Teachers Recruitment: ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ, ತೃತೀಯಲಿಂಗಿಗಳಿಗೂ ಅವಕಾಶ

ಕೊರೋನಾ ನಂತರ ಈಗ ಶಾಲೆಗಳು ಪುನರರಾಂಭಗೊಂಡಿದ್ದು, ಶಿಕ್ಷಕರ ನೇಮಕಕ್ಕೆ ಅಧಿಕಸೂಚನೆ ಹೊರಡಿಸಲಾಗಿದೆ. ಇದೇ ಮೊದಲ ಬಾರಿಗೆ ಶಿಕ್ಷಕಕರ ನೇಮಕಾತಿಯಲ್ಲಿ ತೃತೀಯ ಲಿಂಗಿ ಅಬ್ಯರ್ಥಿಗಳಿಗೆ ಶೇ.1ರಷ್ಟು ಮೀಸಲಾತಿ ನೀಡಲಾಗಿದೆ.

ಶಿಕ್ಷಕರ ನೇಮಕಾತಿ

ಶಿಕ್ಷಕರ ನೇಮಕಾತಿ

  • Share this:
ಕೊರೋನಾ ನಂತರ ಈಗ ಶಾಲೆಗಳು ಪುನರರಾಂಭಗೊಂಡಿದ್ದು, ಶಿಕ್ಷಕರ ನೇಮಕಕ್ಕೆ (Teachers recruitment) ಅಧಿಸೂಚನೆ ಹೊರಡಿಸಲಾಗಿದೆ. ಕೊರೋನಾ ನಂತರ ಶಾಲಾ, ಕಾಲೇಜುಗಳು ಬಹಳಷ್ಟು ಸಮಯ ಮುಚ್ಚಲಾಗಿತ್ತು. ನಂತರದಲ್ಲಿ ಶಾಲಾ ಕಾಲೇಜು ಪುನರಾರಂಭವಾದರೂ (School Reopen) ಮತ್ತೊಮ್ಮೆ ಎರಡನೇ ಅಲೆಯಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ (Education Department) ಹೊಡೆತ ಬಿದ್ದಿತ್ತು. ಆದರೆ ಈಗ ಒಮೈಕ್ರೋನ್ ಕೂಡಾ ಇಳಿಮುಖವಾಗಿದ್ದು ದೇಶಾದ್ಯಂತ ಕೊರೋನಾ ಸಂಖ್ಯೆ ಇಳಿಮುಖವಾಗುತ್ತಿದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಶಾಲಾ, ಕಾಲೇಜುಗಳು ಪುನರಾರಂಭವಾಗಿದೆ. ರಾಜ್ಯದಲ್ಲಿಯೂ ಶಾಲಾ ಕಾಲೇಜುಗಳು ತೆರೆದಿದ್ದು, ಈಗ ಮತ್ತೆ ಹಿಂದಿನ ಸಹಜ ಸ್ಥಿತಿಯತ್ತ ಶೈಕ್ಷಣಿಕ ಕ್ಷೇತ್ರ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಶಿಕ್ಷಕರ (Teachers) ಅಗತ್ಯವಿದ್ದು ಸರ್ಕಾರ ಈ ನಿಟ್ಟಿನಲ್ಲಿ ಪ್ರಮುಖ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಮತ್ತಷ್ಟು ಶಿಕ್ಷಕರ ನೇಮಕಾತಿ ನಡೆಯಲಿದ್ದು ಕ್ವಾಲಿಫೈಡ್ ಅಭ್ಯರ್ಥಿಗಳಿಗೆ ಅವಕಾಶ ಸಿಗಲಿದೆ.

ಪ್ರಾಥಮಿಕ ಶಾಲೆಗಳಲ್ಲಿ ಆರರಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸುಮಾರು 15 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಪದವೀಧರ ಶಿಕ್ಷಕರನ್ನು ನೇಮಿಸಿಕೊಳ್ಳಲಿದ್ದು, ರಾಜ್ಯ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ಶಿಕ್ಷಕಕರ ನೇಮಕಾತಿಯಲ್ಲಿ ತೃತೀಯ ಲಿಂಗಿ ಅಬ್ಯರ್ಥಿಗಳಿಗೆ ಶೇ.1ರಷ್ಟು ಮೀಸಲಾತಿ ನೀಡಲಾಗಿದೆ.

ಅಭ್ಯರ್ಥಿಗಳ ವಯಸ್ಸು

ಪ.ಜಾತಿ, ಪ.ಪಂಗಡ, ಪ್ರವರ್ಗ-1 ಹಾಗೂ ಇತರ ಹಿಂದುಳಿದ ವರ್ಗದ ಅಂಗವಿಕಲ ಅಬ್ಯರ್ಥಿಗಳಿಗೆ 47 ವರ್ಷದ ತನಕ ಹಾಗೂ ಹಿಂದುಳಿದ ಪ್ರವರ್ಗ-2ಎ, 2ಬಿ, 3ಎ ಹಾಗೂ 3ಬಿ ಅಬ್ಯರ್ಥಿಗಳಿಗೆ 45 ವರ್ಷ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 42 ವರ್ಷದ ವರೆಗೆ ಅವಕಾಶ ನೀಡಿದೆ. ಪ್ರತಿ ಪ್ರವರ್ಗದಲ್ಲಿ ಶೇ.1 ಹುದ್ದೆಗಳನ್ನು ತೃತೀಯ ಲಿಂಗಿ ಅಭ್ಯರ್ಥಿಗಳಿಗಾಗಿ ಮೀಸಲಿಡಲಾಗಿದೆ.

ಮಾನದಂಡಗಳು:

ಸಿಇಟಿ ಪರೀಕ್ಷೆಯಲ್ಲಿ ಶೇ 50ರಷ್ಟು ಅಂಕ ಪಡೆದಿರಬೇಕು. ಟಿಇಟಿಯಲ್ಲಿ ಶೇ,20 ಹಾಗೂ ಪದವಿಯಲ್ಲಿ ಶೇ 20, ಬಿ.ಎಡ್​ನಲ್ಲಿ ಶೇ.10 ಅಂಕ ಪರಿಗಣಿಸಲಾಗುತ್ತಿದೆ. ಇಬ್ಬರಿಗಿಂತ ಹೆಚ್ಚು ಜನರಿಗೆ ಒಂದೇ ಪ್ರಮಾಣದ ಅಂಕ ಇದ್ದಲ್ಲಿ ಅವರ ವಯಸ್ಸಿನ ಆಧಾರದ ಮೇಲೆ ಹಿರಿಯರಿಗೆ ಅವಕಾಶ ನೀಡಲಾಗುತ್ತದೆ.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಾತ್ರ

ಸರ್ಕಾರಿ ಶಾಲೆಗಳಲ್ಲಿ ಅಧ್ಯಾಪಕರ ಕೊರತೆ ನೀಗಿಸಲು ಸರ್ಕಾರ 15,000 ಶಿಕ್ಷಕರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಈ ಶಿಕ್ಷಕರನ್ನು 6-8 ನೇ ತರಗತಿಗೆ ನಿಯೋಜಿಸಲಾಗುವುದು ಮತ್ತು ಈ ಶಿಕ್ಷಕರಲ್ಲಿ 5,000 ಶಿಕ್ಷಕರು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಾತ್ರ ಇರುತ್ತಾರೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಮುಂದಿನ ವಾರ ನೇಮಕಾತಿ ಪ್ರಕ್ರಿಯೆಯ ಅಧಿಸೂಚನೆಯನ್ನು ನಿರೀಕ್ಷಿಸಲಾಗಿದೆ. ಇಲ್ಲಿಯವರೆಗೆ ಸುಮಾರು 23,000 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದ್ದು, ಇನ್ನೂ 4,000 ಅತಿಥಿ ಶಿಕ್ಷಕರನ್ನು ಶೀಘ್ರದಲ್ಲೇ ಸೇರಿಸಲಾಗುತ್ತದೆ.

ಇದನ್ನೂ ಓದಿ: Teachers day 2021: ಮೆಚ್ಚಿನ ಶಿಕ್ಷಕರಿಗೆ ಗಿಫ್ಟ್​ ನೀಡುವ ಯೋಚನೆ ಇದೆಯಾ? ಹಾಗಿದ್ದರೆ, ಬಜೆಟ್​ ಬೆಲೆಗೆ ಸ್ಮಾರ್ಟ್​ಫೋನ್​ ಇಲ್ಲಿದೆ

ವಿಶೇಷವಾಗಿ ಆಫ್​ಲೈನ್ ತರಗತಿಗಳು ಪುನರಾರಂಭಗೊಂಡಾಗ ಶಿಕ್ಷಕರ ಕೊರತೆಯ ಬಗ್ಗೆ ಶಾಲೆಗಳು ಸರ್ಕಾರದ ಗಮನಸೆಳೆದ ನಂತರ ರಾಜ್ಯ ಸರ್ಕಾರವು ಶಿಕ್ಷಕರ ನೇಮಕಕ್ಕೆ ಸಿದ್ಧತೆ ನಡೆಸಿದೆ. ವಿದ್ಯಾರ್ಥಿಗಳು ಈಗಾಗಲೇ 18 ತಿಂಗಳಿಗಿಂತ ಹೆಚ್ಚು ಶಾಲಾ ಶಿಕ್ಷಣವನ್ನು ಕಳೆದುಕೊಂಡಿರುವುದರಿಂದ ಈ ಕೊರತೆಯು ಶೈಕ್ಷಣಿಕ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಧ್ಯಾಹ್ನದ ಬಿಸಿಯೂಟದ ಕೆಲಸವೂ ಶಿಕ್ಷಕಕರಿಗೆ

ತರಗತಿಗಳನ್ನು ನಡೆಸುವುದರ ಜೊತೆಗೆ ಮಧ್ಯಾಹ್ನದ ಊಟದ ಯೋಜನೆ ಮತ್ತು ಕ್ಲೆರಿಕಲ್ ಕೆಲಸಗಳನ್ನು ಮೇಲ್ವಿಚಾರಣೆ ಮಾಡಬೇಕಾಗಿರುವುದರಿಂದ ಈಗಿರುವ ಸಿಬ್ಬಂದಿ ಈಗಾಗಲೇ ಕೆಲಸದ ವಿಸ್ತರಿಸಿರುವುದರಿಂದ ಹೆಚ್ಚಿನ ಹೊರೆಯನ್ನು ನಿರ್ವಹಿಸುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಎಷ್ಟು ತೀವ್ರವಾಗಿದೆ ಎಂದರೆ ಕೆಲವು ಶಾಲೆಗಳಲ್ಲಿ ಕಾಯಂ ಸಿಬ್ಬಂದಿಯೇ ಇಲ್ಲ. ಸುತ್ತಮುತ್ತಲಿನ ಶಾಲೆಗಳ ಅಧ್ಯಾಪಕರು ತರಗತಿಗಳನ್ನು ನಡೆಸಲು ಸಹಾಯ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಸದ್ಯ ಹಣಕಾಸಿನ ವಿಭಾಗ ಶಿಕ್ಷಕಕರ ನೇಮಕಾತಿ ಪ್ರಕ್ರಿಯೆಯನ್ನೂ ನೋಡಿಕೊಳ್ಳುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಶಿಕ್ಷಕರ ದಿನದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳೋಣ ಬನ್ನಿ!
Published by:Divya D
First published: