Karnataka Jobs: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 1419 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 1,41,300

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ 10ನೇ ತರಗತಿ/ ಪಿಯುಸಿ/ ಪದವಿ/ಎಂಜಿನಿಯರಿಂಗ್​/ಡಿಪ್ಲೋಮಾ ಪೂರ್ಣಗೊಳಿಸಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
AHF Karnataka Recruitment 2022: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕರ್ನಾಟಕ (Animal Husbandry & Fisheries Department Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1419 ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ahf.karnataka.gov.in ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.ಸಂಸ್ಥೆಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕರ್ನಾಟಕ
ಹುದ್ದೆಯ ಹೆಸರುಮೀನುಗಾರಿಕೆ ಸಹಾಯಕ ನಿರ್ದೇಶಕರು, ಪ್ರಥಮ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು & ಇತರೆ ಹುದ್ದೆಗಳು
ಒಟ್ಟು ಹುದ್ದೆಗಳು 1419
ವಿದ್ಯಾರ್ಹತೆ10ನೇ ತರಗತಿ/ ಪಿಯುಸಿ/ ಪದವಿ
ಉದ್ಯೋಗದ ಸ್ಥಳಕರ್ನಾಟಕ
ವೇತನಮಾಸಿಕ ₹ 17,000-1,41,300
ಅರ್ಜಿ ಸಲ್ಲಿಕೆ ವಿಧಾನಆನ್​​​​ಲೈನ್
ಅರ್ಜಿ  ಸಲ್ಲಿಕೆ ಆರಂಭ ದಿನಾಂಕ 11/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಅತಿ ಶೀಘ್ರದಲ್ಲಿ ತಿಳಿಸಲಾಗುವುದು

ಇದನ್ನೂ ಓದಿ: Prasar Bharati Recruitment: ಪ್ರಸಾರ ಭಾರತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ Apply ಮಾಡಿ 

ಹುದ್ದೆಯ ಮಾಹಿತಿ

ಮೀನುಗಾರಿಕೆ ನಿರ್ದೇಶಕರು- 1
ಹೆಚ್ಚುವರಿ ಮೀನುಗಾರಿಕೆ ನಿರ್ದೇಶಕರು -6
ಜಂಟಿ ಮೀನುಗಾರಿಕೆ ನಿರ್ದೇಶಕರು- 12
ಸಹಾಯಕ ಕಾರ್ಯನಿರ್ವಾಹ

ಕ ಇಂಜಿನಿಯರ್- 1
ಮೀನುಗಾರಿಕೆ ಉಪ ನಿರ್ದೇಶಕರು (ಹಿರಿಯ ವೇತನ ಶ್ರೇಣಿ) -26
ಮೀನುಗಾರಿಕೆ ಉಪ ನಿರ್ದೇಶಕರು (ನಿರ್ವಾಹಕರು)- 1
ಸಹಾಯಕ ಇಂಜಿನಿಯರ್- 1
ಮೀನುಗಾರಿಕೆ ಉಪ ನಿರ್ದೇಶಕರು (ಕಿರಿಯ ವೇತನ ಶ್ರೇಣಿ) -35
ಮೀನುಗಾರಿಕೆ ಉಪ ನಿರ್ದೇಶಕರು (ಆಡಳಿತ) (ಕಿರಿಯ ವೇತನ ಶ್ರೇಣಿ) -7
ಸಹಕಾರ ಸಂಘಗಳ ಸಹಾಯಕ ನಿಬಂಧಕರು- 1
ಸಹಾಯಕ ಮೀನುಗಾರಿಕೆ ನಿರ್ದೇಶಕರು- 188
ಸಹಾಯಕ ಇಂಜಿನಿಯರ್ (ಶೀತಲೀಕರಣ) -2
ಸೂಪರಿಂಟೆಂಡೆಂಟ್ -22
ಟಿಂಡಾಲ್- 8
ಮೆರೈನ್ ಡೀಸೆಲ್ ಇಂಜಿನಿಯರ್/ಮೆಕ್ಯಾನಿಕಲ್ ಡ್ರೈವರ್‌ಗಳು- 3
ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು- 6
ಹಿರಿಯ ಮೀನುಗಾರಿಕಾ ಮೇಲ್ವಿಚಾರಕರು- 33
ರೆಫ್ರಿಜರೇಶನ್ ಮೆಕ್ಯಾನಿಕ್ ಅಥವಾ ಪಂಪ್ ಆಪರೇಟರ್- 6
ಎಲೆಕ್ಟ್ರಿಷಿಯನ್- 1
ಸ್ಟೆನೋಗ್ರಾಫರ್ಸ್- 11
ಮೊದಲ ವಿಭಾಗದ ಸಹಾಯಕ- 95
ಸ್ಟ್ಯಾಟಿಸ್ಟಿಕಲ್ ಇನ್‌ಸ್ಪೆಕ್ಟರ್ -1
ಹಿರಿಯ ಟೈಪಿಸ್ಟ್- 4
ಮಾಸ್ಟರ್ ಮೀನುಗಾರರು -6
ಕೊರಾಕಲ್ ಮೇಕರ್- 2
ಹಿರಿಯ ಚಾಲಕ -11
ಮೆಕ್ಯಾನಿಕ್- 1
ಇಂಜಿನ್ ಡ್ರೈವರ್- 1
ಎರಡನೇ ವಿಭಾಗದ ಸಹಾಯಕ- 93
ಡೇಟಾ ಎಂಟ್ರಿ ಸಹಾಯಕ -48
ಮೀನುಗಾರಿಕೆ ಮೇಲ್ವಿಚಾರಕರು -57
ಚಾಲಕ -41
ಫಿಶರೀಸ್ ಫೀಲ್ಡ್‌ಮ್ಯಾನ್- 475
ಪಾಲ್ಗೊಳ್ಳುವವರು- 4
ಅಡುಗೆ- 2
ಪ್ಯೂನ್/ಕಾವಲುಗಾರ/ಐಸ್ ಮಜ್ದೂರ್/ಕ್ಲೀನರ್- 187
ಶೋರ್-ಅಟೆಂಡರ್/ಡೆಖಂಡ್- 17
ಲೈನ್‌ಮ್ಯಾನ್- 1
ಸಹಾಯಕ ಸಾಂಖ್ಯಿಕ ಅಧಿಕಾರಿ 2

ವಿದ್ಯಾರ್ಹತೆ:
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ 10ನೇ ತರಗತಿ/ ಪಿಯುಸಿ/ ಪದವಿ/ಎಂಜಿನಿಯರಿಂಗ್​/ಡಿಪ್ಲೋಮಾ ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: STPI Recruitment 2022: ಬೆಂಗಳೂರಿನಲ್ಲಿ 18 ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 1,42,000

ವೇತನ:
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 17,000-1,41,300 ವೇತನ ನೀಡಲಾಗುತ್ತದೆ.

ವಯಸ್ಸಿನ ಮಿತಿ: 
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು AHF ಕರ್ನಾಟಕ ನೇಮಕಾತಿ ಮಾನದಂಡಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕರ್ನಾಟಕ ನಿಯಮಾವಳಿಗಳ ಪ್ರಕಾರ
ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
Published by:Latha CG
First published: