DRDO Recruitment 2021: ಮೈಸೂರಿನಲ್ಲಿ JRF & RA ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ಸಂಬಳ ₹54,000

ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಗಮನಿಸಿ. ಈ ಜಾಹೀರಾತಿನಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಟೈಪ್ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಬೇಕು. 

ಡಿಆರ್​ಡಿಒ

ಡಿಆರ್​ಡಿಒ

  • Share this:
ರಕ್ಷಣಾ ಆಹಾರ ಸಂಶೋಧನೆ ಪ್ರಯೋಗಾಲಯ(Defence Food Research Laboratory- DFRL) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು(Defence Research and Development Organisation- DRDO) ಜೂನಿಯರ್ ರಿಸರ್ಚ್ ಫೆಲೋ(Junior Research Fellow) ಮತ್ತು ರಿಸರ್ಚ್ ಅಸೋಸಿಯೇಟ್ (Research Associate) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಆಸಕ್ತರು ಜಾಹೀರಾತು ಹೊರಡಿಸಿದ ದಿನಾಂಕದಿಂದ 30 ದಿನದೊಳಗೆ ಅರ್ಜಿ ಸಲ್ಲಿಸಬೇಕು. ಎಂ.ಎಸ್ಸಿ, ಎಂಇ/ಎಂ.ಟೆಕ್​​ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದೇ ಅ.5ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

DRDO JRF & RA Recruitment 2021:





















ಮಂಡಳಿ ಹೆಸರು

ರಕ್ಷಣಾ ಆಹಾರ ಸಂಶೋಧನೆ ಪ್ರಯೋಗಾಲಯ(DFRL) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು(DRDO)


ಹುದ್ದೆಯ ಹೆಸರು

ಜೂನಿಯರ್ ರಿಸರ್ಚ್ ಫೆಲೋ & ರಿಸರ್ಚ್ ಅಸೋಸಿಯೇಟ್


ಒಟ್ಟು ಹುದ್ದೆಗಳು

05


ಕೊನೆಯ ದಿನಾಂಕ

31/10/2021





ಡಿಆರ್​ಡಿಒ ಹುದ್ದೆಗಳ ಮಾಹಿತಿ:

ಜೂನಿಯರ್ ರಿಸರ್ಚ್ ಫೆಲೋ- 04

ರಿಸರ್ಚ್ ಅಸೋಸಿಯೇಟ್-01



ವಿದ್ಯಾರ್ಹತೆ:

  • ಜೆಆರ್​​ಎಫ್- ಎಂ.ಎಸ್ಸಿ/ಎಂ.ಟೆಕ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ, & NET/GATE ಪಾಸಾಗಿರಬೇಕು.

  • ರಿಸರ್ಚ್ ಅಸೋಸಿಯೇಟ್: ಪಿಎಚ್​ಡಿ ಅಥವಾ ತತ್ಸಮಾನ ಪದವಿ/ ಎಂ.ಎಸ್ಸಿ/ಎಂಇ/ಎಂ.ಟೆಕ್ ಬಳಿಕ 3 ವರ್ಷಗಳ ಸಂಶೋಧನೆ, ಬೋಧನೆ ಮತ್ತು ವಿನ್ಯಾಸ & ಅಭಿವೃದ್ಧಿ ಅನುಭವ ಹೊಂದಿರುವ ವಿಜ್ಞಾನ ಉಲ್ಲೇಖದ ಸೂಚ್ಯಂಕ(SCI) ಜರ್ನಲ್​ನಲ್ಲಿ ಕನಿಷ್ಠ ಒಂದು ಸಂಶೋಧನಾ ಪ್ರಬಂಧ ಮಂಡಿಸಿರಬೇಕು.


ವಯೋಮಿತಿ:

  • ಜೆಆರ್​ಎಫ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 28 ವರ್ಷ ವಯಸ್ಸಾಗಿರಬೇಕು.

  • ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಆಗಿರಬೇಕು.

  • ಸರ್ಕಾರದ ನಿಯಮದ ಪ್ರಕಾರ, ಎಸ್​ಸಿ, ಎಸ್​ಟಿ ವರ್ಗಕ್ಕೆ 5 ವರ್ಷ ಸಡಿಲಿಕೆ ಹಾಗೂ ಒಬಿಸಿ ವರ್ಗದವರಿಗೆ 3 ವರ್ಷ ಸಡಿಲಿಕೆ ಇರುತ್ತದೆ.


ಸಂಬಳ:

  • ಜೆಆರ್​ಎಫ್​ ಹುದ್ದಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹31,000 ಸ್ಟೇಫಂಡ್ ನೀಡಲಾಗುತ್ತದೆ.

  • ಅಂತೆಯೇ ರಿಸರ್ಚ್​​​ ಅಸೋಸಿಯೇಟ್ ಹುದ್ದೆಗೆ ಮಾಸಿಕ ₹54,000 ನೀಡಲಾಗುತ್ತದೆ.




ಡಿಆರ್​ಡಿಒ/ ಡಿಎಫ್​​​ಆರ್​​ಎಲ್​ ಆಯ್ಕೆ ಪ್ರಕ್ರಿಯೆ:

ಶಾರ್ಟ್​ ಲಿಸ್ಟ್​ ಮಾಡಿದ ಅಭ್ಯರ್ಥಿಗಳನ್ನು ಲಿಖೀತ ಪರೀಕ್ಷೆ/ ಸಂದರ್ಶನಕ್ಕೆ ಕರೆಯಲಾಗುತ್ತದೆ. ಡಿಫೆನ್ಸ್​ ಫುಡ್ ರಿಸರ್ಚ್ ಲ್ಯಾಬೊರೇಟರಿ, ಮೈಸೂರು- ಇಲ್ಲಿಗೆ ಶಾರ್ಟ್​ ಲಿಸ್ಟ್​ ಆದ ಅಭ್ಯರ್ಥಿಗಳು ಸಂದರ್ಶನಕ್ಕೆ ಬರಬೇಕು. ಮಾಹಿತಿಯನ್ನು ಇ-ಮೇಲ್/ಸ್ಪೀಡ್ ಪೋಸ್ಟ್​ ಮೂಲಕ ಕಳುಹಿಸಲಾಗುತ್ತದೆ. ಸಂದರ್ಶನ/ ಪರೀಕ್ಷೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಟಿಎ/ಡಿಎ ನೀಡಲಾಗುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?

ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಗಮನಿಸಿ. ಈ ಜಾಹೀರಾತಿನಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಟೈಪ್ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಬೇಕು.

ನಿರ್ದೇಶಕರಿಗೆ, ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ, ಸಿದ್ದಾರ್ಥನಗರ, ಮೈಸೂರು-570011 ಗೆ ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಸಲ್ಲಿಸಬೇಕು. ಕೊರಿಯರ್ ಮೂಲಕ ಕಳುಹಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿಗಳನ್ನು ಒಳಗೊಂಡಿರುವ ಲಕೋಟೆಯನ್ನು(ಎನ್ವಲಪ್) ಜೂನಿಯರ್ ರಿಸರ್ಚ್ ಫೆಲೋಸ್ ಮತ್ತು ರಿಸರ್ಚ್ ಅಸೋಸಿಯೇಟ್ ನೇಮಕಾತಿಯಂತೆ ಸೂಪರ್ ಸ್ಕ್ರಿಬ್ ಮಾಡಬಹುದು.
Published by:Latha CG
First published: