• Home
  • »
  • News
  • »
  • jobs
  • »
  • Karnataka Graduate Teacher Recruitment 2022: 1500 ಶಿಕ್ಷಕರ ನೇಮಕಾತಿ ಫಲಿತಾಂಶ; ರಿಸಲ್ಟ್​ ನೋಡಲು ಇಲ್ಲಿದೆ ಲಿಂಕ್​​

Karnataka Graduate Teacher Recruitment 2022: 1500 ಶಿಕ್ಷಕರ ನೇಮಕಾತಿ ಫಲಿತಾಂಶ; ರಿಸಲ್ಟ್​ ನೋಡಲು ಇಲ್ಲಿದೆ ಲಿಂಕ್​​

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬೆಳಗಾವಿ, ಮೈಸೂರು ಮತ್ತು ಕಲಬುರ್ಗಿಯ ಪಟ್ಟಿಯನ್ನು 28 ಸೆಪ್ಟೆಂಬರ್ ಮತ್ತು 29 ಸೆಪ್ಟೆಂಬರ್ ನಂತರ ಪ್ರಕಟಿಸಲಾಗುವುದು.

  • Share this:

    ಸಾರ್ವಜನಿಕ ಶಿಕ್ಷಣ ಇಲಾಖೆ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ  2022 (Karnataka Graduate Teacher Recruitment Result) ಪಟ್ಟಿಯನ್ನು ಬಿಡುಗಡೆ ಮಾಡಿದೆ. 15000 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು, schooleducation.kar.nic.in ವೆಬ್‌ಸೈಟ್‌ನಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಬಹುದು. ಬೆಳಗಾವಿ, ಮೈಸೂರು ಮತ್ತು ಕಲಬುರ್ಗಿ ಹೊರತುಪಡಿಸಿ  ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.


    ಅಭ್ಯರ್ಥಿಗಳು ವೆಬ್‌ಸೈಟ್‌ನಿಂದ ಫಲಿತಾಂಶದ ಪಟ್ಟಿಯನ್ನು ಪರಿಶೀಲಿಸಬಹುದು. 15000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಕರ್ನಾಟಕ ದಾಖಲಾತಿ ಪರಿಶೀಲನಾ ಪಟ್ಟಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮಾಡಿದ್ದಾರೆ. 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ 1:2 ಬೆಂಗಳೂರು ವಿಭಾಗದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಪಟ್ಟಿಯನ್ನು  ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದರು.


    ಇದನ್ನು ಓದಿ: ಟಿಸಿಎಸ್​ನಲ್ಲಿ ಬಿಇ ಫ್ರೆಶರ್ಸ್​​ ನೇಮಕಾತಿಗೆ ಚಾಲನೆ; ಇಲ್ಲಿದೆ ಅರ್ಜಿ ಸಲ್ಲಿಕೆ ಲಿಂಕ್​


    ನಿನ್ನೆ ಇಂದು ಪಟ್ಟಿ ಬಿಡುಗಡೆ


    ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಿಭಾಗದ ಪಟ್ಟಿಯನ್ನು ಕ್ರಮವಾಗಿ ಬುಧವಾರ ಮತ್ತು ಗುರುವಾರ ಸಂಜೆಯ ನಂತರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.ಫಲಿತಾಂಶ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು, ಹುಟ್ಟಿದ ದಿನಾಂಕ, ನೋಂದಣಿ ಸಂಖ್ಯೆ, ಪರೀಕ್ಷೆಯ ಅಂಕಗಳು ಮತ್ತು ಮೆರಿಟ್ ಅಂಕಗಳನ್ನು ನಮೂದಿಸಲಾಗಿದೆ. ಮುಂದಿನ ಪ್ರಕ್ರಿಯೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಪ್ರಕಟಿಸಲಾಗುವುದು.


    ಬೆಳಗಾವಿ, ಮೈಸೂರು ಮತ್ತು ಕಲಬುರ್ಗಿಯ ಪಟ್ಟಿಯನ್ನು 28 ಸೆಪ್ಟೆಂಬರ್ ಮತ್ತು 29 ಸೆಪ್ಟೆಂಬರ್ ನಂತರ ಪ್ರಕಟಿಸಲಾಗುವುದು.


    ಪಟ್ಟಿಯನ್ನು ಪರಿಶೀಲಿಸುವುದು ಹೇಗೆ?
    ಅಭ್ಯರ್ಥಿಗಳು  schooleducation.kar.nic.in ವೆಬ್​ಸೈಟ್​ಗೆ ಭೇಟಿ ನೀಡಬೇಕು.
    ಪ್ರತಿ ಜಿಲ್ಲೆಗೆ ಲಿಂಕ್ ಅನ್ನು ಕ್ಲಿಕ್ ಮಾಡಿ
    ನಿಮ್ಮ ಹೆಸರು,ನೋಂದಣಿ  ಸಂಖ್ಯೆಯನ್ನು ಪರಿಶೀಲಿಸಿ
    ಡೌನ್‌ಲೋಡ್ ಮಾಡಿ ಮತ್ತು ಪ್ರತಿಯನ್ನು ಇಟ್ಟುಕೊಳ್ಳಿ


    ವಿಶೇಷ ಸೂಚನೆ: ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಇತ್ತೀಚಿನ ನವೀಕರಣಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಈ ಕುರಿತು ವೆಬ್​ಸೈಟ್​ನ್ನು ನಿರಂತರವಾಗಿ ಪರಿಶೀಲನೆ ನಡೆಸುವುದು ಒಳ್ಳೆಯದು.


    ಇದನ್ನು ಓದಿ: ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ; ಮಾಸಿಕ 35000 ರೂ ವೇತನ


    ಕಳೆದ ಮಾರ್ಚ್​ನಲ್ಲಿ ಹುದ್ದೆ ಭರ್ತಿಗೆ ಅಧಿಸೂಚನೆ


    ಕರ್ನಾಟಕ ಶಿಕ್ಷಣ ಇಲಾಖೆಯು ಜಿಪಿಟಿ ಪದವೀಧರ ಪ್ರಾಥಮಿಕ ಶಿಕ್ಷಕರ ಭರ್ತಿ ಅಧಿಸೂಚನೆಯನ್ನು ಕಳೆದ ಮಾರ್ಚ್​ನಲ್ಲಿ ಬಿಡುಗಡೆ ಮಾಡಿತು. 1500 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 24, 2022 ಕಡೆಯ ದಿನಾಂಕವಾಗಿತ್ತು. ಟಿಇಟಿ, ಸಿಇಟಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರು. ಡಿಇಎಡ್​, ಬಿಎಡ್​​, ಬಿಪಿಎಡ್​, ಡಿಪಿಎಡ್​ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು.


    ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು.

    Published by:Seema R
    First published: