ಕಡಿಮೆ ಕ್ವಾಲಿಫಿಕೇಷನ್ನಲ್ಲಿ (Qualification) ಆಕರ್ಷಕ ವೇತನ ಪಡೆಯಬಲ್ಲ ಸರ್ಕಾರಿ ಕ್ಷೇತ್ರಗಳಲ್ಲಿ ಕೆಎಸ್ಆರ್ಟಿಸಿ (KSRTC) ಕೂಡಾ ಒಂದು. ನೀವು ಹೆಚ್ಚು ಕಲಿಯದಿದ್ದರೂ ಕೆಲವೇ ಕ್ವಾಲಿಫಿಕೇಷನ್ ಇಟ್ಟುಕೊಂಡು ನೀವು ಉತ್ತಮವಾಗಿ ಸಂಪಾದಿಸಬಹುದು. ಕಂಡಕ್ಟರ್ ಪೋಸ್ಟ್ಗಳಿಗೇ ಉತ್ತಮ ವೇತನ ನೀಡುವ ಕೆಎಸ್ಆರ್ಟಿಸಿ ಉದ್ಯೋಗ ಭದ್ರತೆ ಜೊತೆಗೆ ಹಲವು ಸವಲತ್ತುಗಳನ್ನು ಒದಗಿಸುತ್ತದೆ. ಇದೀಗ ಕರ್ನಾಟಕ ರಾಜ್ಯ ಸಾರಿಗೆ 2000 ಹುದ್ದೆಗಳಿಗೆ ನೋಟಿಫಿಕೇಷನ್ (Notification) ರಿಲೀಸ್ ಮಾಡಿದ್ದು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಸ್ಎಸ್ಎಲ್ಸಿ ಪಾಸ್ ಮಾಡಿದ್ದೀರಾ?
ಈ ಹುದ್ದೆಗೆ ಅಪ್ಲೈ ಮಾಡಲು ನೀವು ಖಂಡಿತಾ ಎಸ್ಎಸ್ಎಲ್ಸಿ ಆದರೂ ಪಾಸ್ ಮಾಡಿರಬೇಕು. ಇದು ಈ ಹುದ್ದೆಯ ಕನಿಷ್ಠ ರಿಕ್ವೈರ್ಮೆಂಟ್. ಹಾಗಾಗಿ ನಂದು ಬರೀ ಎಸ್ಎಸ್ಎಲ್ಸಿ ಆಗಿದೆ, ಯಾರು ಜಾಬ್ ಕೊಡ್ತಾರೆ ಎನ್ನುವ ಬದಲು ಈ ಹುದ್ದೆಗಳಿಗೆ ಅರ್ಜಿ ಗುಜರಾಯಿಸಿ.
ಸಂಸ್ಥೆ | ಕೆಎಸ್ಆರ್ಟಿಸಿ |
ಹುದ್ದೆಯ ಹೆಸರು | ಚಾಲಕ |
ಹುದ್ದೆಯ ಸಂಖ್ಯೆ | 2000 |
ವಿದ್ಯಾರ್ಹತೆ | ಎಸ್ಎಸ್ಎಲ್ಸಿ |
ಉದ್ಯೋಗದ ಸ್ಥಳ | ಕರ್ನಾಟಕ |
ವೇತನ | ತಿಂಗಳಿಗೆ 10,000 - 20,000 ತನಕ |
ನೀವು ಎಸ್ಎಸ್ಎಲ್ಸಿ ಪಾಸ್ ಮಾಡಿದ್ದು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಜನವರಿ 22. 2023ರಂದು ಕೊನೆಯ ದಿನಾಂಕ. ಈ ದಿನದ ಒಳಗಾಗಿ ನಿಮ್ಮ ಅರ್ಜಿಗಳನ್ನು ಕಳುಹಿಸಿ.
KSRTC ನೇಮಕಾತಿ 2023 ಅರ್ಹತಾ ವಿವರಗಳು
ಶೈಕ್ಷಣಿಕ ಅರ್ಹತೆ: KSRTC ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಸಂಸ್ಥೆಯಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೇಮಕಾತಿ ಅಧಿಸೂಚನೆಯ ಪ್ರಕಾರ, ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು KSRTC ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
ಇದನ್ನೂ ಓದಿ: Woman CEO: ಆಫೀಸ್ಗೆ ಮಗುವನ್ನು ಕರೆತಂದ ಮಹಿಳಾ ಸಿಇಒ; ಸಾಮಾನ್ಯ ಉದ್ಯೋಗಿಗೂ ಈ ಸೌಲಭ್ಯ ಇದೆಯೇ?
ವಯೋಮಿತಿ ಸಡಿಲಿಕೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಮಯಗಳ ಅನುಸಾರವಾಗಿ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿಯ ಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಯಾವುದೇ ಅಪ್ಲಿಕೇಷನ್ ಫೀಸ್ ಅಥವಾ ಅರ್ಜಿ ಶುಲ್ಕ ಇರುವುದಿಲ್ಲ.
ನೇಮಕಾತಿ ಪ್ರಕ್ರಿಯೆ: ಡ್ರೈವಿಂಗ್ ಟೆಸ್ಟ್, ಟ್ರೈನಿಂಗ್
KSRTC ನೇಮಕಾತಿ 2023 ಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲನೆಯದಾಗಿ KSRTC ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿರಿ. ಅದರಲ್ಲಿ ತಿಳಿಸಿರುವ ಅರ್ಹತಾ ಮಾನದಂಡಗಳನ್ನು ನೀವು ಪಡೆದಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ .
ಆನ್ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಅದರ ಮೂಲಕ ಸಂವಹನ ನಡೆಸಲು ಆ ಸಂಖ್ಯೆ ಮತ್ತು ಐಡಿ ಲಭ್ಯವಿರಲಿ.
ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಕೆಲಸದ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ. KSRTC ಡ್ರೈವರ್ ಹುದ್ದೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಇದನ್ನು ಸೇರಿಸಿಕೊಳ್ಳಿ.
KSRTC ಆನ್ಲೈನ್ ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಿ. ನಿಮ್ಮ ಇತ್ತೀಚಿನ ಫೋಟೋ ಅಟೆಸ್ಟ್ ಮಾಡಿ ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ. ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕ ಇದ್ದರೆ ಅದನ್ನು ಪಾವತಿಸಿ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ.
KSRTC ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ. ಮುಂದಿನ ಅಗತ್ಯಗಳಿಗಾಗಿ ನಿಮ್ಮ ಅರ್ಜಿ ಸಂಖ್ಯೆಯನ್ನು ಮರೆಯದೆ ಸೇವ್ ಮಾಡಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ