ಕರ್ನಾಟಕ ಹೈ ಕೋರ್ಟ್(Karnataka High Court) ಒಟ್ಟು 142 ಎಸ್ಡಿಎ (SDA) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನಿಮ್ಮ ಅರ್ಹತೆಗೆ ಅನುಗುಣವಾಗಿ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತದೆ. ಕರ್ನಾಟಕ ಹೈ ಕೋರ್ಟ್ ನೇಮಕಾತಿ-2021(Karnataka High Court Recruitment) ವಿವರಗಳನ್ನು ಇಲ್ಲಿ ತಿಳಿಯಿರಿ. ಕರ್ನಾಟಕ ಹೈ ಕೋರ್ಟ್ ನೇಮಕಾತಿ 2021ಕ್ಕೆ ನೀವು ಆನ್ಲೈನ್ನಲ್ಲಿ(Online) ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ.
ಕರ್ನಾಟಕ ಹೈ ಕೋರ್ಟ್ ಒಟ್ಟು 142 ದ್ವಿತೀಯ ದರ್ಜೆ ಸಹಾಯಕ(Second Division Assistant) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಈಗಾಗಲೇ ಆಗಸ್ಟ್ 26ರಿಂದಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಸೆಪ್ಟೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕಡೆಯ ದಿನಾಂಕದ ಬಳಿಕ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಎಸ್ಡಿಎ ಹುದ್ದೆಯ ಆನ್ಲೈನ್ ಅಧಿಸೂಚನೆಯನ್ನು ಆಗಸ್ಟ್ 25ರಂದೇ ಬಿಡುಗಡೆ ಮಾಡಲಾಗಿದೆ. ಬಹುತೇಕ ಅಭ್ಯರ್ಥಿಗಳು ಕರ್ನಾಟಕ ಹೈಕೋರ್ಟ್ ಎಸ್ಡಿಎ (SDA)ನೇಮಕಾತಿಗೆ ಬಹಳ ಸಮಯದಿಂದ ಕಾಯುತ್ತಿದ್ದರು.
ಎಸ್ಡಿಎ ಹುದ್ದೆಗಳಿಗೆ ಕರ್ನಾಟಕದ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯನ್ನು ರಾಜ್ಯಮಟ್ಟದಲ್ಲಿ ಆಯೋಜಿಸಲಾಗಿದೆ. ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ನಿಗದಿ ಸಮಯದೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ.
ಪ್ರಾಧಿಕಾರದ ಹೆಸರು |
ಹೈ ಕೋರ್ಟ್ ಆಫ್ ಕರ್ನಾಟಕ |
ಹುದ್ದೆಯ ಹೆಸರು |
ದ್ವಿತೀಯ ದರ್ಜೆ ಸಹಾಯಕ [SDA] |
ಒಟ್ಟು ಖಾಲಿ ಇರುವ ಹುದ್ದೆಗಳು |
142 |
ರಾಜ್ಯ |
ಕರ್ನಾಟಕ |
ನೋಟಿಫಿಕೇಶನ್ ದಿನಾಂಕ |
ಆಗಸ್ಟ್ 25, 2021 |
ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ |
ಆಗಸ್ಟ್ 26, 2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
ಸೆಪ್ಟೆಂಬರ್ 24, 2021 |
ವೆಬ್ಸೈಟ್ |
karnatakajudiciary.kar.nic.in |
ನೇಮಕಾತಿಗೆ ಅರ್ಹತಾ ಮಾನದಂಡಗಳೇನು?
ಎಸ್ಡಿಎ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಪದವಿ ಪಡೆದಿರಬೇಕು. ಕಲೆ, ವಿಜ್ಞಾನ, ಕಾಮರ್ಸ್, ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಕಂಪ್ಯೂಟರ್ ಅಪ್ಲಿಕೇಶನ್ ಹೀಗೆ ಯಾವುದೇ ವಿಷಯದಲ್ಲಿ ಮಾನ್ಯತಾ ವಿ.ವಿಯಿಂದ ಪದವಿ ಪಡೆದಿರಬೇಕು.
ವಯಸ್ಸು
ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ನಿಮಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯಸ್ಸಾಗಿರಬೇಕು. ನಿಮ್ಮ ವಯಸ್ಸು ಇದಕ್ಕೆ ಅನುಗುಣವಾಗಿಲ್ಲದಿದ್ದರೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ವಯೋಮಿತಿ ಸಡಿಲಿಕೆಯ ಬಗ್ಗೆ ಮಾಹಿತಿಯು ನಿಮಗೆ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ.
ಅರ್ಜಿ ಶುಲ್ಕ
ಈ ಹುದ್ದೆಗೆ ಹೈ ಕೋರ್ಟ್ ಅರ್ಜಿ ಶುಲ್ಕವನ್ನೂ ಕೂಡ ನಿಗದಿಪಡಿಸಿದೆ. ನೀವು ಶುಲ್ಕ ಪಾವತಿಸಿದರೆ ಮಾತ್ರ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ಈ ಶುಲ್ಕವನ್ನು ಎಲ್ಲಾ ವರ್ಗಗಳಿಗೆ ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ. ನೀವು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಮಾತ್ರ ಆನ್ಲೈನ್ನಲ್ಲಿ ಶುಲ್ಕ ಪಾವತಿಸಬಹುದು.
ಅರ್ಜಿ ಶುಲ್ಕಗಳು ಹೀಗಿವೆ
ವರ್ಗ |
ಅರ್ಜಿ ಶುಲ್ಕ |
ಜನರಲ್ |
350/- |
ಓಬಿಸಿ |
350/- |
ಎಸ್ಟಿ |
200/- |
ಎಸ್ಸಿ |
200/- |
ಪಿಹೆಚ್ |
200/- |
ಸಂಬಳ
ಈ ಹುದ್ದೆಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಸಂಬಳ ಎಷ್ಟಿರುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಎಸ್ಡಿಎ ಹುದ್ದೆಗೆ 25,500 ರೂ.ನಿಂದ 81,100 ರೂ.ವರೆಗೆ ಸಂಬಳ ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ