Education Department Recruitment: ತಿಂಗಳಿಗೆ 75,000 ರೂ. ಸಂಬಳ: ಶಿಕ್ಷಣ ಇಲಾಖೆಯಲ್ಲಿ ಸಮಾಲೋಚಕರ ಹುದ್ದೆ ಖಾಲಿ

ಸಮಾಲೋಚಕರು (Consultant) ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

Karnataka Education Department Recruitment

Karnataka Education Department Recruitment

  • Share this:
ಉದ್ಯೋಗಾಕಾಂಕ್ಷಿಗಳಿಗೆ ಒಂದೊಳ್ಳೆ ಸುದ್ದಿ ಇಲ್ಲಿದೆ. ಕೆಲಸಕ್ಕಾಗಿ ಎದುರು ನೋಡುತ್ತಿರುವವರಿಗೆ ಅವಕಾಶದ ಬಾಗಿಲು ತೆರೆದಿದೆ.  ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು (Karnataka Education Department Recruitment 2022)  ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ನನ್ನ ಶಾಲೆ ನನ್ನ ಕೊಡುಗೆ ಕಾರ್ಯಕ್ರಮಕ್ಕಾಗಿ ಸಮಾಲೋಚಕರ ಹುದ್ದೆ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ. ಸಮಾಲೋಚಕರು (Consultant) ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

ಸಂಸ್ಥೆಯ ಹೆಸರು:  ಸಾರ್ವಜನಿಕ ಶಿಕ್ಷಣ ಇಲಾಖೆ
ಹುದ್ದೆಯ ಹೆಸರು:  ಸಮಾಲೋಚಕರು
ಹುದ್ದೆಗಳ ಸಂಖ್ಯೆ:  ನಿಗದಿಪಡಿಸಿಲ್ಲ
ಉದ್ಯೋಗ ಸ್ಥಳ: ಕರ್ನಾಟಕ
ವೇತನ: ಮಾಸಿಕ ರೂ.60,000 - 75,000 ವರೆಗೆವಿಭಾಗಮಾಹಿತಿ
ಶೈಕ್ಷಣಿಕ ಅರ್ಹತೆ:ಅರ್ಥಶಾಸ್ತ್ರ / ಸಮಾಜ ವಿಜ್ಞಾನ / ಅಭಿವೃದ್ಧಿ ಅಧ್ಯಯನ / ಸಮಾಜ ಕಾರ್ಯ / ಪಬ್ಲಿಕ್ ಪಾಲಿಸಿ ಅಥವಾ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು.
ವಯಸ್ಸಿನ ಮಿತಿ:ನಿಗದಿಪಡಿಸಿಲ್ಲ
ವಯಸ್ಸಿನ ಸಡಿಲಿಕೆ: ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇದೆ
ಅರ್ಜಿ ಸಲ್ಲಿಕೆ ವಿಧಾನ: ರೆಸ್ಯೂಮ್‌ ಜತೆಗೆ ಅರ್ಜಿ ಕವರ್ ಲೆಟರ್ ಅನ್ನು ಇಮೇಲ್ ಮಾಡಬೇಕು
ಇಮೇಲ್​ ವಿಳಾಸ: nsnksdpi2021@gmail.com

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಕಾರ್ಯಾನುಭವದ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ನಂತರ ಅವರಿಗೆ ಯಾವುದಾದರೂ ಒಂದು ಟಾಪಿಕ್ ನೀಡಲಿದ್ದು, ಅದರ ಕುರಿತು ಪ್ರೆಸೆಂಟೇಷನ್ ನೀಡಬೇಕು. ನಂತರ ಸಂದರ್ಶನ ನಡೆಸಿ, ಆಯ್ಕೆ ಮಾಡಲಾಗುತ್ತದೆ.

 ಇದನ್ನೂ ಓದಿ: Postal Jobs 2022: ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಅಂಚೆ ಇಲಾಖೆಯಲ್ಲಿ 1 ಲಕ್ಷ ಹುದ್ದೆಗಳು ಖಾಲಿ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-08-2022 ರ ಸಂಜೆ 05-30.

 ಅರ್ಜಿ ಸಲ್ಲಿಸಬೇಕಾದ ವಿಳಾಸ: nsnksdpi2021@gmail.com ಗೆ ಸಬ್ಜೆಕ್ಟ್‌ ಲೈನ್ - Application - Consultant - Private Sector Engagement, NSNK- ಎಂದು ಬರೆದು ಕಳುಹಿಸುವುದು.

ಇತರೆ ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ : 9448999422 (DPI), 9480518895 (SADPI), CPI Office.

ಇದನ್ನೂ ಓದಿ: Govt Job Alert: ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿದೆ ಉದ್ಯೋಗ: ಈ ವಾರದ ಟಾಪ್​ ಹುದ್ದೆಗಳ ಅಧಿಸೂಚನೆ ಇಲ್ಲಿದೆ

ಅರ್ಜಿ ಸಲ್ಲಿಕೆ ಪ್ರಕ್ರಿಯೆ
ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
Published by:Kavya V
First published: