Govt Job Alert: ಮೀನುಗಾರಿಕೆ ಇಲಾಖೆಯಲ್ಲಿದೆ ಕೆಲಸ; ಅರ್ಜಿ ಸಲ್ಲಿಕೆಗೆ ಜು.30 ಕಡೆ ದಿನ

ಈ ಹುದ್ದೆಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರದ ಅನುದಾನ ಲಭ್ಯತೆ ಮೇರೆ ಮುಂದುವರೆಸಲಾಗುವುದು.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ರಾಜ್ಯದ ಮೀನುಗಾರಿಕೆ ಇಲಾಖೆಯಲ್ಲಿ (Fisheries Department) ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ (Matsya Sampada Yojana) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಉಪ ಯೋಜನಾ ವ್ಯವಸ್ಥಾಪಕ ಮತ್ತು ಜಿಲ್ಲಾ ಯೋಜನಾ ವ್ಯವಸ್ಥಾಪಕರು ಹಾಗೂ ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 30 ಆಗಿದೆ.

    ಈ ಹುದ್ದೆಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರದ ಅನುದಾನ ಲಭ್ಯತೆ ಮೇರೆ ಮುಂದುವರೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆ: ಮೀನುಗಾರಿಗೆ ನಿರ್ದೇಶನಾಯಕ
    ಹುದ್ದೆ: ರಾಜ್ಯ ಉಪ ಯೋಜನಾ ವ್ಯವಸ್ಥಾಪಕ, ಜಿಲ್ಲಾ ಯೋಜನಾ ವ್ಯವಸ್ಥಾಪಕರು ಹಾಗೂ ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ
    ಒಟ್ಟು ಹುದ್ದೆ : 3
    ಕಾರ್ಯ ನಿರ್ವಹಣೆ ಸ್ಥಳ: ಬೆಂಗಳೂರು
    ವೇತನ: 15000- 55000 ರೂ ಮಾಸಿಕ



























    ಹುದ್ದೆಹುದ್ದೆ ಸಂಖ್ಯೆವಯೋಮಿತಿವೇತನ
    ರಾಜ್ಯ ಉಪ ಯೋಜನಾ ವ್ಯವಸ್ಥಾಪಕ145 ವರ್ಷ55000 ರೂ ಮಾಸಿಕ
    ಜಿಲ್ಲಾ ಯೋಜನಾ ವ್ಯವಸ್ಥಾಪಕರು135 ವರ್ಷ45000 ರೂ ಮಾಸಿಕ
    ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ135 ವರ್ಷ15000 ರೂ ಮಾಸಿಕ

    ವಿದ್ಯಾರ್ಹತೆ ಮತ್ತು ಅನುಭವ

    ರಾಜ್ಯ ಉಪ ಯೋಜನಾ ವ್ಯವಸ್ಥಾಪಕ : ಮೀನುಗಾರಿಕಾ ವಿಜ್ಞಾನದಲ್ಲಿ ಸ್ನಾತಕೋತ್ತರ / ಸಾಗರ ಪ್ರಾಣಿಶಾಸ್ತ್ರದಲ್ಲಿ ಎಂಎಸ್ಸಿ ಮೀನುಗಾರಿಕೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.
    ಅನುಭವ: 5 ವರ್ಷ ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ಕೆಲಸ ಮಾಡಿದ ಅನುಭವ

    ಜಿಲ್ಲಾ ಯೋಜನಾ ವ್ಯವಸ್ಥಾಪಕರು: ಮೀನುಗಾರಿಕೆ ವಿಜ್ಞಾನದಲ್ಲಿ ಸ್ನಾತಕೋತ್ತರ/ಎಂ.ಎಸ್ಸಿ ಪ್ರಾಣಿಶಾಸ್ತ್ರ/ ಜೀವಶಾಸ್ತ್ರ/ಮೀನುಗಾರಿಕೆ ಅರ್ಥಶಾಸ್ತ್ರ/ಕೈಗಾರಿಕಾ ಮೀನುಗಾರಿಕೆಯಲ್ಲಿ ಸ್ನಾತಕೋತ್ತರ/ಮೀನುಗಾರಿಕೆ ವ್ಯವಹಾರ ನಿರ್ವಹಣೆ

    ಅನುಭವ: 3 ವರ್ಷ ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ಕೆಲಸ ಮಾಡಿದ ಅನುಭವ

    ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ: 10ನೇ ತರಗತಿ ಉತ್ತೀರ್ಣ
    ಅನುಭವ: 3 ವರ್ಷ ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ಕೆಲಸ ಮಾಡಿದ ಅನುಭವ

    ಇದನ್ನು ಓದಿ: ಕೆಪಿಎಸ್​ಸಿಯಿಂದ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 37900 ರೂ ವೇತನ

    ಅರ್ಜಿ ಸಲ್ಲಿಕೆ
    ಆಫ್​ಲೈನ್​
    ಅರ್ಜಿ ಶುಲ್ಕ : ವಿನಾಯಿತಿ

    ಆಯ್ಕೆ ಪ್ರಕ್ರಿಯೆ:
    ನೇಮಕಾತಿ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕ
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20 ಜೂನ್​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜುಲೈ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅರ್ಜಿ ಸಲ್ಲಿಕೆ ಪ್ರತಿಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್‌ಸೈಟ್: fisheries.karnataka.gov.in

    ಇದನ್ನು ಓದಿ: ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿದೆ ಉದ್ಯೋಗ; ತಿಂಗಳಿಗೆ 33,450 ರೂ ವೇತನ

    ಅರ್ಜಿ ಸಲ್ಲಿಕೆ ವಿಧಾನ

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸ್ಪೀಡ್​ ಪೋಸ್ಟ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ಈ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

    ಮೀನುಗಾರಿಕೆ ನಿರ್ದೇಶನಾಲಯ, 3ನೇ ಮಹಡಿ, ಪೋಡಿಯಂ ಬ್ಲಾಕ್​, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ.ಆರ್​ ಅಂಬೇಡ್ಕರ್​ ವೀಧಿ, ಬೆಂಗಳೂರು-560001
    Published by:Seema R
    First published: