Banking Jobs: ಕರ್ನಾಟಕ ಬ್ಯಾಂಕಿನಲ್ಲಿ ಚೀಫ್​ ಫೈನಾನ್ಸಿಯಲ್ ಆಫೀಸರ್ ಹುದ್ದೆ ಖಾಲಿ, ಈಗಲೇ Apply ಮಾಡಿ

ಫೆಬ್ರವರಿ 17ರಂದು ನೋಟಿಫಿಕೇಶನ್ ಬಿಡುಗಡೆಯಾಗಿದೆ. ಮಾರ್ಚ್ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಕರ್ನಾಟಕ ಬ್ಯಾಂಕ್

ಕರ್ನಾಟಕ ಬ್ಯಾಂಕ್

  • Share this:
Karnataka Bank Recruitment 2022: ಕರ್ನಾಟಕ ಬ್ಯಾಂಕ್ (Karnataka Bank) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಚೀಫ್​ ಫೈನಾನ್ಸಿಯಲ್ ಆಫೀಸರ್(Chief Financial Officer) ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮಂಗಳೂರಿನಲ್ಲಿ(Mangaluru) ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಫೆಬ್ರವರಿ 17ರಂದು ನೋಟಿಫಿಕೇಶನ್ ಬಿಡುಗಡೆಯಾಗಿದೆ. ಮಾರ್ಚ್ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ karnatakabank.com ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.ಸಂಸ್ಥೆಕರ್ನಾಟಕ ಬ್ಯಾಂಕ್​
ಹುದ್ದೆಯ ಹೆಸರುಚೀಫ್​ ಫೈನಾನ್ಸಿಯಲ್ ಆಫೀಸರ್
ವಿದ್ಯಾರ್ಹತೆಚಾರ್ಟರ್ಡ್​ ಅಕೌಂಟೆಂಟ್-CA
ವಯೋಮಿತಿ55 ವರ್ಷ
ವೇತನ ನಿಯಮಾನುಸಾರ
ಉದ್ಯೋಗದ ಸ್ಥಳಮಂಗಳೂರು
ನೋಟಿಫಿಕೇಶನ್ ಬಿಡುಗಡೆ ದಿನಾಂಕ17/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ08/03/2022

ವಿದ್ಯಾರ್ಹತೆ:
ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ/ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ CA (ಚಾರ್ಟರ್ಡ್ ಅಕೌಂಟೆಂಟ್) ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: BEL Recruitment 2022: BE/ B Tech ಪಾಸಾದವರಿಗೆ ಬೆಂಗಳೂರಿನಲ್ಲಿ ಉದ್ಯೋಗ, ಈಗಲೇ Apply ಮಾಡಿ

ವಯಸ್ಸಿನ ಮಿತಿ:
ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 55 ವರ್ಷ ಮೀರಿರಬಾರದು.

ಅನುಭವ:
ಅಭ್ಯರ್ಥಿಗಳು ಫೈನಾನ್ಸಿಯಲ್ ಆಪರೇಷನ್ಸ್​ನಲ್ಲಿ 15 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಇದನ್ನೂ ಓದಿ: Sainik School Mainpuri Recruitment: ಲ್ಯಾಬ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಹೀಗೆ ಅರ್ಜಿ ಸಲ್ಲಿಸಿ

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 17/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/03/2022

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಅರ್ಹತಾ ಮಾನದಂಡ
ಅನುಭವ
ವಿದ್ಯಾರ್ಹತೆ & ಸಂದರ್ಶನ
Published by:Latha CG
First published: