KEA Recruitment 2021: 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ; ಮತ್ತೊಮ್ಮೆ ದಿನಾಂಕ ವಿಸ್ತರಣೆ, Last Date ಯಾವಾಗ?

ಈ ಹುದ್ದೆಗಳಲ್ಲಿ ಶೇಕಡ.95 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಮತ್ತು ಶೇಕಡಾ 5 ರಷ್ಟು ಇಲಾಖೆಯ ಗ್ರೂಪ್‌ ಸಿ ವೃಂದದಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉದ್ದೇಶಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ(Government First Grade college) 1242  ಸಹಾಯಕ ಪ್ರಾಧ್ಯಾಪಕರ(Assistant Professors) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಮತ್ತೊಮ್ಮೆ  ದಿನಾಂಕ ವಿಸ್ತರಣೆ ಮಾಡಲಾಗಿದೆ. ಈ ಹಿಂದೆಯೇ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ(Competitive Exam) ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ(Karnataka Government) ಅಧಿಸೂಚನೆಯನ್ನು(Notification) ಹೊರಡಿಸಿತ್ತು. ಅದರಂತೆ ಮೊದಲು ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಬಳಿಕ ಅರ್ಜಿ ಸಲ್ಲಿಕೆ ದಿನಾಂಕವನ್ನು ನವೆಂಬರ್ 20ಕ್ಕೆ ವಿಸ್ತರಣೆ ಮಾಡಲಾಗಿತ್ತು. ಈಗ KEA ಪ್ರಕಟಣೆ ಹೊರಡಿಸಿ ಅರ್ಜಿ ಸಲ್ಲಿಕೆ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ. ಹೀಗಾಗಿ ಅರ್ಜಿ ಸಲ್ಲಿಸಲು ಇನ್ನು ಕೇವಲ ಒಂದು ವಾರವಷ್ಟೇ ಬಾಕಿ ಇದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(Karnataka Examination Authority) ವೆಬ್​ಸೈ ಟ್​ನಲ್ಲೂ ಸಹ ನೋಟಿಫಿಕೇಶನ್ ಬಿಡುಗಡೆಯಾಗಿದೆ. 2015ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳ ಲಭ್ಯವಿಲ್ಲದೇ ಭರ್ತಿಯಾಗಿರುವ 145 ಹುದ್ದೆಗಳನ್ನು ಒಳಗೊಂಡಂತೆ, ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.

ಇದನ್ನೂ ಓದಿ: Karnataka High Court Jobs: ಕರ್ನಾಟಕ ಹೈಕೋರ್ಟ್​ನಲ್ಲಿ ಖಾಲಿ ಇರುವ ಟೈಪಿಸ್ಟ್​ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರು, ಮೈಸೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರ್ಗಿ ಮತ್ತು ಮಂಗಳೂರಿನಲ್ಲಿ ನಡೆಸಲಾಗುವುದು.ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.ಹುದ್ದೆ ಮತ್ತು ನೇಮಕಾತಿ ವಿವರ:ಸಂಸ್ಥೆಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಹುದ್ದೆಸಹಾಯಕ ಪ್ರಾಧ್ಯಾಪಕ
ಒಟ್ಟು ಹುದ್ದೆಗಳು1242
ವಿದ್ಯಾರ್ಹತೆಸ್ನಾತಕೋತ್ತರ ಪದವಿ(Post Graduate) ಜತೆಗೆ, ಎನ್​ಇಟಿ(NET), ಕೆಸ್​ಇಟಿ(K-SET), ಪಿಹೆಚ್​​ಡಿ(Ph.D)
ವೇತನಮಾಸಿಕ ₹ 57700-1,82,400
ಅರ್ಜಿ ಸಲ್ಲಿಸಲು ಆರಂಭ ದಿನಾಂಕ01/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30/11/2021

ಈ ಕೆಳಕಂಡ ವಿಷಯಗಳಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯನ್ನು ನಡೆಸಲಾಗುತ್ತದೆ.
ಕನ್ನಡ
ಇಂಗ್ಲಿಷ್
ಹಿಂದಿ
ಉರ್ದು
ಇತಿಹಾಸ
ಅರ್ಥಶಾಸ್ತ್ರ
ರಾಜ್ಯಶಾಸ್ತ್ರ
ಸಮಾಜಶಾಸ್ತ್ರ
ಶಿಕ್ಷಣ ಶಾಸ್ತ್ರ
ಕಾನೂನು
ಸಮಾಜ ಕಾರ್ಯ
ಭೋಗೋಳ ಶಾಸ್ತ್ರ
ಭೂಗರ್ಭ ಶಾಸ್ತ್ರ
ವಾಣಿಜ್ಯ ಶಾಸ್ತ್ರ
ನಿರ್ವಹಣಾ ಶಾಸ್ತ್ರ
ಭೌತಶಾಸ್ತ್ರ
ರಸಾಯನ ಶಾಸ್ತ್ರ
ಜೈವಿಕ ರಸಾಯನ ಶಾಸ್ತ್ರ
ಗಣಿತ ಶಾಸ್ತ್ರ
ಸೂಕ್ಷ್ಮ ಜೀವಶಾಸ್ತ್ರ
ಪ್ರಾಣಿ ಶಾಸ್ತ್ರ
ಸಸ್ಯ ಶಾಸ್ತ್ರ
ಎಲೆಕ್ಟ್ರಾನಿಕ್ಸ್​
ಗಣಕ ವಿಜ್ಞಾನ
ಸಂಖ್ಯಾಶಾಸ್ತ್ರ
ಫ್ಯಾಶನ್ ಟೆಕ್ನಾಲಜಿ ವಿಯಷಗಳಿಗೆ ನೇಮಕಾತಿ ನಡೆಸಲಾಗುತ್ತದೆ.

ವಯೋಮಿತಿ:

ಕನಿಷ್ಠ 22 ವರ್ಷ- ಗರಿಷ್ಠ 40 ವರ್ಷ
2ಎ, 2ಬಿ, 3ಎ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ
ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ

ಅರ್ಜಿ ಸಲ್ಲಿಸುವ ವಿಧಾನ: 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್​ಸೈಟ್​​ https://kea.kar.nic.in ನಲ್ಲಿ ತೋರಿಸಿರುವ Assistant Professors Recruitment -2021 ಲಿಂಕ್​ನ್ನು ಆಯ್ಕೆ ಮಾಡಿ ಆನ್​ಲೈನ್​ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ: KSLU Recruitment 2021: ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಇತರೆ ಪ್ರವರ್ಗಗಳು(ಪ್ರವರ್ಗ-2ಎ/2ಬಿ/3ಎ/3ಬಿ)- 2000 ರೂ.
ಎಸ್​ಸಿ/ಎಸ್​ಟಿ ಮತ್ತು ಪ್ರವರ್ಗ-1- 1,000 ರೂ.

ಈ ಹುದ್ದೆಗಳಲ್ಲಿ ಶೇಕಡ.95 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಮತ್ತು ಶೇಕಡಾ 5 ರಷ್ಟು ಇಲಾಖೆಯ ಗ್ರೂಪ್‌ ಸಿ ವೃಂದದಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: