ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಹುದ್ದೆಗೆ ಆಹ್ವಾನಿಸಲಾಗಿದೆ. 07 ಸರ್ವೆ ಸೂಪರ್ವೈಸರ್, ಸಿಎಡಿ ಆಪರೇಟರ್ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಲಾಗಿದೆ. ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಜೂನ್ 3 ಕಡೆಯ ದಿನಾಂಕವಾಗಿದೆ. ಅರ್ಜಿಯನ್ನು ಅಭ್ಯರ್ಥಿಗಳು ಆನ್ಲೈನ್ ಮೂಲಕ ಭರ್ತಿ ಮಾಡಿ ಬಳಿಕ ಪೋಸ್ಟ್ ಮೂಲಕ ಕಳುಹಿಸಬೇಕಿದೆ.
ಜಿಐಎಸ್ ಆಧಾರಿತ ಆಸ್ತಿ ಸಮೀಕ್ಷೆಗಾಗಿ ಜಿಲ್ಲೆಯ ಪ್ರಾಯೋಗಿಕ ಯೋಜನೆ ಅಡಿ ಸೂಪರ್ವೈಸರ್, ಸಿಎಡಿ ಹುದ್ದೆಗೆ 10 ತಿಂಗಳ ಗುತ್ತಿಗೆ ಆಧಾರದ ಮೇಲೆ ಇದರ ನೇಮಕಾತಿ ನಡೆಯಲಿದೆ.
ಸಂಸ್ಥೆಯ ಹೆಸರು: ಜಿಲ್ಲಾಧಿಕಾರಿ ಕಚೇರಿ ಕಲಬುರಗಿ (ಡಿಸಿ ಕಚೇರಿ ಕಲಬುರಗಿ)
ಹುದ್ದೆಗಳ ಸಂಖ್ಯೆ: 7
ಉದ್ಯೋಗ ಸ್ಥಳ: ಕಲಬುರಗಿ - ಕರ್ನಾಟಕ
ಹುದ್ದೆಯ ಹೆಸರು: ಸರ್ವೆ ಮೇಲ್ವಿಚಾರಕರು, ಸಿಎಡಿ ಆಪರೇಟರ್
ವೇತನ: ರೂ.50000-60000 ರೂ ಪ್ರತಿ ತಿಂಗಳು
ಹುದ್ದೆ |
ಹುದ್ದೆ ಸಂಖ್ಯೆ |
ವಿದ್ಯಾರ್ಹತೆ |
ಸರ್ವೆ ಮೇಲ್ವಿಚಾರಕರು |
1 |
ಬಿಇ (ಸಿವಿಲ್) |
ಸಿಎಡಿ ಆಪರೇಟರ್ |
6 |
ಐಟಿಐ/ಡಿಪ್ಲೋಮಾ |
ವಯೋಮಿತಿ: ಜಿಲ್ಲಾಧಿಕಾರಿ ಕಚೇರಿ ನೇಮಕಾತಿ ಅಧಿಸೂಚನೆಯ ನಿಯಮಗಳ ಅನುಸಾರ.
ವಯೋಮಿತಿ ಸಡಿಲಿಕೆ:
ಜಿಲ್ಲಾಧಿಕಾರಿ ಕಚೇರಿ ಕಲಬುರಗಿ ನಿಯಮಾವಳಿ ಪ್ರಕಾರ
ಆಯ್ಕೆ ಪ್ರಕ್ರಿಯೆ
ಅರ್ಹತೆ, ಅನುಭವ ಮತ್ತು ವೈವಾ ಸಂದರ್ಶನ
ಅರ್ಜಿ ಸಲ್ಲಿಕೆ
ಆನ್ಲೈನ್ ಮತ್ತು ಆಫ್ಲೈನ್
ಇದನ್ನು ಓದಿ: ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ: ಯಾವುದೇ ಲಿಖಿತ ಪರೀಕ್ಷೆ ಇಲ್ಲ
ಪ್ರಮುಖ ದಿನಾಂಕಗಳು
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 24, 2022
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 3, 2022
ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್:
ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮೂನೆ - ಸಮೀಕ್ಷೆ ಮೇಲ್ವಿಚಾರಕರು:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
kalaburagidudc.mrc.gov.in
ಅರ್ಜಿ ಜೊತೆ ಲಗತ್ತಿಸಬೇಕಾದ ವಿವರ
- ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್
- ಇಂಜಿನಿಯರಿಂಗ್ ಪದವಿಯ ಎಲ್ಲಾ ಸೆಮಿಸ್ಟರ್/ವರ್ಷದ ಮಾರ್ಕ್ಸ್ ಕಾರ್ಡ್ಗಳು
- ಘಟಿಕೋತ್ಸವ ಪ್ರಮಾಣಪತ್ರ
- ಅನುಭವ ಪ್ರಮಾಣಪತ್ರ
- ವಿಳಾಸ ಪುರಾವೆಗಾಗಿ ಆಧಾರ/ವೋಟರ್ ಐಡಿ/ರೇಷನ್ ಕಾರ್ಡ್
- 2ಪಾಸ್ಪೋರ್ಟ್ ಗಾತ್ರದ ಫೋಟೋ
- ಸ್ವಯಂ ವಿಳಾಸದ ದೃಢೀಕರಣ
ಇದನ್ನು ಓದಿ: 286 ಹೆಡ್ ಕಾನ್ಸ್ಟೇಬಲ್, ಎಎಸ್ಐ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಿಎಂಡಿ ಹುದ್ದೆಗೆ ಲಗತ್ತಿಸಬೇಕಾದ ವಿವರ
-ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್
- ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಅಥವಾ ಐಟಿಐಯ ಎಲ್ಲಾ ಸೆಮಿಸ್ಟರ್/ವರ್ಷದ ಮಾರ್ಕ್ಸ್ ಕಾರ್ಡ್ಗಳು
- ಸಿಎಡಿ ಸಾಫ್ಟ್ವೇರ್ ಕೆಲಸದ ಅನುಭವ ಪ್ರಮಾಣಪತ್ರ
- ಸಿಎಡಿ ಸಾಫ್ಟ್ವೇರ್ ತರಬೇತಿ ಪ್ರಮಾಣಪತ್ರ
- ವಿಳಾಸ ಪುರಾವೆಗಾಗಿ ಆಧಾರ/ವೋಟರ್ ಐಡಿ/ರೇಷನ್ ಕಾರ್ಡ್
- 2 ಪಾಸ್ಪೋರ್ಟ್ ಗಾತ್ರದ ಫೋಟೋ
ಸ್ವಯಂ ವಿಳಾಸದ ದೃಢೀಕರಣ
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
ಬಳಿಕ ಮೇಲ್ಕಂಡ ವಿವರಗಳನ್ನು ಅರ್ಜಿ ಜೊತೆ ಲಗತ್ತಿಸಿ ಕೆಳಕಂಡ ವಿಳಾಸಕ್ಕೆ ತಲುಪಿಸಬೇಕು.
ಯೋಜನಾ ನಿರ್ದೇಶಕರು, DUDC, ಕೊಠಡಿ ಸಂಖ್ಯೆ 11, 1 ನೇ ಮಹಡಿ, ಮಿನಿವಿಧಾನ ಸೌಧ, ಮುಖ್ಯ ರಸ್ತೆ ಕಲಬುರಗಿ - 585102 ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ