• Home
  • »
  • News
  • »
  • jobs
  • »
  • KEA Recruitment: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ; ನೇರ ಸಂದರ್ಶನದಲ್ಲಿ ಭಾಗಿಯಾಗಿ

KEA Recruitment: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ; ನೇರ ಸಂದರ್ಶನದಲ್ಲಿ ಭಾಗಿಯಾಗಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ವಾಕ್​-ಇನ್​- ಇಂಟರವ್ಯೂನಲ್ಲಿ ಭಾಗಿಯಾಗಬಹುದಾಗಿದೆ. ಜೂನ್​ 10ರಂದು ನೇರ ಸಂದರ್ಶನ ನಡೆಯಲಿದೆ.

  • Share this:

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (Karnataka Examinations Authority) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆರು ಪ್ರೋಗ್ರಾಮರ್ (Programmer) ಹುದ್ದೆಗೆ ನೇಮಕಾತಿಗೆ ಮುಂದಾಗಲಾಗಿದೆ. ತಾಂತ್ರಿಕ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಆಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ವಾಕ್​-ಇನ್​- ಇಂಟರವ್ಯೂನಲ್ಲಿ ಭಾಗಿಯಾಗಬಹುದಾಗಿದೆ. ಜೂನ್​ 10ರಂದು ನೇರ ಸಂದರ್ಶನ ನಡೆಯಲಿದೆ.


    ಈ ಹುದ್ದೆಯನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಾಗುತ್ತಿದ್ದು, ಅಭ್ಯರ್ಥಿಯ ಕಾರ್ಯ ಕ್ಷಮತೆ ಆಧಾರದ ಮೇಲೆ ವಿಸ್ತರಣೆ ಮಾಡಲಾಗುವುದು. ಸಂದರ್ಶನದ ದಿನವೇ ಪ್ರಯೋಗಿಕ ಪರೀಕ್ಷೆ ಕೂಡ ನಡೆಸಲಾಗುವುದು. ಈ ಹುದ್ದೆಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇ ಮೇಲ್​​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

    ಹುದ್ದೆಹುದ್ದೆ ವಿವರ
    ಸಂಸ್ಥೆಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)
    ಹುದ್ದೆಪ್ರೋಗ್ರಾಮರ್
    ಹುದ್ದೆಗಳ ಸಂಖ್ಯೆ5
    ಉದ್ಯೋಗ ಸ್ಥಳ:ಬೆಂಗಳೂರು
    ವೇತನ1ಲಕ್ಷ ರೂ ಮಾಸಿಕ

    ವಿದ್ಯಾರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿ.ಇ ಅಥವಾ ಬಿ.ಟೆಕ್, ಎಂಸಿಎ, ಎಂಟೆಕ್​, ಎಂಎಸ್ಸಿ (ಸಿಎಸ್​/ಐಟಿ) ಪದವಿಯನ್ನು ಪಡೆದಿರಬೇಕು.


    ಅನುಭವದ ವಿವರಗಳು
    ಅಭ್ಯರ್ಥಿಗಳು DOT NET-C#, MS SQL ಸರ್ವರ್ DB, ವೆಬ್ ಸೇವೆಗಳು, WCF, SSRS ಮತ್ತು SSIS ನಲ್ಲಿ 02 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರಬೇಕು
    ವಯಸ್ಸಿನ ಮಿತಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು


    ವಯಸ್ಸಿನ ಸಡಿಲಿಕೆ:
    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳ ಪ್ರಕಾರ


    ಇದನ್ನು ಓದಿ: ಆನ್​ಲೈನ್​ ಶಾಪಿಂಗ್​ ತಾಣ ಮಿಂತ್ರಾದಲ್ಲಿ ಉದ್ಯೋಗ; ಬೇಗ ಅರ್ಜಿ ಸಲ್ಲಿಸಿ


    ಆಯ್ಕೆ ಪ್ರಕ್ರಿಯೆ
    ಪ್ರಾಯೋಗಿಕ ಪರೀಕ್ಷೆ ಮತ್ತು ಸಂದರ್ಶನ


    ಅರ್ಜಿ ಸಲ್ಲಿಕೆ
    ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, keaopportunities@gmail.com ಗೆ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಕಳುಹಿಸಬಹುದು. ಜೊತೆಗೆ ವಾಕ್​ ಇನ್​ ಇಂಟರ್​​ವ್ಯೂನಲ್ಲಿ ಭಾಗಿಯಾಗಬಹುದು


    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಜೂನ್​ 3, 2022
    ಪ್ರಾಯೋಗಿಕ ಪರೀಕ್ಷೆ ಮತ್ತು ವಾಕ್-ಇನ್ ಸಂದರ್ಶನದ ದಿನಾಂಕ: 10 ಜೂನ್​, 2022


    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: kea.kar.nic.in


    ಇದನ್ನು ಓದಿ: ನಿಮ್ಹಾನ್ಸ್​​​ನಲ್ಲಿ ನೇಮಕಾತಿ; ಮಾಸಿಕ 78 ಸಾವಿರ ರೂನಿಮ್ಹಾನ್ಸ್​​​ನಲ್ಲಿ ನೇಮಕಾತಿ; ಮಾಸಿಕ 78 ಸಾವಿರ ರೂ


    ಅರ್ಜಿ ಸಲ್ಲಿಕೆ ಪ್ರಕ್ರಿಯೆ
    -ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
    -ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
    ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಈ ಇಮೇಲ್ ವಿಳಾಸಕ್ಕೆ keaopportunities@gmail.com ಅಭ್ಯರ್ಥಿಗಳು ಮೇಲ್​ ಮಾಡಬೇಕಿದೆ. ಇ ಮೇಲ್​ ಅನ್ನು ಜೂನ್​ 23 ಒಳಗೆ ಮಾಡಬೇಕಿದೆ.


    ವಾಕ್​ ಇನ್​ ಇಂಟರ್ವ್ಯೂ ನಡೆಯುವ ಸ್ಥಳ
    ಜೂನ್ 10 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, 18ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು, ಕರ್ನಾಟಕ - 560012 ಇಲ್ಲಿ ನೇರ ಸಂದರ್ಶನ ನಡೆಯಲಿದೆ.

    Published by:Seema R
    First published: