• Home
 • »
 • News
 • »
 • jobs
 • »
 • KPSC Recruitment: 105 ಸಾಂಖ್ಯಿಕ ನೀರಿಕ್ಷಕರ ಹುದ್ದೆ ನೇಮಕಾತಿ; ಯಾವುದೇ ಡಿಗ್ರಿ ಆಗಿದ್ರೂ ಅರ್ಜಿ ಸಲ್ಲಿಸಿ

KPSC Recruitment: 105 ಸಾಂಖ್ಯಿಕ ನೀರಿಕ್ಷಕರ ಹುದ್ದೆ ನೇಮಕಾತಿ; ಯಾವುದೇ ಡಿಗ್ರಿ ಆಗಿದ್ರೂ ಅರ್ಜಿ ಸಲ್ಲಿಸಿ

ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

ಉಳಿಕೆ ವೃಂದದ ಗ್ರೂಪ್​ ಸಿ ಹುದ್ದೆಗಳು ಇವಾಗಿವೆ.  ರಾಜ್ಯ ಸರ್ಕಾರದ ಹುದ್ದೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

 • Share this:

  ಕರ್ನಾಟಕ ಲೋಕ ಸೇವಾ ಆಯೋಗದಿಂದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ (Karnataka Public Service Commission) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 105 ಸಾಂಖ್ಯಿಕ  ನೀರಿಕ್ಷಕರು (Statistical Inspectors -RPC) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಉಳಿಕೆ ವೃಂದದ ಗ್ರೂಪ್​ ಸಿ ಹುದ್ದೆಗಳು ಇವಾಗಿವೆ.  ರಾಜ್ಯ ಸರ್ಕಾರದ ಹುದ್ದೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 17 ಆಗಿದೆ.


  ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  ಹುದ್ದೆ ಮಾಹಿತಿಹುದ್ದೆ ವಿವರ
  ಸಂಸ್ಥೆಯ ಹೆಸರುಕರ್ನಾಟಕ ಲೋಕಸೇವಾ ಆಯೋಗ (KPSC)
  ಹುದ್ದೆಯ ಹೆಸರುಸಾಂಖ್ಯಿಕ  ನೀರಿಕ್ಷಕರು (RPC)
  ಹುದ್ದೆಗಳ ಸಂಖ್ಯೆ105
  ಉದ್ಯೋಗ ಸ್ಥಳಕರ್ನಾಟಕ
  ವೇತನ27650-52650 ರೂ ಮಾಸಿಕ

  ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.


  ಇದನ್ನು ಓದಿ: ಬೆಸ್ಕಾಂನಲ್ಲಿ 400 ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನ


  ವಯೋಮಿತಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.


  ವಯೋಮಿತಿ ಸಡಿಲಿಕೆ:
  ಪ.ಜಾ, ಪ.ಪಂ ಮತ್ತು ಪ್ರವರ್ಗ- 1 ಅಭ್ಯರ್ಥಿಗಳು: 5 ವರ್ಷಗಳು
  ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 3 ವರ್ಷಗಳು
  ವಿಕಲಚೇತನ ವಿಧವೆ ಅಭ್ಯರ್ಥಿಗಳು: 10 ವರ್ಷಗಳು


  ಅರ್ಜಿ ಶುಲ್ಕ:
  ಪ.ಜಾ, ಪ.ಪಂ ಮತ್ತು ಪ್ರವರ್ಗ- 1, ವಿಕಲ ಚೇತನ ಅಭ್ಯರ್ಥಿಗಳು: 35 ರೂ.
  ಮಾಜಿ ಸೈನಿಕ ಅಭ್ಯರ್ಥಿಗಳು: 85 ರೂ.
  ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 335 ರೂ.
  ಸಾಮಾನ್ಯ ಅಭ್ಯರ್ಥಿಗಳು: 635 ರೂ.


  ಪಾವತಿ ವಿಧಾನ: ಆನ್‌ಲೈನ್


  ಇದನ್ನು ಓದಿ: ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಹುದ್ದೆ ನೇಮಕಾತಿ


  ಆಯ್ಕೆ ಪ್ರಕ್ರಿಯೆ:
  ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ


  ಪ್ರಮುಖ ದಿನಾಂಕಗಳು:
  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19 ಅಕ್ಟೋಬರ್​​ 2022
  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ನವೆಂಬರ್ 2022
  ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 18 ನವೆಂಬರ್ 2022


   ಅಧಿಸೂಚನೆ ಪ್ರಮುಖ ಲಿಂಕ್‌ಗಳು
  ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
  ಅಧಿಕೃತ ವೆಬ್‌ಸೈಟ್: kpsc.kar.nic.in


  ಅರ್ಜಿ ಸಲ್ಲಿಕೆ ಪ್ರಕ್ರಿಯೆ


  ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.


  -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.


  - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ನೀಡಿ. ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.


  -ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ, ಅದರ ಮಾಹಿತಿ ಅಪ್​ಲೋಡ್​ ಮಾಡಿ.


  -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿದ ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ

  Published by:Seema R
  First published: