Jobs in KUD: ಕರ್ನಾಟಕ ವಿಶ್ವವಿದ್ಯಾಲಯದಲ್ಲಿದೆ ಜೆಆರ್​ಎಫ್​ ಹುದ್ದೆ; ಸೆ. 10 ಅರ್ಜಿ ಸಲ್ಲಿಕೆಗೆ ಕಡೆಯ ದಿನ

ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ (Karnataka University Dharwad- KUD) ಜ್ಯೂನಿಯರ್​ ರಿಸರ್ಚ್​ ಫೆಲೋ (Junior Research Fellow-JRF)  ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ನೇಮಕಾತಿ ಕಾರವಾರದಲ್ಲಿ ನಡೆಯಲಿದೆ. ಮೀನುಗಾರಿಕೆ ವಿಷಯದಲ್ಲಿ ಸಂಶೋಧನೆ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಇಮೇಲ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 10 ಆಗಿದೆ.

    ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆಗಳ ಮಾಹಿತಿಹುದ್ದೆ ವಿವರ
    ವಿಶ್ವವಿದ್ಯಾಲಯದ ಹೆಸರುಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (ಕೆಯುಡಿ)
    ಹುದ್ದೆಜೂನಿಯರ್ ರಿಸರ್ಚ್ ಫೆಲೋ (JRF)
    ಹುದ್ದೆಗಳ ಸಂಖ್ಯೆ1
    ಕಾರ್ಯ ನಿರ್ವಹಣೆ ಸ್ಥಳಕಾರವಾರ
    ವೇತನ25000 ರೂ ಮಾಸಿಕ

    ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಸಾಗರ ಜೀವಶಾಸ್ತ್ರ, ಸಾಗರ ವಿಜ್ಞಾನ  ಅಥವಾ  ಮೀನುಗಾರಿಕೆ ವಿಜ್ಞಾನದಲ್ಲಿ ಎಂಎಸ್ಸಿ ಪೂರ್ಣಗೊಳಿಸಿರಬೇಕು.

    ಇದನ್ನು ಓದಿ: ಐಟಿಐ, ಡಿಪ್ಲೊಮಾ ಆದವರಿಗೆ ಬಿಇಎಲ್​ನಲ್ಲಿದೆ ಕೆಲಸದ ಅವಕಾಶ; ಇಲ್ಲಿದೆ ಉದ್ಯೋಗ ಮಾಹಿತಿ

    ವಯೋಮಿತಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು KUD ನೇಮಕಾತಿ ನಿಯಮಗಳ ಪ್ರಕಾರ ಇರಬೇಕು.

    ಅರ್ಜಿ ಸಲ್ಲಿಕೆ: ಇಮೇಲ್​​ ಮತ್ತು ಆಫ್​ಲೈನ್​

    ಇಮೇಲ್​ ವಿಳಾಸ:  jagannathrathod@kud.ac.in

    ಅರ್ಜಿ ಸಲ್ಲಿಕೆ ವಿಳಾಸ
    ಡಾ. ಜೆ.ಎಲ್. ರಾಥೋಡ್ ಪಿ.ಐ, ಸಾಗರ ಜೀವಶಾಸ್ತ್ರದ ಅಧ್ಯಯನ ವಿಭಾಗ, ಕೆಯುಪಿಜಿ ಕೇಂದ್ರ, ಕಾರವಾರ – 581303

    ಇದನ್ನು ಓದಿ: ಭಾರತೀಯ ಸೇನೆಯಲ್ಲಿ 3068 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಎಸ್​ಎಸ್​ಎಲ್​ಸಿ ಆಗಿದ್ರೆ ಸಾಕು

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 30 ಆಗಸ್ಟ್​​ 2022
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್​2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: kud.ac.in

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    - ಅಧಿಕೃತ ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ನೀಡಿ. ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ ಮೇಲಿನ ಇಮೇಲ್​ ವಿಳಾಸ ಅಥವಾ ಅಂಚೆ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ಅರ್ಜಿ ಸಲ್ಲಿಸಿ.
    Published by:Seema R
    First published: