Karnataka Jobs: ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

  • Share this:
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ(Raichur Institute of Medical Sciences)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹಲವು ಉಪನ್ಯಾಸಕ(Professors) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ವಿವಿಧ ವಿಷಯಗಳಿಗೆ ಪ್ರೊಫೆಸರ್(Professor), ಅಸಿಸ್ಟೆಂಟ್ ಪ್ರೊಫೆಸರ್(Assistant Professor), ಅಸೋಸಿಯೇಟ್ ಪ್ರೊಫೆಸರ್(Associate Professor) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

























ಸಂಸ್ಥೆ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ
ಹುದ್ದೆಯ ಹೆಸರು ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್
ಒಟ್ಟು ಹುದ್ದೆಗಳು 11
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ, NET, SLET, Ph.D
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04/11/2021



ಇದನ್ನೂ ಓದಿ:Tumkur University: ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ; ಪಿಜಿ ಆದವರಿಗೆ ಅವಕಾಶ

ಹುದ್ದೆಗಳ ವಿವರ:

  • ನ್ಯೂರಾಲಜಿ ಪ್ರೊಫೆಸರ್-1

  • ಕಾರ್ಡಿಯಾಲಜಿ ಪ್ರೊಫೆಸರ್-1

  • ನೆಫ್ರಾಲಜಿ ಪ್ರೊಫೆಸರ್-1

  • ಪ್ಲಾಸ್ಟಿಕ್​ ಸರ್ಜರಿ ಪ್ರೊಫೆಸರ್-1

  • ಕಾರ್ಡಿಯೋಥೊರಸಿಕ್ ಸರ್ಜರಿ ಅಸಿಸ್ಟೆಂಟ್ ಪ್ರೊಫೆಸರ್-1

  • ಕಾರ್ಡಿಯೋಥೊರಸಿಕ್ ಸರ್ಜರಿ ಅಸೋಸಿಯೇಟ್ ಪ್ರೊಫೆಸರ್-1

  • ನ್ಯೂರೋಸರ್ಜರಿ ಅಸೋಸಿಯೇಟ್ ಪ್ರೊಫೆಸರ್-1

  • ಯುರೋಲಜಿ ಅಸಿಸ್ಟೆಂಟ್ ಪ್ರೊಫೆಸರ್-1

  • ಪೀಡಿಯಾಟ್ರಿಕ್ ಸರ್ಜರಿ ಅಸಿಸ್ಟೆಂಟ್ ಪ್ರೊಫೆಸರ್-1

  • ಅನೆಸ್ಥೇಸಿಯಾಲಜಿ ಅಸಿಸ್ಟೆಂಟ್ ಪ್ರೊಫೆಸರ್-2


ಪ್ರಮುಖ ದಿನಾಂಕ:

ಅಭ್ಯರ್ಥಿಗಳು 04/11/2021 ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ವೆಬ್​ಸೈಟ್​​ ವಿಳಾಸ: www.rims-raichur.com

ವಿದ್ಯಾರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ ಆಯಾ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ NET, SLET, Ph.D ಪಾಸ್ ಮಾಡಿರಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: