Govt Job Alert: ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿದೆ ಉದ್ಯೋಗ: ಈ ವಾರದ ಟಾಪ್​ ಹುದ್ದೆಗಳ ಅಧಿಸೂಚನೆ ಇಲ್ಲಿದೆ

ಕರ್ನಾಟಕ ರಾಜ್ಯ ಸರ್ಕಾರದಿಂದ ಕರೆಯಲಾಗಿರುವ ವಿವಿಧ ಇಲಾಖೆಗಳ ಹುದ್ದೆ ಮಾಹಿತಿ ಈ ಕೆಳಗಿನಂತಿದೆ. ಇದರ ಅನುಸಾರ ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದಿಂದ ಕರೆಯಲಾಗಿರುವ ವಿವಿಧ ಇಲಾಖೆಗಳ ಹುದ್ದೆ ಮಾಹಿತಿ ಈ ಕೆಳಗಿನಂತಿದೆ. ಇದರ ಅನುಸಾರ ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದಿಂದ ಕರೆಯಲಾಗಿರುವ ವಿವಿಧ ಇಲಾಖೆಗಳ ಹುದ್ದೆ ಮಾಹಿತಿ ಈ ಕೆಳಗಿನಂತಿದೆ. ಇದರ ಅನುಸಾರ ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

  • Share this:
    ರಾಜ್ಯ ಸರ್ಕಾರದ (Karnataka Government) ವಿವಿಧ ಹುದ್ದೆಗಳಲ್ಲಿ ಕಾಲ ಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಈ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಈಗಾಗಲೇ ಕೆಪಿಎಸ್​ಸಿ, ಬಿಬಿಎಂಪಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಕರೆಯಲಾಗಿರುವ ವಿವಿಧ ಇಲಾಖೆಗಳ ಹುದ್ದೆ ಮಾಹಿತಿ ಈ ಕೆಳಗಿನಂತಿದೆ. ಇದರ ಅನುಸಾರ ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

    ರಾಜ್ಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ (Directorate of Social Security and Pensions Karnataka) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್​ ಪ್ರೋಗ್ರಾಮರ್​ ಮತ್ತು ಜೂನಿಯರ್​ ಪ್ರೋಗ್ರಾಮರ್​ (Programmer Post) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ತಾಂತ್ರಿಕ ಪದವೀಧರ (Technical Graduates) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 12 ಆಗಿದೆ. (ಈ ಹುದ್ದೆಗಳ ಸಂಪೂರ್ಣ ವಿವರ ಪಡೆಯಲು ಕೆಳಗಿನ ಲಿಂಕ್​ ಅನ್ನು ಕ್ಲಿಕ್​ ಮಾಡಬಹುದಾಗಿದೆ)

    ಪಿಂಚಣಿ ನಿರ್ದೇಶನಾಲಯದಲ್ಲಿ ವಿವಿಧ ಪ್ರೋಗ್ರಾಮರ್​ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ 90000 ರೂ ವೇತನ

    ಕರ್ನಾಟಕ ಲೋಕ ಸೇವಾ ಆಯೋಗ (Karnataka Public Service Commission) ಗ್ರೂಪ್​ ಸಿ (Group C) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಆರ್ಧಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ಸಾಂಖ್ಯಿಕ ಅಧಿಕಾರಿಗಳ (Assistant Statistical Officer) ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೈದ್ರಾಬಾದ್​- ಕರ್ನಾಟಕ ವೃಂದದಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 30 ಆಗಿದೆ.

    ಕೆಪಿಎಸ್​ಸಿ ಗ್ರೂಪ್​ 'ಸಿ' ಹುದ್ದೆಗೆ ಅರ್ಜಿ ಸಲ್ಲಿಸಿ; ಇಲ್ಲಿದೆ ಸಂಪೂರ್ಣ ಮಾಹಿತಿ

    ಕರ್ನಾಟಕ ಲೋಕ ಸೇವಾ ಆಯೋಗದಿಂದ (Karnataka Public Service Commission) ರೇಷ್ಮೆ ಕೃಷಿ ವಿಸ್ತರಣಾ ಅಧಿಕಾರಿಗಳ (Sericulture Extension Officer) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 72 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಗ್ರೂಪ್​ 'ಬಿ'ಯ ಉಳಿಕೆ ವೃಂದದ ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 8 ಆಗಿದೆ. ಈ ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಕೆ ಸೇರಿದಂತೆ ಇತರೆ ಮಾಹಿತಿ ಈ ಕೆಳಗಿನಂತಿದೆ.

    72 ಗ್ರೂಪ್​ 'ಬಿ' ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ ಕೆಪಿಎಸ್​ಸಿ; ಇಲ್ಲಿದೆ ಉದ್ಯೋಗ ಮಾಹಿತಿ

    ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission) 30 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಮುಖ್ಯ ವಿದ್ಯುತ್​ ಪರಿವೀಕ್ಷಣಾಲಯದಲ್ಲಿ ಕಾರ್ಯ ನಿರ್ವಹಿಸಲು ಸಹಾಯಕ ವಿದ್ಯುತ್​ ಪರಿವೀಕ್ಷಕರ (Assistant Electrical Inspector) ನೇಮಕಾತಿಗೆ ಮುಂದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 23 ಆಗಿದೆ

    ಕೆಪಿಎಸ್​ಸಿಯಿಂದ ಸಹಾಯಕ ವಿದ್ಯುತ್​ ಪರಿವೀಕ್ಷಕರ ನೇಮಕಾತಿ; ಇಲ್ಲಿದೆ ಅರ್ಜಿ ಸಲ್ಲಿಕೆ ವಿವರ

    ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (Bruhat Bengaluru Mahanagara Palike) ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 940 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವೈದ್ಯರು, ದಾದಿಯರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ನಡೆಸಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್​ 10 ಮತ್ತು 11 ರಂದು ನಡೆಯುವ ಈ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.

    ಬಿಬಿಎಂಪಿಯಲ್ಲಿ ಬೃಹತ್​ ನೇಮಕಾತಿ; 940 ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ

    ವಿಶೇಷ ಸೂಚನೆ: ಮೇಲ್ಕಂಡ ಹುದ್ದೆಗಳ ಲಿಂಕ್​ಗಳನ್ನು ಕ್ಲಿಕ್​ ಮಾಡುವ ಮೂಲಕ ಆಯಾ ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ)
    Published by:Seema R
    First published: