JEE Main Result 2021: ಜೆಇಇ ಮೇನ್ ಫಲಿತಾಂಶ ಪ್ರಕಟ; ಕರ್ನಾಟಕದ ಗೌರಬ್ ದಾಸ್​ಗೆ First Rank ​

ಈ ಬಾರಿ ಜೆಇಇ ಪರೀಕ್ಷೆಯಲ್ಲಿ 44 ವಿದ್ಯಾರ್ಥಿಗಳ 100ಕ್ಕೆ ನೂರು ಅಂಕ​ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಇನ್ನು 18 ವಿದ್ಯಾರ್ಥಿಗಳು rank ​ ಪಡೆಯುವಲ್ಲಿ ಸಫಲರಾಗಿದ್ದಾರೆ.

File photo

File photo

  • Share this:
    ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು (JEE Mains Result 2021) ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದೆ. ಅಭ್ಯರ್ಥಿಗಳು ಇ ಅಧಿಕೃತ ವೆಬ್‌ಸೈಟ್, jeemain.nta.nic.in ಕ್ಲಿಕ್​ ಮಾಡುವ ಮೂಲಕ ಫಲಿತಾಂಶ ಪರಿಶೀಲಿಸಬಹುದಾಗಿದೆ. ಈ ಬಾರಿ ಜೆಇಇ ಪರೀಕ್ಷೆಯಲ್ಲಿ 44 ವಿದ್ಯಾರ್ಥಿಗಳ 100ಕ್ಕೆ ನೂರು ಅಂಕ​ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಇನ್ನು 18 ವಿದ್ಯಾರ್ಥಿಗಳು rank ​ ಪಡೆಯುವಲ್ಲಿ ಸಫಲರಾಗಿದ್ದಾರೆ. ಕರ್ನಾಟಕದ ಗೌರಬ್​ ದಾಸ್​ ಮೊದಲ rank ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇನ್ನು  ಪರೀಕ್ಷೆಯಲ್ಲಿ ಉತ್ತರ ಪ್ರದೇಶದ ಪಾಲ್​ ಅಗರ್ವಾಲ್​ ಮತ್ತು ದೆಹಲಿಯ ಕಾವ್ಯಾ ಚೋಪ್ರಾ ಎಂಬ ಯುವತಿಯರು ಕೂಡ ಮೊದಲ ಸ್ಥಾನ ಪಡೆದಿದ್ದಾರೆ.

    ಉಳಿದಂತೆ ಬಿಹಾರದ ವಿಶಾಲ್​, ಆಂಧ್ರ ಪ್ರದೇಶದ ದುಗ್ಗಿನೇನು ವೆಂಕಟ ಪನೀಶ್​, ರಾಜಸ್ಥಾನದ ಸಿದ್ಧಾಂತ್​ ಮುಖರ್ಜಿ, ಅಂಶುಲ್​ ವರ್ಮಾ ಮತ್ತು ಮೃದುಲ್​ ಅಗರ್ವಾಲ್​, ತೆಲಂಗಾಣದ ರುಚಿರ್​ ಬನ್ಸಾಲ್​, ಅಮಯ್ಯ ಸಿಂಘಾಲ್​ ಮತ್ತು ಕೊಮ್ಮಾ ಶರಣ್ಯಾ ಮತ್ತು ಜೋಯ್ಸುಲಾ ವೆಂಕಟ ಆದಿತ್ಯ, ಪಂಜಾಬ್​ನ ಪುಲ್ಕಿತ್​ ಗೋಯಲ್​ಮ ಚಂಡಿಗಢದ ಗುರುಮಿತ್ರ ಸಿಂಗ್​​ ಮೊದಲ rank ಪಡೆದಿದ್ದಾರೆ.

    ಫಲಿತಾಂಶ ನೋಡಲು ಈ ಕ್ರಮ ಅನುಸರಿಸಿ

    • jeemain.nta.nic.in. ಅಧಿಕೃತ ವೆಬ್​ ತಾಣಕ್ಕೆ ಭೇಟಿ ನೀಡಿ.

    • ವೆಬ್​ಸೈಟ್​ನ ಮುಖಪುಟದಲ್ಲಿ JEE Main Result 2021/ Scorecard ಅನ್ನು ಕ್ಲಿಕ್​​ ಮಾಡಿ

    • ಇದಾದ ಬಳಿಕ ವಿದ್ಯಾರ್ಥಿಯ ಅರ್ಜಿಯ ನಂಬರ್​ ಮತ್ತು ಹುಟ್ಟಿದ ದಿನಾಂಕವನ್ನು ಹಾಕಬೇಕು

    • ಬಳಿಕ ಸಬ್​ಮಿಟ್​ ಬಟನ್​ ಕ್ಲಿಕ್​ ಮಾಡಿದ ಬಳಿಕ ನಿಮ್ಮ ಫಲಿತಾಂಶ ಸ್ಕೀನ್​​ ಮೇಲೆ ಸಿಗಲಿದೆ.

    • ಬಳಿಕ ಆ ಫಲಿತಾಂಶದ ವಿವರವನ್ನು ಡೌನ್​​ಲೋಡ್ ಮಾಡಿಕೊಳ್ಳಬೇಕು.


    JEE Main 2021 ಫಲಿತಾಂಶವನ್ನು ಶೇಕಡಾವಾರು ಅಂಕ ಮತ್ತು ranks ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.

    ಜೆಇಇ ಮುಖ್ಯ ಫಲಿತಾಂಶವನ್ನು ಸೆಪ್ಟೆಂಬರ್ 10 ರಂದು ಪ್ರಕಟಿಸಲಾಗುವುದು ಎಂಬ ನಿರೀಕ್ಷೆ ಇತ್ತು. ಇದಕ್ಕಾಗಿ ವಿದ್ಯಾರ್ಥಿಗಳು ಕಾತುರಾಗಿದ್ದರು. ಆದರೆ ವಿಳಂಬಗೊಂಡು ಪ್ರಕಟವಾಗಿದ್ದು, ಈ ವಿಳಂಬಕ್ಕೆ ಕಾರಣ ಏನು ಎಂಬುದನ್ನು ಎನ್​ಟಿಎ ತಿಳಿಸಿಲ್ಲ.
    ಈ ಪರೀಕ್ಷೆ ಫಲಿತಾಂಶದ ವಿಳಂಬದಿಂದಾಗಿ ಜೆಇಇ ಅಡ್ವಾನ್ಸ್ಡ್​ ನೋಂದಣಿ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

    ಇದನ್ನು ಓದಿ: 21 ಅಭ್ಯರ್ಥಿಗಳ ಫಲಿತಾಂಶಕ್ಕೆ ತಡೆ; ಶೇ 19ರಷ್ಟು ಅಭ್ಯರ್ಥಿಗಳು ಉತ್ತೀರ್ಣ

    ಜೆಇಇ ಮುಖ್ಯ ಫಲಿತಾಂಶವನ್ನು ಸೆಪ್ಟೆಂಬರ್ 10 ರಂದು ಪ್ರಕಟಿಸಲಾಗುವುದು ಎಂಬ ನಿರೀಕ್ಷೆ ಇತ್ತು. ಇದಕ್ಕಾಗಿ ವಿದ್ಯಾರ್ಥಿಗಳು ಕಾತುರಾಗಿದ್ದರು. ಆದರೆ ವಿಳಂಬಗೊಂಡು ಪ್ರಕಟವಾಗಿದ್ದು, ಈ ವಿಳಂಬಕ್ಕೆ ಕಾರಣ ಏನು ಎಂಬುದನ್ನು ಎನ್​ಟಿಎ ತಿಳಿಸಿಲ್ಲ.
    ಈ ಪರೀಕ್ಷೆ ಫಲಿತಾಂಶದ ವಿಳಂಬದಿಂದಾಗಿ ಜೆಇಇ ಅಡ್ವಾನ್ಸ್ಡ್​ ನೋಂದಣಿ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

    ಇದನ್ನು ಓದಿ: ವಾಯು ಸೇನೆಯಲ್ಲಿ ಕೆಲಸ ಮಾಡುವ ಕನಸಿದ್ಯಾ? SSLC, PUC ಆದವರಿಗೂ ಇಲ್ಲಿದೆ ಉತ್ತಮ ಅವಕಾಶ

    ಜೆಇಇ ಮೇನ್ಸ್​ ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪದ ಮೇಲೆ ಏಳು ಮಂದಿಯನ್ನು ಸಿಬಿಐ ಬಂಧಿಸಿತ್ತು. ವಿದ್ಯಾರ್ಥಿಗಳ ಬದಲಾಗಿ ಬೇರೆ ವಿದ್ಯಾರ್ಥಿಗಳು 12 ರಿಂದ 15 ಲಕ್ಷ ಹಣ ಪಡೆದು ಪರೀಕ್ಷೆ ಬರೆಯಲು ಮುಂದಾಗಿದ್ದರು ಎಂಬುದು ತನಿಖೆ ವೇಳೆ ಬಯಲಾಗಿತ್ತು. ಈ ಬಾರಿ ಒಟ್ಟು 2, 52,954 ಅಭ್ಯರ್ಥಿಗಳು ಪರೀಕ್ಷೆ ಬರೆದಿದದರು. ನಾಲ್ಕನೇ ಸೆಷನ್​ ಪರೀಕ್ಷೆಗೆ ಸರಿ ಸುಮಾರು 10, 48,012 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 9,39,008 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು

    ವರ್ಷಕ್ಕೆ ನಾಲ್ಕು ಬಾರಿ ನಡೆಸಲಾಗುವ ಜೆಇಇ ಮೊದಲ ಪರೀಕ್ಷೆ ಫೆಬ್ರವರಿಯಲ್ಲಿ ನಡೆಸಲಾಗಿತ್ತು. ಎರಡನೇ ಪರೀಕ್ಷೆಗಳನ್ನು ಮಾರ್ಚ್ ತಿಂಗಳಲ್ಲಿ ನಡೆಸಲಾಗಿತ್ತು. ಮೂರನೇ ಮತ್ತು ನಾಲ್ಕನೆ ಪರೀಕ್ಷೆಗಳನ್ನು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಸಬೇಕಿತ್ತು. ಆದರೆ, ಕೊರೊನಾ ಸೋಂಕಿನ ಪರಿಣಾಮದಿಂದಾಗಿ ಆ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
    ಮೂರನೇ ಹಂತದ ಪರೀಕ್ಷೆಯನ್ನು ಕಳೆದ ಜುಲೈ 20 ರಿಂದ 25 ರವರೆಗೆ ನಡೆಸಲಾಗಿತ್ತು. ನಾಲ್ಕನೇ ಹಂತದ ಪರೀಕ್ಷೆಯನ್ನು ಆ.26 ರಿಂದ ಸೆ. 2ರವರೆಗೆ ನಡೆಸಲಾಗಿತ್ತು. ನಾಲ್ಕು ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.
    Published by:Seema R
    First published: