Legislative Assembly Recruitment: ವಿಧಾನಸಭೆ ಸಚಿವಾಲಯದಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ; ಇಲ್ಲಿದೆ ಸಂಪೂರ್ಣ ಮಾಹಿತಿ

ವರದಿಗಾರು, ಕಂಪ್ಯೂಟರ್​ ಆಪರೇಟರ್​, ಕಿರಿಯ ಸಹಾಯಕ ಹುದ್ದೆ ಸೇರಿದಂತೆ ಒಟ್ಟು 43 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 27, 2022 ಆಗಿದೆ.

ವಿಧಾನಸೌಧ

ವಿಧಾನಸೌಧ

 • Share this:
  ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ(Karnataka Legislative Assembly)  ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಿದೆ. 2003ರ ನಿಯಮಾವಳಿಗಳಂತೆ ಮಾತೃ ವೃಂದದಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವರದಿಗಾರು, ಕಂಪ್ಯೂಟರ್​ ಆಪರೇಟರ್​, ಕಿರಿಯ ಸಹಾಯಕ ಹುದ್ದೆ ಸೇರಿದಂತೆ ಒಟ್ಟು 43 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 27, 2022 ಆಗಿದೆ.

  ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  ಹುದ್ದೆಗಳುಹುದ್ದೆ ಸಂಖ್ಯೆವೇತನ
  ವರದಿಗಾರರು237900- 70850 ರೂ
  ಕಂಪ್ಯೂಟರ್​ ಆಪರೇಟರ್​​430350- 58250 ರೂ
  ಕಿರಿಯ ಸಹಾಯಕರು1021400-42000 ರೂ
  ಬೆರಳಚ್ಚುಗಾರರು121400-42000 ರೂ
  ದಲಾಯತ್​2617000- 28950 ರೂ

  ವಿದ್ಯಾರ್ಹತೆ
  ವರದಿಗಾರರು - ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು
  ಕರ್ನಾಟಕ ಫ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

  ಕಂಪ್ಯೂಟರ್​ ಆಪರೇಟರ್​: ಬಿಸಿಎ ಅಥವಾ ಬಿಎಸ್ಸಿ ಕಂಪ್ಯೂಟರ್​ ಸೈನ್ಸ್​ ಅಥವಾ ಎಲೆಕ್ಟ್ರಾನಿಕ್ಸ್​ ಪದವಿ ಹೊಂದಿರಬೇಕು

  ಕಿರಿಯ ಸಹಾಯಕರು : ಅಂಗೀಕೃತ ವಿವಿಯಿಂದ ಪದವಿ ಪಡೆದಿದ್ದು, ಗಣಕ ಯಂತ್ರದ ಜ್ಞಾನ ಹೊಂದಿರಬೇಕು.

  ಬೆರಳಚ್ಚುಗಾರರು: ಅಂಗೀಕೃತ ವಿವಿಯಿಂದ ಪದವಿ ಹೊಂದಿರಬೇಕು. ಮಾನ್ಯತೆ ಪಡೆದ ಸಂಸ್ಥೆಯಿಂದ ಗಣಕ ಯಂತ್ರದ ಕನಿಷ್ಠ 1 ವರ್ಷದ ತರಬೇತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

  ದಲಾಯತ್: ಏಳನೇ ತರಗತಿ ಉತ್ತೀರ್ಣರಾಗಿರಬೇಕು.

  ವಯೋಮಿತಿ:
  ಸಾಮಾನ್ಯ ವರ್ಗ: 35 ವರ್ಷ
  ಪ್ರವರ್ಗ 2 ಎ, 2ಬು, 3ಎ ಮತ್ತು 3 ಬಿ : 38 ವರಷ
  ಪ. ಜಾ. ಪ. ಪಂ ಹಾಗೂ ಪ್ರವರ್ಗ-1: 40 ವರ್ಷ

  ಇದನ್ನು ಓದಿ: ಮಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಬಂಪರ್​ ಅವಕಾಶ

  ಅರ್ಜಿ ಸಲ್ಲಿಕೆ ವಿಧಾನ
  ಆಫ್​ಲೈನ್​

  ಅರ್ಜಿ ಸಲ್ಲಿಸಬೇಕಾದ ವಿಳಾಸ
  ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ: 5074, ಮೊದಲನೆ ಮಹಡಿ, ವಿಧಾನಸೌಧ, ಬೆಂಗಳೂರು- 560001

  ಅರ್ಜಿಗಳನ್ನು ಲಗತ್ತಿಸಬೇಕಾದ ಪ್ರತಿಗಳು
  ಹುಟ್ಟಿದ ತಾರೀಖಿನ ಆಧಾರದ ದಾಖಲೆ ಪ್ರತಿ
  ಹುದ್ದೆಗಳಿಗೆ ಸೂಚಿಸಲಾಗಿರುವ ವಿದ್ಯಾರ್ಹತೆ ಅಂಕಪಟ್ಟಿ ಮತ್ತು ಇತರೆ ವಿದ್ಯಾರ್ಹತೆ ಪ್ರಮಾಣ ಪತ್ರದ ನಕಲು ಪ್ರತಿ
  ನಡತೆ ಬಗ್ಗೆ ಇಬ್ಬರು ಗಣ್ಯ ವ್ಯಕ್ತಿಗಳಿಂದ ಆರು ತಿಂಗಳ ಅವದಿ ಮೀರದ ಪ್ರಮಾಣಪತ್ರಗಳು
  ಜಾತಿ ಪ್ರಮಾಣದ ನಕಲು ಪ್ರತಿ
  ಮೀಸಲಾತಿ ಪ್ರಮಾಣ ಪ್ರತಿ

  ಇದನ್ನು ಓದಿ: ಭಾರತೀಯ ಸೇನೆಯಲ್ಲಿ 400 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

  ಆಯ್ಕೆ ವಿಧಾನ

  ಅಭ್ಯರ್ಥಿಗಳಿಗೆ ಲಿಖಿತ ಅಥವಾ ಮೌಖಿಕ ಅಥವಾ ಈ ಎರಡೂ ವಿಧಾನಗಳನ್ನು ಅನುಸರಿಸಿ ಆಯ್ಕೆ ಮಾಡಲಾಗುವುದು.

  ಅಧಿಸೂಚನೆ ವೀಕ್ಷಣೆ ಮಾಡಲು ಈ ಲಿಂಕ್​ ಮೇಲೆ ಕ್ಲಿಕ್​​ ಮಾಡಿ

  ಅರ್ಜಿ ನಮೂನೆ 

  ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿಪ್ರತಿಯಲ್ಲಿ ಅರ್ಜಿಗಳನ್ನು ಸರ್ಕಾರಿ ಪುಸ್ತಕ ಮಳಿಗೆಯಿಂದ ಪಡೆದು ವಿಧಾನ ಸಭೆ ಸಚಿವಾಲಯಕಕೆ ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು. (ಅರ್ಜಿ ನಮೂನೆಯು ಸರ್ಕಾರಿ ಮುದ್ರಣಾಲಯದಲ್ಲಿ ದೊರೆಯುವುದು)
  Published by:Seema R
  First published: