Karnataka High Court Recruitment 2021: ತಿಂಗಳಿಗೆ ₹ 63,070 ಸಂಬಳ; 21 ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅಧಿಸೂಚನೆ ಪ್ರಕಟ

ಕರ್ನಾಟಕ ಹೈ ಕೋರ್ಟ್​​ 21 ಜಿಲ್ಲಾ ನ್ಯಾಯಾಧೀಶರ(District Court Judges ) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳ ಪೈಕಿ 18 ಬ್ಯಾಕ್​ಲಾಗ್(Back log)​ ಹುದ್ದೆಗಳು ಮತ್ತು 3 ಹೊಸ ಹುದ್ದೆಗಳಿವೆ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
Karnataka High Court Recruitment 2021: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ಒಂದು ಸಿಹಿ ಸುದ್ದಿ ಇದೆ. ಕರ್ನಾಟಕ ಉಚ್ಛ ನ್ಯಾಯಾಲಯ(Karnataka High Court )ದಲ್ಲಿ ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.  ಕರ್ನಾಟಕ ಹೈ ಕೋರ್ಟ್​​ 21 ಜಿಲ್ಲಾ ನ್ಯಾಯಾಧೀಶರ(District Court Judges ) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳ ಪೈಕಿ 18 ಬ್ಯಾಕ್​ಲಾಗ್(Back log)​ ಹುದ್ದೆಗಳು ಮತ್ತು 3 ಹೊಸ ಹುದ್ದೆಗಳಿವೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.





































ಸಂಸ್ಥೆಕರ್ನಾಟಕ ಹೈ ಕೋರ್ಟ್​
ಹುದ್ದೆಯ ಹೆಸರುಜಿಲ್ಲಾ ನ್ಯಾಯಾಧೀಶ
ಒಟ್ಟು ಹುದ್ದೆಗಳು21
ಉದ್ಯೋಗದ ಸ್ಥಳಕರ್ನಾಟಕ
ವೇತನಮಾಸಿಕ ₹ 51,500- 63,070
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ09/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ14/12/2021

ವಿದ್ಯಾರ್ಹತೆ

ಕರ್ನಾಟಕ ಹೈಕೋರ್ಟ್​​ ನೇಮಕಾತಿಯ ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅಂಗೀಕೃತಗೊಂಡ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು. ಹೈಕೋರ್ಟ್‌ನಲ್ಲಿ ಅಥವಾ ಅಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆ ದಿನಾಂಕಕ್ಕೆ ಕಡಿಮೆ ಇಲ್ಲದಂತೆ 7 ವರ್ಷಗಳಿಂದ ಅಡ್ವೋಕೇಟ್‌ ಆಗಿ ಪ್ರ್ಯಾಕ್ಟೀಸ್ ಮಾಡಿರಬೇಕು. ಅಂತಹವರು ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.



ಆಸಕ್ತರು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ https://recruitmenthck.kar.nic.in/hck/djr/home.php ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಇತರೆ ಯಾವುದೇ ವಿಧಾನದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಇದನ್ನೂ ಓದಿ:Southern Railway Recruitment 2021: ಪಿಯುಸಿ ಪಾಸಾದವರಿಗೆ ದಕ್ಷಿಣ ರೈಲ್ವೆಯಲ್ಲಿ ಉದ್ಯೋಗ; ಮಾಸಿಕ ವೇತನ ₹ 30,000

ವಯೋಮಿತಿ

ಕರ್ನಾಟಕ ಹೈಕೋರ್ಟ್​​ ನೇಮಕಾತಿಯ ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ ಈ ಕೆಳಕಂಡಂತಿದೆ.

  • SC / ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 48 ವರ್ಷ

  • ಇತರೆ ವರ್ಗದ ಅಭ್ಯರ್ಥಿಗಳಿಗೆ 45 ವರ್ಷ ನಿಗದಿಪಡಿಸಲಾಗಿದೆ.

  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ ಎರಡು ವರ್ಷ ಪ್ರೊಬೆಷನ್‌ ಅವಧಿ ಪೂರೈಸಬೇಕು. ಅಗತ್ಯವಿದ್ದಲ್ಲಿ ಪ್ರೊಬೆಷನ್‌ ಅವಧಿಯನ್ನು ಅಭ್ಯರ್ಥಿಗೆ ಮುಂದೂಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಈ ಕೆಳಗಿನ ಮೂರು ಹಂತಗಳ ಪರೀಕ್ಷೆ ನಡೆಸಲಾಗುತ್ತದೆ.

  • ಪೂರ್ವ ಪರೀಕ್ಷೆ

  • ಮುಖ್ಯ ಪರೀಕ್ಷೆ

  • ಸಂದರ್ಶನ


ವೇತನ:

ಕರ್ನಾಟಕ ಹೈಕೋರ್ಟ್​​ ನೇಮಕಾತಿಯ ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹51000-63000 ವೇತನ ನೀಡಲಾಗುತ್ತದೆ.

ಇದನ್ನೂ ಓದಿ:BHEL Recruitment 2021: ತಿಂಗಳಿಗೆ ₹ 83,000 ಸಂಬಳ, MBBS​ ಪದವೀಧರರಿಗೆ BHELನಲ್ಲಿ ಉದ್ಯೋಗ

ಅರ್ಜಿ ಶುಲ್ಕ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಪೂರ್ವ ಪರೀಕ್ಷೆಗೆ ಅರ್ಜಿ ಶುಲ್ಕ ₹ 500.

SC/ST ಅಭ್ಯರ್ಥಿಗಳು  ₹  250 ಅರ್ಜಿ ಶುಲ್ಕ ಪಾವತಿಸಬೇಕು.

ಪೂರ್ವ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದಲ್ಲಿ ಮುಖ್ಯ ಪರೀಕ್ಷೆ ತೆಗೆದುಕೊಳ್ಳಲು ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.1000 ಪಾವತಿಸಬೇಕು.

SC/ST ಅಭ್ಯರ್ಥಿಗಳು ರೂ.750 ಪಾವತಿಸಬೇಕು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: