕಚಿತಾಪುರ 1
    ತಾಲೂಕು ಕಾರ್ಯಕ್ರಮ ನಿರ್ವಾಹಕಅಫಜಲಪುರ1
    ತಾಲೂಕು ಕಾರ್ಯಕ್ರಮ ನಿರ್ವಾಹಕಚಿಕ್ಕೋಡಿ1
    ತಾಲೂಕು ಕಾರ್ಯಕ್ರಮ ನಿರ್ವಾಹಕಹಳಿಯಾಳ1
    ತಾಲೂಕು ಕಾರ್ಯಕ್ರಮ ನಿರ್ವಾಹಕಹೊನ್ನಾವರ1
    ತಾಲೂಕು ಕಾರ್ಯಕ್ರಮ ನಿರ್ವಾಹಕರುಕುಮಟಾ1

    ವಯೋಮಿತಿ ಸಡಿಲಿಕೆ
    ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ ನಿಯಮಗಳ ಪ್ರಕಾರ

    ಇದನ್ನು ಓದಿ: ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ 54 ಸಾವಿರ ರೂ ವೇತನ

    ಅರ್ಜಿ ಶುಲ್ಕ:
    ಅರ್ಜಿ ಶುಲ್ಕವಿಲ್ಲ

    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕ

    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಜೂನ್​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಜುಲೈ 2022

    ಅಧಿಸೂಚನೆ ಲಿಂಕ್​ಗಳು
    ಅಧಿಕೃತ ಅಧಿಸೂಚನೆ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: ksrlps.karnataka.gov.in

    ಇದನ್ನು ಓದಿ: ಪದವಿ ಆದವರಿಗೆ ಬೌನ್ಸ್ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ; ಬೇಗ ಅರ್ಜಿ ಸಲ್ಲಿಸಿ

    ಅರ್ಜಿ ಸಲ್ಲಿಕೆ ವಿಧಾನ

    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸುವ ಬಟನ್​ ಕ್ಲಿಕ್​ ಮಾಡಬೇಕು
    Published by:Seema R
    First published: