KAPL Recruitment 2021: ಕರ್ನಾಟಕ ಆ್ಯಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್(Karnataka Antibiotics and Pharmaceuticals Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 40 ಏರಿಯಾ ಮ್ಯಾನೇಜರ್(Area Manager), ಪ್ರೊಫೆಶನಲ್ ಸೇಲ್ಸ್ ರೆಪ್ರೆಸೆಂಟೇಟಿವ್(Professional Sales Representative), ರೀಜನಲ್ ಸೇಲ್ಸ್ ಮ್ಯಾನೇಜರ್(Regional sales Manager) ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳು KAPLನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನವೆಂಬರ್ 11ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ನವೆಂಬರ್ 18, 2021.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಕರ್ನಾಟಕ ಆ್ಯಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ |
ಹುದ್ದೆಯ ಹೆಸರು |
ಏರಿಯಾ ಮ್ಯಾನೇಜರ್, ಪ್ರೊಫೆಶನಲ್ ಸೇಲ್ಸ್ ರೆಪ್ರೆಸೆಂಟೇಟಿವ್, ರೀಜನಲ್ ಸೇಲ್ಸ್ ಮ್ಯಾನೇಜರ್ |
ಒಟ್ಟು ಹುದ್ದೆಗಳು |
40 |
ವಿದ್ಯಾರ್ಹತೆ |
ಪದವಿ |
ಉದ್ಯೋಗದ ಸ್ಥಳ |
ಬೆಂಗಳೂರು |
ವೇತನ |
ಮಾಸಿಕ ₹ 25,000-65,000 |
ಅರ್ಜಿ ಸಲ್ಲಿಸುವ ವಿಧಾನ |
ಆಫ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
11/11/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
18/11/2021 |
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆ್ಯಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನ ಅಧಿಕೃತ ವೆಬ್ಸೈಟ್
www.kaplindia.com ಗೆ ಭೇಟಿ ನೀಡಬಹುದು.
ಇದನ್ನೂ ಓದಿ: India Post Recruitment 2021: ಮಾಸಿಕ ವೇತನ ₹ 81,100, ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/11/2021
ಹುದ್ದೆಯ ವಿವರ:
- ಏರಿಯಾ ಮ್ಯಾನೇಜರ್- 09
- ಪ್ರೊಫೆಶನಲ್ ಸೇಲ್ಸ್ ರೆಪ್ರೆಸೆಂಟೇಟಿವ್- 29
- ರೀಜನಲ್ ಸೇಲ್ಸ್ ಮ್ಯಾನೇಜರ್ -02
- ಒಟ್ಟು 40
ವಿದ್ಯಾರ್ಹತೆ:
ಏರಿಯಾ ಮ್ಯಾನೇಜರ್, ಪ್ರೊಫೆಶನಲ್ ಸೇಲ್ಸ್ ರೆಪ್ರೆಸೆಂಟೇಟಿವ್, ರೀಜನಲ್ ಸೇಲ್ಸ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ನಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ:
- ಏರಿಯಾ ಮ್ಯಾನೇಜರ್- 35 ವರ್ಷ
- ಪ್ರೊಫೆಶನಲ್ ಸೇಲ್ಸ್ ರೆಪ್ರೆಸೆಂಟೇಟಿವ್- 28 ವರ್ಷ
- ರೀಜನಲ್ ಸೇಲ್ಸ್ ಮ್ಯಾನೇಜರ್- 50 ವರ್ಷ
ವೇತನ:
- ಏರಿಯಾ ಮ್ಯಾನೇಜರ್- ಮಾಸಿಕ ₹40,000
- ಪ್ರೊಫೆಶನಲ್ ಸೇಲ್ಸ್ ರೆಪ್ರೆಸೆಂಟೇಟಿವ್- ಮಾಸಿಕ ₹ 26,000
- ರೀಜನಲ್ ಸೇಲ್ಸ್ ಮ್ಯಾನೇಜರ್- ಮಾಸಿಕ ₹ 65,000
ಇದನ್ನೂ ಓದಿ: CRPF Recruitment 2021: ತಿಂಗಳಿಗೆ ₹ 85,000 ಸಂಬಳ, MBBS ಪದವೀಧರರಿಗೆ CRPFನಲ್ಲಿ ಉದ್ಯೋಗ
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ದಾಖಲಾತಿ ಪರಿಶೀಲನೆ
- ವೈಯಕ್ತಿಕ ಸಂದರ್ಶನ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ